ಚಿಕ್ಕಮಗಳೂರು : ಬಿಂಡಿಗ ದೇವಿರಮ್ಮ ಬೆಟ್ಟದಲ್ಲಿ ಭಕ್ತ ಸಾಗರ ಹರಿದು ಬಂದಿದ್ದು, ಡ್ರೋನ್ ಕ್ಯಾಮರಾದಲ್ಲಿ ಅದ್ಭುತ ದೃಶ್ಯಗಳು ಸೆರೆಯಾಗಿದೆ.
ಹೌದು ಚಿಕ್ಕಮಗಳೂರು ತಾಲೂಕಿನ ಮಲ್ಲೇನಹಳ್ಳಿ ಸಮೀಪದ ಅಧಿದೇವತೆ ಬೆಟ್ಟದ ತುದಿಯಲ್ಲಿ ನೆಲೆಸಿದ್ದು, ದೇವಿರಮ್ಮನ ದರ್ಶನಕ್ಕಾಗಿ ಸಹಸ್ರಾರು ಸಂಖ್ಯೆಯಲ್ಲಿ ನಾಡಿನೆಲ್ಲೆಡೆಯಿಂದ ಭಕ್ತರು ಹರಿದು ಬಂದಿದ್ದಾರೆ. ಕಿರಿದಾದ ದುರ್ಗಮ ಹಾದಿಯಲ್ಲಿ ಬೆಟ್ಟ ಏರಿ ಭಕ್ತರು ದರ್ಶನ ಪಡೆಯುತ್ತಿದ್ದು, ಮೂರು ಸಾವಿರ ಅಡಿ ಎತ್ತರದ ಬೆಟ್ಟವನ್ನು ಏರಿ ಭಕ್ತರು ದೇವಿ ದರ್ಶನ ಪಡೆಯುತ್ತಿದ್ದಾರೆ. ಇನ್ನೂ ದೇವಿರಮ್ಮ ಹಸಿರು ಸಿರಿಯ ನಡುವೆ ದರ್ಶನ ನೀಡುತ್ತಿದ್ದು, ಭಕ್ತರು ಇಳಿಜಾರಿನ ಪ್ರದೇಶದಲ್ಲಿ ನಿಂತು ದೇವಿರಮ್ಮ ದರ್ಶನ ಮಾಡಿದ್ದಾರೆ.