ಬೆಂಗಳೂರು : ನಾಡಿನಾದ್ಯಂತ ದಸರಾ ಸಡಗರ ಮನೆ ಮಾಡಿದ್ದು, ಬೆಂಗಳೂರಿನ ದೇವಾಲಯದಲ್ಲಿ ದಸರಾ ಸಂಭ್ರಮ ಅದ್ದೂರಿಯಾಗಿ ನಡೆದಿದೆ. ಇನ್ನೂ ಮಲ್ಲೆಶ್ವರಂನ ಗಂಗಮ್ಮ ದೇವಿ ದೇವಾಲದಲ್ಲಿ ದಸರಾ ಸಂಭ್ರಮ ಅದ್ದೂರಿಯಾಗಿ ನಡೆದಿದ್ದು, ದೇವಿಯ ಅಲಂಕಾರವನ್ನು ಕಣ್ತುಂಬಿಕೊಳ್ಳಲು ಬೆಳಗಿನ ಜಾವದಿಂದಲೇ ಭಕ್ತ ಸಾಗರವೇ ಹರಿದು ಬಂದಿದೆ.
ಇಷ್ಟೆ ಅಲ್ಲಾದೆ ದೇವಾಲಯದ ದ್ವಾರದಲ್ಲಿ ಸ್ವಾಗತಿಸುತ್ತಿರುವ ಜಂಬೂಸವಾರಿ, ಮಹಿಷಾಸೂರನನ್ನು ಸಂಹರಿಸುವ ಅವತಾರದಲ್ಲಿ ಕಂಗೊಳಿಸುತ್ತಿರುವ ದೇವಿ, ವಿವಿಧ ಗೊಂಬೆಗಳಿಂದ ಪೂಜೆ, ಅಲಂಕಾರ, ಕರಗ ಹೊತ್ತ ದೃಶ್ಯ, ಶಿವ ಪಾರ್ವತಿ ಹಾಗೂ ಪುತ್ರರ ಮೂರ್ತಿ,ಹಾಗೂ ನವಶಕ್ತಿಗಳ ವೈಭವದಲ್ಲಿ ಅನಾವರಣ ಗೊಂಡಿದ್ದು, ವಿವಿಧ ಬಣ್ಣದ ಹೂ ಹಾಗೂ ಲೈಟಿಂಗ್ಸ್ ಗಳಿಂದ ದೇವಸ್ಥಾನ ಸಿಂಗಾರಗೊಂಡಿದೆ.
ಇದನ್ನೂ ಓದಿ : https://ashwaveega.com/mother-chamundeshwaris-blessings-are-always-on-me-cm-siddaramaiah/