ನಟಿಯರು ಅಂದ್ಮೇಲೆ ಸೋಶಿಯಲ್ ಮೀಡಿಯಾದಲ್ಲಿ ಆಕ್ಟಿವ್ ಆಗಿರೋದು ಕಾಮನ್. ನಟಿಯರು ತಮ್ಮ ಫೋಟೋಸ್ ಅಥವಾ ರೀಲ್ಸ್ ಗಳನ್ನೂ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುವ ಮೂಲಕ ಹೆಚ್ಚ್ಭು ಸಕ್ರಿಯರಾಗಿರುತ್ತಾರೆ. ಇದೀಗ ಅದೇ ಸಾಲಿಗೆ ಬಿಗ್ ಬಾಸ್ ಮಾಜಿ ಸ್ಪರ್ದಿ ನಟಿ ಸಾನಿಯಾ ಅಯ್ಯರ್ ಸೇರಿಕೊಂಡಿದ್ದಾರೆ . ಸಾನಿಯಾ ಅಯ್ಯರ್ ಹೆಚ್ಚಾಗಿ ಪೋಸ್ಟ್ ಮಾಡೋದು ಡಾನ್ಸ್ ವಿಡಿಯೋ.ಅವ್ರು ಹಾಕಿದ ಡಾನ್ಸ್ ವಿಡಿಯೋಗಳಿಗೆ ಕಾಂಮೆಂಟ್ಸ್ಗಳು ಹೆಚ್ಚಾಗಿ ಬರುತ್ತಾ ಇರುತ್ತವೆ. ಇದೀಗ ನಟಿ ಸಾನ್ಯ ಅಯ್ಯರ್ ಹೊಸ ಫೋಟೋ ಶೂಟ್ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಮಿಂಚಿದ್ದಾರೆ.
ಇನ್ನೂ ನಟಿ ಸಾನಿಯಾ ಅಯ್ಯರ್ ಬಿಗ್ ಬಾಸ್ ಬಳಿಕ ಗೌರಿ ಸಿನಿಮಾದಲ್ಲಿ ಬ್ಯುಸಿ ಆಗಿದ್ದರು. ಗೌರಿ ಸಿನಿಮಾವನ್ನು ಇಂದ್ರಜಿತ್ ಲಂಕೇಶ್ ನಿರ್ದೇಶನ ಮಾಡಿದ್ದಾರೆ. ಈ ಸಿನಿಮಾದಲ್ಲಿ ಇಂದ್ರಜಿತ್ ಅವರ ಪುತ್ರ ಸಮರ್ಜಿತ್ ಲಂಕೇಶ್ ನಾಯಕನಾಗಿ ನಟಿಸುವ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿಕೊಟ್ಟಿದ್ರು. ಈ ಸಿನಿಮಾಗೆ ನಾಯಕಿಯಾಗಿ ಸಾನಿಯಾ ಅಯ್ಯರ್ ಕಾಣಿಸಿಕೊಂಡಿದ್ದರು. ಇಬ್ಬರ ಜೋಡಿ ಫ್ರೆಶ್ ಆಗಿರುವ ಕಾರಣದಿಂದ ರೊಮ್ಯಾಂಟಿಕ್ ದೃಶ್ಯಗಳು ಹೈಲೈಟ್ ಆಗಿತ್ತು. ನಾಯಕಿ ಪಾತ್ರದಲ್ಲಿ ಸಾನ್ಯಾ ಐಯ್ಯರ್ ಅವರಿಗೆ ಹೆಚ್ಚು ಸ್ಕ್ರೀನ್ ಸ್ಪೇಸ್ ಗೌರಿ ಸಿನಿಮಾದಲ್ಲಿ ಸಿಕ್ಕಿತ್ತು .
ಇನ್ನೂ ನಟಿ ಸಾನಿಯಾ ಅಯ್ಯರ್ ಗೌರಿ ಸಿನಿಮಾದ ಬಳಿಕ ಹೆಚ್ಚಾಗಿ ಎಲ್ಲೂ ಕಾಣಿಸಿಕೊಂಡಿರಲಿಲ್ಲ. ಇದೀಗ ಡಿಫರೆಂಟ್ ಆಗಿ ಫೋಟೋಶೂಟ್ ಮಾಡಿ ಸಕತ್ ಆಗಿ ಮಿಂಚಿದ್ದಾರೆ.ಸಾನ್ಯಾ ಅಯ್ಯರ್ ಅವರ ಹೊಸ ಫೋಟೋಶೂಟ್ನಲ್ಲಿ ಗುರುತೇ ಸಿಗದಷ್ಟು ಬದಲಾಗಿದ್ದಾರೆ. ಅವರ ಹೇರ್ಸ್ಟೈಲ್ ಸಂಪೂರ್ಣವಾಗಿ ಬದಲಾಗಿದ್ದು , ಕಣ್ಣಿಗೆ ಕನ್ನಡಕ ಹಾಕಿ ಫೋಟೋಗೆ ಪೋಸ್ ಕೊಟ್ಟಿದ್ದಾರೆ .ಇನ್ನು ಈ ಒಂದು ಫೋಟೋಗೆ ಫ್ಯಾನ್ಸ್ ಕಡೆಯಿಂದ ಲೈಕ್ಸ್ ಕೂಡ ಸಿಕ್ಕಿದೆ.
ನಟಿ ಸಾನ್ಯಾ ಅಯ್ಯರ್ ಅವರು ‘ಪುಟ್ಟಗೌರಿಯ ಮದುವೆ’ ಧಾರಾವಾಹಿಗಳಲ್ಲಿ ನಟಿಸಿ ಗಮನ ಸೆಳೆದವರು. ಅವರು ಆ ಬಳಿಕ ‘ಬಿಗ್ ಬಾಸ್ ಕನ್ನಡ ಸೀಸನ್ 9’ ರಲ್ಲಿ ಕಾಣಿಸಿಕೊಂಡರು. ಈಗ ಅವರು ಹೊಸ ಫೋಟೋಶೂಟ್ ಮಾಡಿಸಿದ್ದಾರೆ. ಈ ಫೋಟೋನ ಫ್ಯಾನ್ಸ್ ಇಷ್ಟಪಟ್ಟಿದ್ದಾರೆ. ಇದಕ್ಕೆ ಫ್ಯಾನ್ಸ್ ವಿವಿಧ ರೀತಿಯಲ್ಲಿ ಕಮೆಂಟ್ ಕೂಡ ಮಾಡುತ್ತಿದ್ದಾರೆ. ಇನ್ನು ಕೆಲವರು ಹಾಲಿವುಡ್ ಹೀರೋಯಿನ್ಗಳಿಗೆ ಹೋಲಿಕೆ ಮಾಡಿದ್ದಾರೆ.
ಇನ್ನೂ ನಟಿ ಈ ಫೋಟೋದಲ್ಲಿ ಗ್ರೇ ಕಲರ್ ಓವರ್ ಕೋಟ್ ಹಾಕಿ ಅದಕ್ಕೆ ಮ್ಯಾಚಿಂಗ್ ಆಗಿ ಸ್ಟಾರ್ ಡಿಸೈನ್ ಇರುವ ಬ್ಲಾಕ್ ಶಾರ್ಟ್ಸ್ ಹಾಕಿ,ಕನ್ನಡಕ ಧರಿಸಿಕೊಂಡು ವಿವಿಧ ಪೋಸ್ ನಲ್ಲಿ ಫೋಟೋಶೂಟ್ ಮಾಡಿಸಿದ್ದಾರೆ. ನಟಿಯ ಈ ಫೋಟೋಶೂಟ್ ಗೆ ಫ್ಯಾನ್ಸ್ ಫಿದಾ ಆಗಿದ್ದಾರೆ. ಇನ್ನು ಸಾನಿಯಾ ಅಭಿಮಾನಿಗಳಂತೂ ಸಾನಿಯಾ ಮುಂದಿನ ಸಿನಿಮಾ ಯಾವುದು ಅನ್ನೋದನ್ನ ಕಾತುರದಿಂದ ವೇಟ್ ಮಾಡ್ತಾ ಇದ್ದಾರೆ.