Ashwaveega News 24×7 ಫೆಬ್ರವರಿ 05 -2026 – ಐಟಿ ರಾಜಧಾನಿ ಬೆಂಗಳೂರಿಗೆ ಮತ್ತೊಂದು ಬಿಗ್ ಬೂಸ್ಟ್ !
ಗೂಗಲ್ನ ಪೇರಂಟ್ ಕಂಪನಿ ಆಲ್ಫಾಬೆಟ್ ಬೆಂಗಳೂರಿನಲ್ಲಿ ತನ್ನ ಅತಿದೊಡ್ಡ ಕ್ಯಾಂಪಸ್ಗಳಲ್ಲಿ ಒಂದನ್ನು ತೆರೆಯಲು ಸಜ್ಜಾಗಿದೆ.
ಐಟಿಸಿಟಿ ಬೆಂಗಳೂರು ಪ್ರದೇಶದಲ್ಲಿ ಸುಮಾರು 20,000 ಉದ್ಯೋಗಿಗಳಿಗೆ ಅವಕಾಶ ಕಲ್ಪಿಸುವ ಹೊಸ ಕಚೇರಿ
ಆರಂಭಿಸಲು ಗೂಗಲ್ ಸಿದ್ಧತೆ ನಡೆಸುತ್ತಿದೆ .ಮುಂದಿನ ದಿನಗಳಲ್ಲಿ ಉದ್ಯೋಗದ ಪ್ರಮಾಣ ಹೆಚ್ಚಿಸುವ ಉದ್ದೇಶದಿಂದ ಹೊಸ ಬೃಹತ್ ಕಚೇರಿ ಕಟ್ಟಡಗಳು ಈಗಾಗಲೇ ಸಿದ್ಧವಾಗಿವೆ. ವಿಶೇಷವಾಗಿ ವೈಟ್ಫೀಲ್ಡ್ ಟೆಕ್ ಕಾರಿಡಾರ್ನಲ್ಲಿ ಅತ್ಯಾಧುನಿಕ ಸೌಲಭ್ಯಗಳೊಂದಿಗೆ ಬೃಹತ್ ಬಿಲ್ಡಿಂಗ್ ನಿರ್ಮಾಣಗೊಂಡಿದೆ.
ಮುಂದಿನ ತಿಂಗಳಿನಿಂದಲೇ ಒಂದು ಕಟ್ಟಡದಲ್ಲಿ ಕೆಲಸ ಆರಂಭವಾಗುವ ಸಾಧ್ಯತೆ ಇದೆ. ಹಂತ ಹಂತವಾಗಿ ಇನ್ನಷ್ಟು ಕಚೇರಿಗಳನ್ನು ಕಾರ್ಯಾರಂಭ ಮಾಡಿಸುವ ಪ್ಲಾನ್ ಕೂಡ ಇದೆ. ಅಮೆರಿಕದಲ್ಲಿ ವೀಸಾ ನಿಯಮಗಳು ಬಿಗಿಗೊಂಡಿರುವ ಹಿನ್ನೆಲೆ, ವಿದೇಶಿ ಪ್ರತಿಭೆಗಳನ್ನು ಅಲ್ಲಿಗೆ ಕರೆತರುವುದು ಕಷ್ಟಕರವಾಗುತ್ತಿದೆ . ಈ ಕಾರಣದಿಂದಲೇ ಗೂಗಲ್ ಭಾರತದ ಮೇಲೆ, ಅದರಲ್ಲೂ ಬೆಂಗಳೂರಿನ ಮೇಲೆ ಹೆಚ್ಚು ಫೋಕಸ್ ಮಾಡಿದೆ ಎನ್ನುವ ಚರ್ಚೆ ಜೋರಾಗಿದೆ.
ಹೀಗಾಗಿ ಭಾರತದಲ್ಲೇ ಹೆಚ್ಚಿನ ಟೆಕ್ ಪ್ರತಿಭೆಗಳನ್ನು ನೇಮಿಸಿಕೊಳ್ಳಲು ಆಲ್ಫಾಬೆಟ್ ಪ್ಲಾನ್ ರೂಪಿಸುತ್ತಿದೆ.
ಇದು ಬೆಂಗಳೂರಿನ ಐಟಿ ಇಕೋಸಿಸ್ಟಂಗೆ ಮತ್ತಷ್ಟು ಬಲ ನೀಡಲಿದೆ ಅನ್ನೋ ನಿರೀಕ್ಷೆ.
ಪ್ರಸ್ತುತ ಜಾಗತಿಕವಾಗಿ ಆಲ್ಫಾಬೆಟ್ನಲ್ಲಿ ಸುಮಾರು 1,90,000 ಉದ್ಯೋಗಿಗಳು ಇದ್ದು, ಬೆಂಗಳೂರಿನಲ್ಲೇ 20,000 ಉದ್ಯೋಗಿಗಳ ಸಂಖ್ಯೆ ತಲುಪುವ ಸಾಧ್ಯತೆ ಇದೆ . ಒಟ್ಟಿನಲ್ಲಿ, ಗೂಗಲ್ನ ಈ ಮಹತ್ವದ ನಿರ್ಧಾರ ಬೆಂಗಳೂರನ್ನು ಮತ್ತೊಮ್ಮೆ ಜಾಗತಿಕ ಟೆಕ್ ಮ್ಯಾಪ್ನಲ್ಲಿ ಟಾಪ್ ಸ್ಥಾನಕ್ಕೆ ಕೊಂಡೊಯ್ಯುವ ಸೂಚನೆ ನೀಡುತ್ತಿದೆ.
