
ಮೊದಲ ಎರಡು ಪಂದ್ಯಗಳನ್ನ ಗೆದ್ದು ಬೀಗಿದ್ದ ಟೀಂ ಇಂಡಿಯಾಗೆ 3ಟಿ20 ಪಂದ್ಯದಲ್ಲಿ ಸೋಲಿನ ರುಚಿ ಎದುರಾಗಿದೆ. ರಾಜ್ಕೋಟ್ನಲ್ಲಿ ನಡೆದ ಪಂದ್ಯದಲ್ಲಿ ಎಂದಿನಂತೆ ಟಾಸ್ ಗೆದ್ದ ನಾಯಕ ಸೂರ್ಯಕುಮಾರ್ ಯಾದವ್ ಬೌಲಿಂಗ್ ಆಯ್ಕೆ ಮಾಡಿಕೊಂಡರು. 2023ರ ವಿಶಕಪ್ ಪೈನಾಲ್ ಪಂದ್ಯದಲ್ಲಿ ಆಡಿದ್ದ ವೇಗಿ ಮೊಹಮ್ಮದ್ ಶಮಿ ಈ ಪಂದ್ಯದಲ್ಲಿ ಭಾರತ ಪರ ಕಣಕ್ಕಿಳಿದರು. ಇನ್ನಿಂಗ್ಸ್ ಶುರು ಮಾಡಿದ ಇಂಗ್ಲೆಂಡ್ ತಂಡ ಅದೇ ರಾಗ ಅದೇ ಹಾಡು ಎಂಬಂತೆ ಆರಂಭದಲೇ ಫಿಲ್ ಸಾಲ್ಟ್ ವಿಕೆಟ್ ಕಳೆದುಕೊಂಡಿತ್ತು. ಬೆನ್ ಡಕೆಟ್ ಅರ್ಧಶತಕ ಸಿಡಿಸಿ ತಂಡದ ರನ್ ಗಳಿಕೆಗೆ ಚುರುಕು ಮುಟ್ಟಿಸಿದರು. ನಂತರ ಕ್ರೀಸಿಗೆ ಬಂದ ನಾಯಕ ಜೋಸ್ ಬಟ್ಲರ್ 23, ಲಿಯಾಮ್ ಲಿವಿಂಗ್ ಸ್ಟೋನ್ 43 ರನ್ ಬಲದಿಂದ 20 ಓವರ್ಗಳಿಗೆ ಇಂಗ್ಲೆಂಡ್ ತಂಡ 9 ವಿಕೆಟ್ ನಷ್ಟಕ್ಕೆ 171 ರನ್ ಕಲೆ ಹಾಕಿತ್ತು. ಭಾರತ ಪರ ವರುಣ್ ಚಕ್ರವರ್ತಿ 5 ವಿಕೆಟ್ ಕಬಳಿಸಿ ಮಿಂಚಿದರು. 172 ರನ್ ಗಳ ಗುರಿ ಬೆನ್ನತ್ತಿದ್ದ ಭಾರತ ತಂಡಕ್ಕೆ ಆರಂಭಿಕ ಆಘಾತ ಎದುರಾಯಿತ್ತು. ಸಂಜು ಸ್ಯಾಮ್ಸನ್ ವಿಕೆಟ್ ಕಳೆದುಕೊಂಡ ಕೆಲ ಹೊತ್ತಲೇ ಅಭಿಷೇಕ್ ಶರ್ಮಾ ವಿಕೆಟ್ ಕೂಡ ಕಳೆದುಕೊಂಡಿತ್ತು. ಕಳೆದ ಬಾರಿಯ ಮ್ಯಾಚ್ ವಿನ್ನರ್ ತಿಲಕ್ ವರ್ಮಾರ ಆಟ ಕೂಡ ಈ ಸಲ ನಡೆಯಲಿಲ್ಲ. ನಾಯಕ ಸೂರ್ಯಕುಮಾರ್ ಯಾದವ್ 14ರನ್ ಗಳಿಸಿ ಪೆವಿಲಿಯನ್ ಕಡೆ ಹೆಜ್ಜೆ ಹಾಕಿದರು. ಕೊನೆದಾಗಿ ಭಾರತಕ್ಕೆ ಗೆಲ್ಲುವಿನ ಆಸೆ ತೋರಿಸಿದ ಹಾರ್ದಿಕ್ ಪಾಂಡ್ಯ 40 ರನ್ ಗಳಿಸಿ ತಂಡವನ್ನ ಗೆಲ್ಲುವಿನ ದಡಕ್ಕೆ ಸೇರಿಸಲು ಪ್ರಯತ್ನ ಪಟ್ಟರೂ ಅಂತಿಮವಾಗಿ ಭಾರತ 149 ರನ್ ಗಳಿಸಲಷ್ಟೇ ಶಕ್ತವಾಯಿತ್ತು.
