ಬೆಂಗಳೂರು : ಆರ್.ಆರ್. ನಗರದಲ್ಲಿ ಪಿಓಪಿ ಗಣಪತಿ ಮೂರ್ತಿಗಳನ್ನು ತಯಾರು ಮಾಡುತ್ತಿದ್ದವರಿಗೆ ಬಿಬಿಎಂಪಿ ಬಿಸಿ ಮುಟ್ಟಿಸಿದೆ. ವಾರ್ಡ್ ನಂ.198 ಹೆಮ್ಮಿಗೆಪುರ ವ್ಯಾಪ್ತಿಯಲ್ಲಿ ಪ್ಲಾಸ್ಟರ್ ಆಫ್ ಪ್ಯಾರಿಸ್ (ಪಿಓಪಿ) ಮೂರ್ತಿಗಳನ್ನು ತಯಾರು ಮಾಡಲಾಗುತ್ತಿತ್ತು. ಈ ಮಾಹಿತಿಯನ್ನು ತಿಳಿದ ಪಳಿಕೆ ಅಧಿಕಾರಿಗಳು, ಆರೋಗ್ಯಧಿಕಾರಿ ಡಾ. ಸಂಗಮಿತ್ರ ಅವರ ನೇತೃತ್ವದಲ್ಲಿ, ಗೋಡೌನ್ ಮೇಲೆ ದಾಳಿ ನಡೆಸಿ, ಬೀಗಮುದ್ರೆ ಹಾಕಿ ನೋಟೀಸ್ ಜಾರಿ ಮಾಡಿದರು.