ಯಾದಗಿರಿ ಜಿಲ್ಲೆಯ ಹುಣಸಗಿ ತಾಲ್ಲೂಕಿನ ಬೈಲಕುಂಟಿ ಗ್ರಾಮ ಪಂಚಾಯತ್ತಿಯ ಗ್ರಾಮ ಸಭೆ – ಗ್ರಾಮಸ್ಥರಿಂದ ಬಹಿಷ್ಕಾರ
ಹುನಸಗಿ ತಾಲ್ಲೂಕಿನ ಸಮೀಪದ ಗ್ರಾಮವಾದ ಬೈಲಕುಂಟಿಯಲ್ಲಿ ಇಂದು ಲೆಕ್ಕ ಪರಿಶೋಧನೆ (ಸೋಶಲ್ ಆಡಿಟ್) ಗ್ರಾಮ ಸಭೆ ಆಂಜನೇಯ ದೇವಾಲಯದ ಆವರಣದಲ್ಲಿ ನಡೆಯಿತು. 2023-2024 ಸಾಲಿನ ನೆರೇಗಾ ಕಾಮಗಾರಿಯ ಲೆಕ್ಕ ಪರಿಶೋಧನೆಯ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನೀಡುವ ಸಭೆ ಇದಾಗಿತ್ತು.
ಸಭೆಯಲ್ಲಿ ಪರಿಚರಿಸಿದಂತೆ, ಜನರು ಆಕ್ರೋಶ ವ್ಯಕ್ತಪಡಿಸಿದರು. “ಕಾಮಗಾರಿಯೇ ನಡೆದಿಲ್ಲ, ನೀವು ನೀಡಿದ ವಿವರಗಳು ಸುಳ್ಳು,” ಎಂದು ಜನರು ಸಭೆಯ ವ್ಯವಸ್ಥಾಪಕ ಸಿದ್ದನಗೌಡರಿಗೆ ಪ್ರಶ್ನೆಗಳನ್ನು ಮಾಡಿದರು. “ನಡೆದಿದ್ದರೆ ನೋಡ್ತೇವೆ,” ಎಂಬ ಉತ್ತರದಿಂದ ಜನರ ಆಕ್ರೋಶ ಮತ್ತಷ್ಟು ಹೆಚ್ಚಾಯಿತು.
ಸೋಶಲ್ ಆಡಿಟ್ನ ವೇಳೆ ಜನರ ಪ್ರತಿಭಟನೆ:
ನೋಡಲ್ ಅಧಿಕಾರಿ ಶ್ರುತಿ, ಸಮಾಜ ಕಲ್ಯಾಣ ಅಧಿಕಾರಿಯವರಿಗೂ ಮಾಹಿತಿ ನೀಡದೇ, ಸಿದ್ದನಗೌಡ ಗ್ರಾಮ ಸಭೆ ನಡೆಸಿದರೆ, ಜನರಲ್ಲಿ ಆಕ್ರೋಶ ಉಂಟಾಯಿತು. PDO ಸೋಮಶೇಖರ್ ಸಿಂಪಿರವರೇ ಬಂಜಾರ ಸಮಾಜದ ಕಾರ್ಮಿಕರನ್ನು ಬಲವಂತವಾಗಿ ಕರೆದು ತಂದಿದ್ದು, ಮಹಿಳೆಯರು ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದರು.
ಸಭೆಯ ಗೊಂದಲ:
ಗ್ರಾಮ ಸಭೆಯ ಸಂದರ್ಭದಲ್ಲಿ, PDO ಸೋಮಶೇಖರ್ ಸಿಂಪಿರವರ ನಡೆ ಮತ್ತು ಗ್ರಾಮ ಸಭೆಗೆ ನೂಡಲ್ ಆಫೀಸರ್ ಆಗಬೇಕಿದ್ದ ಶ್ರುತಿ ಮೇಡಂ ಭಾಗವಹಿಸದಿರುವ ಬಗ್ಗೆ ಗ್ರಾಮಸ್ಥರು ಹಲವಾರು ಪ್ರಶ್ನೆಗಳನ್ನು ಎತ್ತಿದರು. “ನಿಮ್ಮ ಕೋರಿಕೆಗಳ ಬಗ್ಗೆ ಮೇಲಾಧಿಕಾರಿಗಳಿಗೆ ತಿಳಿಸುತ್ತೇವೆ,” ಎಂದು ಸಿದ್ದನಗೌಡ ಅವರು ಸಭೆ ಮುಗಿಸಿದರು.
ಈ ಸಂದರ್ಭದಲ್ಲಿ, ಗ್ರಾಮಸ್ಥರು ಅಧಿಕಾರಿಗಳ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು ಮತ್ತು ಸರಿಯಾದ ಕಾಮಗಾರಿಗಳನ್ನು ಮಾಡದಿರುವ ಬಗ್ಗೆ ಪ್ರಶ್ನಿಸಿದರು.