ಬೆಂಗಳೂರು: ರಾಜಧಾನಿಯ ಬೀದಿಬದಿ ವ್ಯಾಪಾರಿಗಳಿಗೆ ಶಾಕ್ ಕೊಡಲು ಬಿಬಿಎಂಪಿ ಸಜ್ಜಾಗಿದೆ. ಬೆಂಗಳೂರಿನ 1300 ಕಿ.ಮೀ ವ್ಯಾಪ್ತಿಯ ರಸ್ತೆಗಳಲ್ಲಿ ಪಾದಚಾರಿ ಮಾರ್ಗಗಳ ಒತ್ತುವರಿ ತೆರವು ಮಾಡಲು ಬಿಬಿಎಂಪಿ ಹೊಸ ಯೋಜನೆಯನ್ನು ಕಾರ್ಯಗತಗೊಳಿಸಲು ಹೊರಟಿದೆ.
ಮುಂದಿನ ವಾರದಿಂದ ಪ್ರತಿ ಮೊದಲ ಶನಿವಾರ ಹಾಗೂ ಮೂರನೇ ಶನಿವಾರ ಫುಟ್ ಪಾತ್ ಅಂಗಡಿಗಳ ತೆರವು ಕಾರ್ಯಾಚರಣೆ ಆರಂಭವಾಗಲಿದೆ. ಈ ಕ್ರಮವು ನಗರದಲ್ಲಿ ಪಾದಚಾರಿ ಮಾರ್ಗಗಳನ್ನು ಸ್ವಚ್ಛ ಮತ್ತು ಮುಕ್ತವಾಗಿಡಲು ಉದ್ದೇಶಿಸಲಾಗಿದೆ.
ನಗರದ ಶೇಕಡ 70 ರಷ್ಟು ರಸ್ತೆಗಳ ಫುಟ್ ಪಾತ್ಗಳಲ್ಲಿ ಪಾದಚಾರಿ ಮಾರ್ಗಗಳ ಒತ್ತುವರಿ ಕಂಡು ಬಂದಿದೆ, ಇದು ಪಾದಚಾರಿ ಮಾರ್ಗಗಳಿಗೆ ಓಡಾಡಲು ಸಮಸ್ಯೆ ಸೃಷ್ಟಿಸಿದೆ. ಈ ಸಮಸ್ಯೆಯ ಹಿನ್ನಲೆಯಲ್ಲಿ ಬಿಬಿಎಂಪಿಗೆ ನೂರಾರು ದೂರುಗಳು ಬಂದಿದ್ದವು.
ಅನಧಿಕೃತ ಪಾದಚಾರಿ ಮಾರ್ಗಗಳ ಮೇಲೆ ಕ್ರಮ ಜರುಗಿಸಲು ಬಿಬಿಎಂಪಿ ಸಂಪೂರ್ಣ ಸಿದ್ಧತೆ ಮಾಡಿಕೊಂಡಿದ್ದು, ಮುಂದಿನ ವಾರದಿಂದ ಈ ಸಂಬಂಧಿ ಕಾರ್ಯಚರಣೆ ಆರಂಭವಾಗಲಿದೆ.