ಬೆಳಗಾವಿ : ಪ್ರಕರಣ ನಡೆದು ಎರಡು ದಿನ ಕಳೆದರೂ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಮೌನವಾಗಿದ್ದರು, ಮೂರು ದಿನಗಳ ಕಾಲ ಎಲ್ಲರೂ ಕೂಡಿ ಪ್ರಾಮಾಣಿಕವಾಗಿ ಎವಿಡೆನ್ಸ್ ನಾಶ ಮಾಡಿದ್ದಾರೆ. ಎಂದು ಮಾಜಿ ಸಚಿವ ಶಾಸಕ ಸಂಜಯ ಪಾಟೀಲ ಹೇಳಿದ್ದಾರೆ.
ಇಂದು ಮಾಧ್ಯಮದವರೊಂದಿಗೆ ಮಾತನಾಡಿದ ಮಾಜಿ ಸಚಿವ ಶಾಸಕ ಸಂಜಯ ಪಾಟೀಲ, ಈಗ ಎವಿಡನ್ಸ್ ನಾಶವಾದ ಮೇಲೆ ತನಿಖೆ ಮಾಡಿ ಅಂತಾ ಹೆಬ್ಬಾಳಕರ್ ಹೇಳ್ತಿದ್ದಾರೆ. ಆದರೆ ತಕ್ಷಣವೇ ಮೂವರು ಆರೋಪಿಗಳ ಬಂಧನ ಆಗಬೇಕು.ನಿಷ್ಪಕ್ಷಪಾತವಾಗಿ ತನಿಖೆ ಆಗಲು ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ರಾಜೀನಾಮೆ ಕೊಡಬೇಕು. ಅಧಿಕಾರದಲ್ಲಿ ಸಚಿವೆ ಇರಬಾರದು. ಇದ್ದಾರೆ ಸರಿಯಾಗಿ ತನಿಖೆ ಮಾಡಲು ಕೊಡೊದಿಲ್ಲ, ಅದು ಅಸಾಧ್ಯ ರಾಜೀನಾಮೆ ಕೊಡಬೇಕು ಎಂದು ಒತ್ತಾಯಿಸಿದ್ದಾರೆ.
ಇನ್ನು ಇದೆ ವೇಳೆ ರುದ್ರಪ್ಪನಿಗೆ ಎಲ್ಲಿಯವರೆಗೆ ನ್ಯಾಯ ಸಿಗಲ್ಲ ಅಲ್ಲಿಯವರೆಗೆ ನಾವು ಹೋರಾಟ ಮಾಡುತ್ತೇವೆ. ಡೆತ್ ನೋಟ್, ಮೊಬೈಲ್, ಸಿಸಿ ಟವಿ ದೃಶ್ಯ ನಾಪತ್ತೆ ಆಗಿದೆ. ಮೊಬೈಲ್ ಪತ್ತೆಯಾಗಿದ್ರೂ ಡಿಲಿಟ್ ಮಾಡಿಕೊಟ್ಟಿದ್ದಾರೆ. ಅದನ್ನ ತಗೊಂದ ಏನ ಮಾಡೋದು. ಮೊದಲ ಎರಡು ದಿನ ಎಲ್ಲಿ ಹೋಗಿತ್ತು, ಅದೇನು ವಾಕಿಂಗ್ ಮಾಡೊಕೆ ಹೋಗಿತ್ತಾ, ಇಲ್ಲ ನಾಸ್ಟಾ ಮಾಡೊಕೆ ಹೋಗಿತ್ತಾ ಎಂದು ಪಾಟೀಲ ವ್ಯಂಗ್ಯವಾಡಿದ್ದಾರೆ. ಮೊಬೈಲ್ ಎವಿಡೆನ್ಸ್ ಡೆತ್ ನೋಟ ನಾಪತ್ತೆ ಮಾಡಿದ್ದಾರೆ.ಇದರಲ್ಲಿ ರಾಜಕೀಯ ಹಸ್ತಕ್ಷೇಪ ಇದೆ, ಲಕ್ಷ್ಮೀ ಹೆಬ್ಬಾಳಕರ್ ಹೆಸರು ಕೇಳಿಬರುತ್ತಿದೆ, ನಮಗೆ ಸಂಶಹ ಇದೆ. ಲಕ್ಷ್ಮೀ ಹೆಬ್ಬಾಳಕರ್ ಅಧಿಕಾರ ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.