ಭುಜ್:
ಭಾರತದ ಮೆಟ್ರೋ ಸಂಚಾರದಲ್ಲಿ ಹೊಸ ಕ್ರಾಂತಿ ತರುವ ವಂದೇ ಮೆಟ್ರೋ ರೈಲು ಇಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಂದ ಚಾಲನೆ ಪಡೆಯಲಿದೆ. ಗುಜರಾತ್ನ ಭುಜ್ ನಿಂದ ಅಹಮದಾಬಾದ್ ತಲುಪಲಿರುವ ಈ ವಂದೇ ಮೆಟ್ರೋ, ಪ್ರತಿನಿಮಿಷಕ್ಕೆ 100 ಕಿ.ಮೀ ವೇಗದಲ್ಲಿ ಚಲಿಸುವ ಸಾಮರ್ಥ್ಯ ಹೊಂದಿದೆ.
349 ಕಿ.ಮೀ ದೂರವನ್ನು ಕೇವಲ 5.45 ಗಂಟೆಗಳಲ್ಲಿ ಮುಗಿಸಲು ಇದು ಶಕ್ತವಾಗಿದ್ದು, ಸೆಪ್ಟೆಂಬರ್ 17 ರಿಂದ ಸಾರ್ವಜನಿಕರಿಗೆ ಈ ಮೆಟ್ರೋ ಪ್ರಯಾಣದ ಅನುಭವ ಲಭ್ಯವಾಗಲಿದೆ.
ವಂದೇ ಮೆಟ್ರೋ ವಿಶೇಷತೆಗಳು:
- ಅತ್ಯಾಧುನಿಕ ತಂತ್ರಜ್ಞಾನ: ಅಪಘಾತ ತಡೆಸುವ ಕವಚ್ ತಂತ್ರಜ್ಞಾನ, ಬೆಂಕಿ ಅಪಘಾತ ಪತ್ತೆ ಸಾಧನ, ಮತ್ತು ಎಮರ್ಜೆನ್ಸಿ ಲೈಟ್ಗಳು.
- ಹವಾನಿಯಂತ್ರಿತ ಕ್ಯಾಬಿನ್ ಮತ್ತು ಮಾಡ್ಯುಲರ್ ಇಂಟೀರಿಯರ್ಸ್.
- ಒಟ್ಟು 12 ಬೋಗಿಗಳು, ಪ್ರತಿಬಾರಿಗೆ 1150 ಪ್ರಯಾಣಿಕರು ಸಾಗಿಸಲು ಅನುಕೂಲ.
- ಗರಿಷ್ಠ 130 ಕಿ.ಮೀ ವೇಗದಲ್ಲಿ ಚಲಿಸಬಲ್ಲ ಸಾಮರ್ಥ್ಯ.
- ಪ್ರಯಾಣ ಶುಲ್ಕ: ಭುಜ್-ಅಹಮದಾಬಾದ್ ಮಾರ್ಗದ ಶುಲ್ಕ 455 ರೂ..
- ಪ್ರಾರಂಭದಲ್ಲಿ 150 ಕಿ.ಮೀ ಅಂತರದ ನಗರಗಳ ನಡುವೆ ಸೀಮಿತ ಯೋಜನೆ.