ಸಿಲಿಕಾನ್ ಸಿಟಿಯಲ್ಲಿ ಗೌರಿಗಣೇಶ ಹಬ್ಬದ ಸಂಭ್ರಮ
ಪೂಜೆಗೆ ಬೇಕಾದ ವಸ್ತುಗಳ ಖರೀದಿಯಲ್ಲಿ ಸಿಟಿಜನರು ಮುಗಿಬಿದ್ದರು. ಬೆಂಗಳೂರುKR ಮಾರ್ಕೆಟ್ನಲ್ಲಿ ಹಬ್ಬದ ಖರೀದಿ ಭರಾಟೆ. ಹಬ್ಬಕ್ಕೆ ಬೇಕಾದ ವಿಗ್ರಹ, ಹೂವು, ಹಣ್ಣು, ಪೂಜಾ ಸಾಮಗ್ರಿಗಳು ಸೇರಿದಂತೆ ಅಗತ್ಯ ವಸ್ತುಗಳ ಖರೀದಿ ಮಾಡುತ್ತಿದ್ದಾರೆ.
ಹಬ್ಬಕ್ಕೆ ಬೇಕಾದ ಕೆಲ ತರಕಾರಿಗಳ ಬೆಲೆ ಹೆಚ್ಚಿದ್ದರೆ, ಹಣ್ಣುಗಳ ಬೆಲೆಯಲ್ಲೂ ಏರಿಕೆಯಾಗಿದೆ.
KR ಮಾರ್ಕೆಟ್ನಲ್ಲಿ ಪ್ರಮುಖ ವಸ್ತುಗಳ ಬೆಲೆ:
• ಬಾಳೆಕಂದು ಜೋಡಿಗೆ: ₹60
• ಮಾವಿನ ತೋರಣ: ₹20
• ಒಂದು ಕಟ್ ವೀಳ್ಳೆದೆಲೆಗೆ: ₹100
• ಗರಿಕೆ: ₹39
• ಬಿಲ್ವಪತ್ರೆ: ₹20
ಹೂವುಗಳ ದರ:
ಹೂವು ಕಳೆದವಾರ ಇಂದು
ಕನಕಾಂಬರ ₹800 ₹3000
ಮಲ್ಲಿಗೆ ₹300 ₹600
ಗುಲಾಬಿ ₹150 ₹250
ಸೇವಂತಿಗೆ ₹100 ₹180
ಸುಗಂಧರಾಜ ₹100 ₹240
ಹಣ್ಣುಗಳ ದರ:
ಹಣ್ಣು ಕಳೆದವಾರ ಇಂದು
ಸೇಬು ₹150 ₹220
ದಾಳಿಂಬೆ ₹100 ₹160
ಏಲಕ್ಕಿಬಾಳೆ ₹60 ₹120
ಸೀತಾಫಲ ₹80 ₹100