ಬೆಳಗಾವಿ : ರಾಜ್ಯ ಸರ್ಕಾರದ 16 ತಿಂಗಳಲ್ಲಿ ದಿನಕ್ಕೆ ಒಂದೊಂದೇ ಹಗರಣ ಹೊರಗೆ ಬರುತ್ತಿವೆ.ರಾಜ್ಯದಲ್ಲಿ ಇನೆಷ್ಟು ಹೆಗ್ಗಣ ಅದಾವ್ ಅಷ್ಟು ಹಗರಣ ಇದ್ದಾವೆ ಎಂದು ಬೆಳಗಾವಿಯಲ್ಲಿ ವಿರೋಧ ಪಕ್ಷದ ಉಪ ನಾಯಕ ಅರವಿಂದ್ ಬೆಲ್ಲದ್ ಹೇಳಿದ್ದಾರೆ.
ಇಂದು ವರಾದಿಗಾರರೊಂದಿಗೆ ಮಾತನಾಡಿದ ವಿರೋಧ ಪಕ್ಷದ ಉಪ ನಾಯಕ ಅರವಿಂದ್ ಬೆಲ್ಲದ್ ಅವರು, ರಾಜ್ಯದಲ್ಲಿ ಭ್ರಷ್ಟಾಚಾರ ಆಂದ್ರೇ ಕಾಂಗ್ರೆಸ್ ಎನ್ನುವಂತೆ ಆಗಿದೆ. 16 ತಿಂಗಳಲ್ಲಿ ದಿನಕ್ಕೆ ಒಂದು ಹಗರಣ ಹೊರಗೆ ಬರುತ್ತಿದ್ದು, ರಾಜ್ಯದಲ್ಲಿ ಎಷ್ಟು ಹೆಗ್ಗಣ ಅದಾವ್ ಅಷ್ಟು ಹಗರಣ ಇದ್ದಾವೆ. ಹಗರಣದಲ್ಲಿ ಪ್ರಮುಖ ಪಾತ್ರ ಲಕ್ಷ್ಮೀ ಹೆಬ್ಬಾಳ್ಕರ್ ಇದೆ. ಯಾವುದೇ ಹಗರಣ ಬಂದ್ರು ಅದರಲ್ಲಿ ಹೆಬ್ಬಾಳ್ಕರ್ ಹೆಸರು ಕೇಳಿ ಬರುತ್ತೆದೆ. ವಾಲ್ಮೀಕಿ ಹಗರಣ ಬಗ್ಗೆ ಸತೀಶ್ ಜಾರಕಿಹೊಳಿ ಚಕಾರ ಎತ್ತಿಲ್ಲ. ಮುಡಾ, ವಕ್ಫ್ ಇಲಾಖೆಯಲ್ಲಿ ಹಗರಣ ಮಾಡಿದ್ದಾರೆ. ಪ್ರವಾಸೋದ್ಯಮ, ಅಬಕಾರಿ ಇಲಾಖೆಯಲ್ಲಿ ಭ್ರಷ್ಟಾಚಾರ ಆಗಿದೆ ಎಂದಿದ್ದಾರೆ.
ಇನ್ನೂ ಇದೆ ವೇಳೆ ಎಸ್ ಡಿ ಎ ರುದ್ರಣ್ಣ ಯಡವಣ್ಣವರ್ ಆತ್ಮಹತ್ಯೆ ಕೇಸ್ಗೆ ಸಂಬಂಧಿಸಿದಂತೆ ಹೆಬ್ಬಾಳ್ಕರ್ ಪಿಎ ಗಳ ಮೂಲಕ ಮಾಡುತ್ತಿರೋ ಅನ್ಯಾಯ ನೋಡಲಾಗದೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಬೆಳಗಾವಿ ಗ್ರಾಮೀಣದಲ್ಲಿ ಹೆಚ್ಚಿನ ಲಿಡ್ ಜನ ಕೊಟ್ಟಿದ್ರು ಹೆಬ್ಬಾಳ್ಕರ್ ಬಂದ ಮೇಲೆ ಭ್ರಷ್ಟಾಚಾರ ಹೆಚ್ಚಾಗಿದೆ. ಅಮಾಯಕ ಅಧಿಕಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಪ್ರಕರಣ ಸಂಬಂಧ ಇವರೆಗೆ ಯಾವುದೇ ಬಂಧನ ಆಗಿಲ್ಲ. ತಹಶಿಲ್ದಾರ ಕಚೇರಿ ಸಿಸಿಟಿಯನ್ನು ವಶಕ್ಕೆ ಪಡೆದುಕೊಂಡಿಲ್ಲ ಸಾಕ್ಷಿ ನಾಶದ ಅನುಮಾನ ವ್ಯಕ್ತವಾಗಿದೆ ಎಂದು ಹೇಳಿದ್ದಾರೆ.
ಜಿಲ್ಲಾಧಿಕಾರಿ, ನಗರ ಪೊಲೀಸ್ ಆಯುಕ್ತರಿಗೆ ಮನವಿ ಕೊಡ್ತವಿ. ಸಾಕ್ಷಿ ನಾಶ ಮಾಡುವ ಬಗ್ಗೆ ಜನರಿಗೆ ಸಂಶಯವಿದೆ. ಪೊಲೀಸ್ ಇಲಾಖೆ ತನ್ನ ಕೆಲಸ ಮಾಡುತ್ತಿಲ್ಲ. ಸಿಎಂ ಹಾಗೂ ಸಚಿವರ ಒತ್ತಡಕ್ಕೆ ಪೊಲೀಸ್ ಅಧಿಕಾರಿಗಳು ಮಣಿದಿದ್ದಾರೆ. ಪಿಎ ಮಾಡಿರೋ ಕೆಲಸಕ್ಕೆ ಸಚಿವರೇ ಹೊಣೆಯಾಗಿದೆ. ಈ ಪ್ರಕರಣ ಸಿಬಿಐಗೆ ವಹಿಸಬೇಕು ಎನ್ನುವುದು ನಮ್ಮ ಆಗ್ರಹವಾಗಿದೆ. ಪೊಲೀಸ ತನಿಖೆ ಮೇಲೆ ನಮ್ಮಗೆ ನಂಬಿಕೆ ಇಲ್ಲ. ಸಿಬಿಐಗೆ ಪ್ರಕರಣದ ತನಿಖೆ ವಹಿಸಬೇಕು ಎಂದು ಬೆಲ್ಲದ ಆಗ್ರಹಿಸಿದ್ದಾರೆ.