
5 ಪಂದ್ಯಗಳ ಏಕದಿನ ಸರಣಿಯಲ್ಲಿ ಭಾರತ ಇಂಗ್ಲೆಂಡ್ ವಿರುದ್ದ 4 ವಿಕೆಟ್ಗಳ ಜಯ ಗಳಿಸಿದೆ. ನಾಗ್ಪುರದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಇಂಗ್ಲೆಂಡ್ ತಂಡದ ನಾಯಕ ಜೋಸ್ ಬಟ್ಲರ್ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡರು. ಟಿ-20 ಸರಣಿಯಲ್ಲಿ ಅಬ್ಬರಿಸದ ಫಿಲ್ ಸಾಲ್ಟ್ ಈ ಪಂದ್ಯದಲ್ಲಿ ಆರಂಭದಲ್ಲೇ ಭರ್ಜರಿ ಹೊಡೆತಗಳ ಮೂಲಕ ಬಾರಿಸಿ 43 ರನ್ ಗಳಿಸಿ ಆಡುತ್ತಿರುವಾಗ ಅನಗತ್ಯ ರನ್ ಓಡಲು ಹೋಗಿ ರನೌಟ್ ಆದರು. ಬೆನ್ ಡಕೆಟ್ (32),ಜೋ ರೂಟ್ (19),ಹ್ಯಾರಿ ಬ್ರೂಕ್ (0), ನಾಯಕ ಜೋಸ್ ಬಟ್ಲರ್ ತಾಳ್ಮೆಯ ಆಟವಾಡಿ (52) ರನ್ ಗಳಿಸಿದರು. ಬಟ್ಲರ್ಗೆ ಬೆಥೆಲ್ ಕೂಡ ಸಾಥ್ ನೀಡಿ (51) ನೀಡಿದರು. ಇನ್ನಿಂಗ್ಸ್ನ ಕೊನೆಯಲ್ಲಿ ಜೋಫ್ರಾ ಆರ್ಚರ್ 21 ರನ್ ಗಳಿಸಿ ತಂಡದ ಸ್ಕೋರ್ ಹೆಚ್ಚಾಗಲು ಸಹಾಯಕವಾದರು. ಅಂತಿಮವಾಗಿ ಇಂಗ್ಲೆಂಡ್ ತಂಡ 47.4 ಓವರ್ಗಳಲ್ಲಿ 148 ರನ್ಗಳಿಗೆ ಅಲೌಟ್ ಆಯಿತ್ತು.

ಭಾರತಕ್ಕೆ 149 ರನ್ಗಳ ಗುರಿ
249 ರನ್ಗಳ ಗುರಿ ಪಡೆದ ಭಾರತಕ್ಕೆ ಆರಂಭದಲ್ಲೇ ಯಶಸ್ವಿ ಜೈಸ್ವಾಲ್ (15) ವಿಕೆಟ್ ಕಳೆದುಕೊಂಡಿತ್ತು. ಮೊದಲ ವಿಕೆಟ್ ಕಳೆದುಕೊಂಡ ಕೆಲವೇ ಕ್ಷಣದಲ್ಲಿ ನಾಯಕ ರೋಹಿತ್ ಶರ್ಮಾ (2೦ ಕೂಡ ಪೆವಿಲಿಯನ್ ಸೇರಿದರು. ನಂತರ ಕ್ರೀಸಿಗೆ ಬಂದ ಶುಭಮನ್ ಗಿಲ್ (87),ಶ್ರೇಯಸ್ ಅಯ್ಯರ್ (59),ಅಕ್ಷರ್ ಪಟೇಲ್ (52) ಮೂವರ ಅರ್ಧಶತಕದಿಂದ ಭಾರತ 38.4 ಓವರ್ಗಳಲ್ಲಿ 6 ವಿಕೆಟ್ ಕಳೆದುಕೊಂಡು ಗುರಿ ಮುಟ್ಟಿತ್ತು. ಆ ಮೂಲಕ ಟಿ-20 ಸರಣಿ ಗೆದಿದ್ದ ಭಾರತಕ್ಕೆ ಏಕದಿನದಲ್ಲೂ 1-0ಗಳ ಮುನ್ನಡೆ ಸಾಧಿಸಿದೆ..
ಅಭಿಷೇಕ್ . ಎಸ್