ದೇಹವು ಪ್ಯೂರಿನ್ ನ್ನು ವಿಘಟಿಸಿದಾಗ ಉಂಟಾಗುವಂತಹ ಉಪ ಉತ್ಪನ್ನವೇ ಯೂರಿಕ್ ಆಮ್ಲ. ನಾವು ತಿನ್ನುವ ಹಾಗೂ ಕುಡಿಯುವ ಆಹಾರದಲ್ಲಿ ಪ್ಯೂರಿನ್ ಕಂಡು ಬರುವುದು. ಇದರ ಈ ಉಪ ಉತ್ಪನ್ನವಾದ ಯೂರಿಕ್ ಆಮ್ಲವನ್ನು ಹೊರಗೆ ಹಾಕಲು ಕಿಡ್ನಿಯ ಪಾತ್ರ ಮಹತ್ವದ್ದಾಗಿದೆ.
ಆದರೆ ದೇಹದಲ್ಲಿ ಇದು ಅತಿಯಾದರೆ, ಆಗ ಇದರಿಂದ ಬೇರೆ ಅನಾರೋಗ್ಯಗಳು ಕಾಡಬಹುದು. ಯೂರಿಕ್ ಆಮ್ಲ ಅತಿಯಾದರೆ, ಆಗ ಅಧಿಕ ರಕ್ತದೊತ್ತಡ, ಸಂಧಿವಾತ, ಬೊಜ್ಜು ಇತ್ಯಾದಿಗಳು ಕಂಡುಬರಬಹುದು. ಇದಕ್ಕಾಗಿ ದೇಹದಲ್ಲಿನ ಯೂರಿಕ್ ಆಮ್ಲವನ್ನು ನೈಸರ್ಗಿಕವಾಗಿ ಕಡಿಮೆಗೊಳಿಸಲು ಕೆಲವು ಹಣ್ಣುಗಳನ್ನು ಸೇವನೆ ಮಾಡಬೇಕು. ಈ ಹಣ್ಣುಗಳು ಯಾವುದು ಎಂದು ತಿಳಿಯಿರಿ
- ಯೂರಿಕ್ ಆಮ್ಲದಿಂದಾಗಿ ಗಂಟುನೋವಿನ ಸಮಸ್ಯೆಯು ಕಾಡಬಹುದು ಮತ್ತು ಬಾಳೆಹಣ್ಣು ಸೇವನೆ ಮಾಡಿದರೆ, ಆಗ ಇದು ತುಂಬಾ ಪರಿಣಾಮಕಾರಿ ಆಗಿರುವುದು.
- ಬಾಳೆಹಣ್ಣು ರಕ್ತದಲ್ಲಿನ ಯೂರಿಕ್ ಆಮ್ಲವನ್ನು ನೈಸರ್ಗಿಕವಾಗಿ ಕಡಿಮೆ ಮಾಡುವುದು ಮತ್ತು ಗಂಟುನೋವಿನ ಸಮಸ್ಯೆಯನ್ನು ದೂರ ಮಾಡುವುದು. ತುಂಬಾ ಕಡಿಮೆ ಪ್ಯೂರಿನ್ ಅಂಶವನ್ನು ಹೊಂದಿರುವ ಇದು ನೈಸರ್ಗಿಕವಾಗಿ ಹೈಪರ್ ಯುರೊಸೆಮಿಯಾದಿಂದ ಚೇತರಿಸಿ ಕೊಳ್ಳುತ್ತದೆ. ಯೂರಿಕ್ ಆಮ್ಲವನ್ನು ಕುಗ್ಗಿಸಲು ಇದು ತುಂಬಾ ಒಳ್ಳೆಯ ಹಾಗೂ ರುಚಿಕರ ಹಣ್ಣು ಆಗಿದೆ.
ಸೇಬು
- ಸೇಬಿನಲ್ಲಿ ನಾರಿನಾಂಶವು ಅಧಿಕವಾಗಿರುವುದು ನಮಗೆ ತಿಳಿದೇ ಇದೆ. ನಾರಿನಾಂಶವು ದೇಹದಲ್ಲಿನ ಅಧಿಕ ಯೂರಿಕ್ ಆಮ್ಲವನ್ನು ತಗ್ಗಿಸುವುದು.
- ಸೇಬಿನಲ್ಲಿ ಇರುವ ನಾರಿನಾಂಶವು ಅಧಿಕ ಯೂರಿಕ್ ಆಮ್ಲವನ್ನು ನೆನೆಯುವಂತೆ ಮಾಡುವುದು ಮತ್ತು ಯಾವುದೇ ಔಷಧಿಯು ಇಲ್ಲದೆ ಇದನ್ನು ನೈಸರ್ಗಿಕವಾಗಿ ದೇಹದಿಂದ ಹೊರಗೆ ಹೋಗುವಂತೆ ಮಾಡುವುದು. ಸೇಬಿನಲ್ಲಿ ಮಲಿಕ್ ಆಮ್ಲವಿದ್ದು, ಇದು ದೇಹದಲ್ಲಿನ ಯೂರಿಕ್ ಆಮ್ಲವನ್ನು ಸಮತೋಲನದಲ್ಲಿಡಲು ಸಹಕಾರಿ ಆಗಿದೆ.
ಅನಾನಸು
- ಅಧಿಕ ವಿಟಮಿನ್ ಸಿ ಅಂಶವನ್ನು ಹೊಂದಿರುವ ಅನಾನಸು ಹೈಪರ್ಯುರಿಸೆಮಿಯಾ ನಿಭಾಯಿಸಲು ತುಂಬಾ ಸಹಕಾರಿ ಆಗಿದೆ. ವಿಟಮಿನ್ ಸಿ ಅಂಶವು ದೇಹದಲ್ಲಿನ ಯೂರಿಕ್ ಆಮ್ಲವನ್ನು ಮೂತ್ರದ ಮೂಲಕ ಹೊರಗೆ ಹಾಕುವುದು.
- ಇದು ಯೂರಿಕ್ ಆಮ್ಲವನ್ನು ಹೊರಗೆ ಹಾಖುವುದು ಮಾತ್ರವ ಲ್ಲದೆ, ದೇಹದಲ್ಲಿನ ಆಮ್ಲೀಯತೆ ಕಡಿಮೆ ಮಾಡುವುದು. ಅನಾನಸು ಜ್ಯೂಸ್ ಕುಡಿದರೆ ಆಗ ಇದು ಅಧಿಕ ಯೂರಿಕ್ ಆಮ್ಲಕ್ಕೆ ತುಂಬಾ ಪರಿಣಾಮಕಾರಿ ಎಂದು ಅಧ್ಯಯನಗಳು ಹೇಳಿವೆ.
ಕಿತ್ತಳೆ
- ವಿಟಮಿನ್ ಸಿ ಅತ್ಯಧಿಕವಾಗಿ ಇರುವ ಕಿತ್ತಳೆ, ದ್ರಾಕ್ಷಿ, ಸ್ಟ್ರಾಬೆರ್ರಿ ಇತ್ಯಾದಿಗಳು ದೇಹದಲ್ಲಿನ ಯೂರಿಕ್ ಆಮ್ಲವನ್ನು ನೈಸರ್ಗಿಕವಾಗಿ ಕಡಿಮೆ ಮಾಡಲು ಲಾಭಕಾರಿ ಆಗಿದೆ. ಸಂಧಿವಾತದಿಂದ ಬಳಲುತ್ತಿದ್ದು, ಔಷಧಿ ಸೇವನೆ ಮಾಡುತ್ತಿದ್ದರೆ ಆಗ ಮೂಸಂಬಿ ಸೇವಿಸಬಾರದು.
- ಯಾಕೆಂದರೆ ಇದು ಔಷಧಿ ಮೇಲೆ ಪರಿಣಾಮ ಬೀರಬಹುದು. ಮೂಸಂಬಿ ಹೊರತಾಗಿ ಇತರ ಕೆಲವು ಸಿಟ್ರಸ್ ಹಣ್ಣುಗಳನ್ನು ಸೇವನೆ ಮಾಡಿದರೂ ಅದು ನೈಸರ್ಗಿಕವಾಗಿ ದೇಹದಲ್ಲಿ ಯೂರಿಕ್ ಆಮ್ಲವನ್ನು ತಗ್ಗಿಸುವುದು.