ಚಂದ್ರಯಾನ-4 ಭಾರತದ ಈವರೆಗಿನ ಅತ್ಯಂತ ಸಂಕೀರ್ಣ ಮಿಷನ್ ಆಗಿದ್ದು, ಇದೊಂದೇ ಯೋಜನೆಯಲ್ಲಿ ಬಹು ಉಡಾವಣೆಗಳು ಮತ್ತು ಬಾಹ್ಯಾಕಾಶ ನೌಕೆ ಮಾಡ್ಯುಲ್ಗಳನ್ನು ಒಳಗೊಂಡಿದೆ. ವಿಭಿನ್ನ ಪೇಲೋಡ್ಗಳನ್ನು ಸಾಗಿಸಲು ಎರಡು ಪ್ರತ್ಯೇಕ ರಾಕೆಟ್ಗಳನ್ನು ಉಡಾವಣೆ ಮಾಡಲು ಇಸ್ರೋ ಯೋಜಿಸಿ
ನವದೆಹಲಿ (ಮೇ.13): ಚಂದ್ರಯಾನ-3ಯ ದೊಡ್ಡ ಮಟ್ಟದ ಯಶಸ್ಸು ಭಾರತದ ಬಾಹ್ಯಾಕಾಶ ಕಾರ್ಯಕ್ರಮಕ್ಕರ ಹೊಸ ಉತ್ಸಾಹ ನೀಡಿದೆ. ಇದರ ಬೆನ್ನಲ್ಲಿಯೇ ಚಂದ್ರಯಾನ ಯೋಜನೆಯ ಮುಂದಿನ ಭಾಗವಾಗಿರುವ ಚಂದ್ರಯಾನ-4ನಲ್ಲಿ ಲ್ಯಾಂಡರ್ ಚಂದ್ರನ ಯಾವ ಭಾಗದಲ್ಲಿ ಲ್ಯಾಂಡ್ ಆಗಲಿದೆ ಎನ್ನುವ ಮಾಹಿತಿಯನ್ನು ಸ್ಯಾಕ್ ಅಂದರೆ ಸ್ಪೇಸ್ ಅಪ್ಲಿಕೇಶನ್ ಸೆಂಟರ್ನ ನಿರ್ದೇಶಕ ನಿಲೇಶ್ ದೇಸಾಯಿ ಘೋಷಣೆ ಮಾಡಿದ್ದಾರೆ. ಭಾರತದ ಬಹುನಿರೀಕ್ಷಿತ ಚಂದ್ರಯಾನ-4 ಯೋಜನೆಯು ಚಂದ್ರನ ಕಲ್ಲುಗಳು ಹಾಗೂ ಮಣ್ಣನ್ನು ಭೂಮಿಗೆ ವಾಪಾಸ್ ತರಲಿದೆ. ಈ ನೌಕೆಯು ಚಂದ್ರಯಾನ-3ಯ ವಿಕ್ರಮ್ ಲ್ಯಾಂಡರ್ ಇಳಿದ ಶಿವಶಕ್ತಿ ಪಾಯಿಂಟ್ನ ಅತ್ಯಂತ ಸನಿಹದಲ್ಲಿಯೇ ಇಳಿಯಲಿದೆ ಎಂದು ನಿಲೇಶ್ ದೇಸಾಯಿ ತಿಳಿಸಿದ್ದಾರೆ. ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ (ಇಸ್ರೋ) ಭವಿಷ್ಯದ ಚಂದ್ರನ ಪರಿಶೋಧನಾ ಯೋಜನೆಗಳ ಕುರಿತು ದೇಸಾಯಿ ಅವರು ಇತ್ತೀಚಿನ ಪ್ರೆಸೆಂಟೇಷನ್ನ ವೇಳೆ ಈ ಮಾಹಿತಿಯನ್ನು ಬಹಿರಂಗಪಡಿಸಲಾಗಿದೆ.
ಚಂದ್ರಯಾನ-3ಯ ವಿಕ್ರಮ್ ಲ್ಯಾಂಡರ್ ಇಳಿದ ಸ್ಥಳವಾಗಿರುವ ಶಿವಶಕ್ತಿ ಪಾಯಿಂಟ್. ಚಂದ್ರನ ದಕ್ಷಿಣ ಧ್ರುವದ ಸಮೀಪ ಜಲಜನಕದ ಮಂಜುಗಡ್ಡೆಯನ್ನು ಆಶ್ರಯಿಸಿರುವ ಪ್ರದೇಶವಾಗಿದೆ. ಅದಲ್ಲದೆ, ಈ ಪ್ರದೇಶದಲ್ಲಿ ಶಾಸ್ವತವಾಗಿ ನೆರಳಿನ ಉಪಸ್ಥಿತಿ ಇರುವ ಕಾರಣ ಗಮನಾರ್ಹ ವೈಜ್ಞಾನಿಕ ಆಸಕ್ತಿಯ ತಾಣವಾಗಿದೆ.
ಈ ಪ್ರದೇಶದ ಬಳಿ ಲ್ಯಾಂಡ್ ಮಾಡುವ ಮೂಲಕ, ಚಂದ್ರಯಾನ-4 ಈ ವೈಜ್ಞಾನಿಕವಾಗಿ ಮೌಲ್ಯಯುತವಾದ ಪ್ರದೇಶಗಳಿಂದ ಮಾದರಿಗಳನ್ನು ಅಧ್ಯಯನ ಮಾಡಲು ಮತ್ತು ಅವುಗಳನ್ನು ಭೂಮಿಗೆ ವಾಪಾಸ್ ತರುವ ಅವಕಾಶವನ್ನು ಹೊಂದಿರುತ್ತದೆ. ಮಿಷನ್ ಒಂದು ಚಂದ್ರನ ದಿನದ ಕಾರ್ಯಾಚರಣೆಯ ಜೀವನವನ್ನು ಹೊಂದಿರುತ್ತದೆ, ಇದು ಸರಿಸುಮಾರು 14 ಭೂಮಿಯ ದಿನಗಳು ಎಂದು ದೇಸಾಯಿ ಹೇಳಿದ್ದಾರೆ. ಚಂದ್ರನ ಮೇಲ್ಮೈಯಲ್ಲಿರುವ ಕಠಿಣ ಪರಿಸ್ಥಿತಿಗಳ ಕಾರಣದಿಂದಾಗಿ ಈ ಸೀಮಿತ ಅವಧಿಗಳ ಕಾಲ ಕಾರ್ಯಾಚರಣೆ ನಡೆಯಲಿದೆ. ಚಂದ್ರನ ರಾತ್ರಿಯಲ್ಲಿ ತೀವ್ರತರವಾದ ತಾಪಮಾನದ ವ್ಯತ್ಯಾಸಗಳು ಉಂಟಾಗುತ್ತದೆ. ಸೂರ್ಯ ಬೆಳಕಿನ ಕೊರತೆಯಿಂದಾಗಿ ದೀರ್ಘಾವಧಿ ಕಾರ್ಯಾಚರಣೆಗಳಿಗೆ ಗಮನಾರ್ಹ ಸವಾಲುಗಳು ಎದುರಾಗುತ್ತದೆ.