ಬೆಂಗಳೂರು : ಸಿಲಿಕಾನ್ ಸಿಟಿಯಲ್ಲಿ ಇತ್ತಿಚಿಗೆ ಕೆಲವು ಬದಲಾವಣೆ ಆಗುತ್ತಿದ್ದು, ಕಬ್ಬನ್ ಪಾರ್ಕ್ ನಲ್ಲಿ ಕೆಲವು ಅನೈತಿಕ ಚಟುವಟಿಕೆಗಳು ಹೆಚ್ಚಾಗುತ್ತಿದೆ. ನಿತ್ಯವೂ ಯುವಕ ಯುವತಿಯರು ಅಸಭ್ಯವಾಗಿ ವರ್ತಿಸುತ್ತಿದ್ದು, ಇವರ ನಡೆಗೆ ಜನರಿಂದ ಆಕ್ರೋಶ ಹೊರಹಾಕಿದ್ದಾರೆ.
ಇನ್ನೂ ಕಬ್ಬನ್ ಪಾರ್ಕ್ ನಲ್ಲಿ ಪ್ರತಿ ದಿನ ಯುವಕ ಯುವತಿಯರು ಮೈಮರೆತ ವರ್ತಿಸುತ್ತಿದ್ದು, ಪಾರ್ಕ್ಗೆ ಬರುವ ವಾಯು ವಿಹಾರಿಗಳಿಗೆ ನಿತ್ಯವೂ ಮುಜುಗರ ಉಂಟಾಗುತ್ತಿದೆ. ಅಷ್ಟೆ ಅಲ್ಲಾದೆ ಜೋಡಿಗಳಿಂದ ಸಾವಿರಾರು ಪ್ರವಾಸಿಗರಿಗೆ ತೊಂದರೆ ಆಗುತ್ತಿದ್ದು, ಎಲ್ಲೆಂದರಲ್ಲಿ ಕುಳಿತ ಜೋಡಿಗಳಿಂದ ಸರಸ ಸಲ್ಲಾಪ ಹೆಚ್ಚಾಗಿದೆ.
ಅಷ್ಟೆ ಅಲ್ಲಾದೆ ಕಬ್ಬನ್ ಪಾರ್ಕ್ ನ ಮರದ ಪೊದರೆ ಸೇರಿ ಸಿಕ್ಕ ಸಿಕ್ಕ ಜಾಗಗಳಲ್ಲಿ ಅನೈತಿಕ ಚಟುವಟಿಕೆ ಕ್ರಿಯೆಗಳನ್ನು ನಡೆಸುತ್ತಿದ್ದು, ಸುತ್ತಲೂ ಎಷ್ಟೇ ಜನ ಇದ್ರೂ ಡೋಂಟ್ ಕೇರ್ ಎನ್ನುತ್ತಿರೋ ಜೋಡಿಗಳು, ಇಷ್ಟೆಲ್ಲ ನಡೆದರು ಕಬ್ಬನ್ ಪಾರ್ಕ್ ನ ಆಡಳಿತ ಮಂಡಳಿ ಏನ್ ಮಾಡ್ತಿದೆ ಎಂದು ಜನರು ಪ್ರಶ್ನಿಸಿದ್ದು, ಇಂತಹ ಅನೈತಿಕ ಚಟುವಟಿಕೆ ನಡೆಯುತ್ತಿದ್ರೂ ಸೆಕ್ಯೂರಿಟಿ ಏನ್ ಮಾಡ್ತಿದೆ ಎಂದು ಆಕ್ರೋಶ ವ್ಯಕ್ತ ಪಡಿಸಿದ್ದಾರೆ.
ಇದನ್ನೂ ಓದಿ : https://ashwaveega.com/violence-by-a-man-from-north-india-in-silicon-city/