ದಿನಕ್ಕೊಂದು ಸೇಬು ತಿಂದರೆ ವೈದ್ಯರಿಂದ ದೂರವಿರಬಹುದು ಎನ್ನುವ ನಾಣ್ಣುಡಿಯನ್ನು ನೀವು ಕೇಳಿರಬಹುದು. ಸೇಬು ಸಾಕಷ್ಟು ಪೋಷಕಾಂಶಗಳಿಂದ ಸಮೃದ್ಧವಾಗಿದೆ. ಇದು ದೇಹದ ಪ್ರತಿರಕ್ಷಣಾ ವ್ಯವಸ್ಥೆ ಹೆಚ್ಚಳ ಮತ್ತು ಆರೋಗ್ಯಕರ ಬ್ಯಾಕ್ಟೀರಿಯಾಗಳ ಮೂಲಕ ಅನೇಕ ರೋಗಗಳಿಂದ ನಮ್ಮನ್ನು ರಕ್ಷಿಸುತ್ತದೆ. ಜೊತೆಗೆ ಸೇಬುಗಳು ಫೈಬರ್, ಆಂಟಿಆಕ್ಸಿಡೆಂಟ್ಗಳು, ವಿಟಮಿನ್ಗಳು ಮತ್ತು ಖನಿಜಗಳನ್ನು ಹೊಂದಿರುತ್ತವೆ. ಆದರೆ ಈಗ ಎದ್ದಿರುವ ಪ್ರಶ್ನೆ ಏನೆಂದರೆ, ಸೇಬನ್ನು ಸಿಪ್ಪೆ ತೆಗೆದು ಅಥವಾ ಸಿಪ್ಪೆ ಸಮೇತ ತಿನ್ನಬೇಕೇ ? ಒಂದು ವೇಳೆ ಸೇಬಿನ ಸಿಪ್ಪೆ ತಿಂದರೆ ಏನಾಗುತ್ತದೆ ?
ಸೇಬಿನ ಸಿಪ್ಪೆಯಲ್ಲಿ ವಿಟಮಿನ್ ಎ ಮತ್ತು ಸಿ ಸಮೃದ್ಧವಾಗಿದೆ. ಸೇಬಿನ ಸಿಪ್ಪೆಯು ಸರಾಸರಿ 8.4 ಮಿ ಗ್ರಾಂ ವಿಟಮಿನ್ ಸಿ ಅನ್ನು ಹೊಂದಿರುತ್ತದೆ. ಸೇಬಿನ ಸಿಪ್ಪೆಗಳು ಕ್ಯಾನ್ಸರ್ ಕೋಶಗಳನ್ನು ನಾಶಮಾಡುವ ಸಾಮರ್ಥ್ಯವನ್ನು ಹೊಂದಿರುತ್ತೆ . ಸೇಬಿನ ಸಿಪ್ಪೆಗಳು ಕರಗುವ ಮತ್ತು ಕರಗದ ಫೈಬರ್ ಅನ್ನು ಹೊಂದಿರುತ್ತವೆ. ಇದು ಮಲಬದ್ಧತೆಯನ್ನು ತಡೆಯುತ್ತದೆ, ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡುತ್ತದೆ.
ಸೇಬಿನ ಸಿಪ್ಪೆಯಲ್ಲಿ ಉತ್ಕರ್ಷಣ ನಿರೋಧಕಗಳು ಸಮೃದ್ಧವಾಗಿದ್ದು , ಇದು ಶ್ವಾಸಕೋಶದ ಕ್ಯಾನ್ಸರ್ ಅಪಾಯವನ್ನು ಕಡಿಮೆ ಮಾಡುತ್ತದೆ. ಇದಷ್ಟೇ ಅಲ್ಲದೇ ಈ ಹಣ್ಣಿನಲ್ಲಿ ಕ್ವೆರ್ಸೆಟಿನ್ ಎಂಬ ಫ್ಲೇವನಾಯ್ಡ್ ಇದ್ದು ಅದು ಶ್ವಾಸಕೋಶವನ್ನು ಆರೋಗ್ಯಕರವಾಗಿಡಲು ಸಹಾಯ ಮಾಡುತ್ತದೆ. ವಾರಕ್ಕೆ ಐದು ಅಥವಾ ಅದಕ್ಕಿಂತ ಹೆಚ್ಚು ಸೇಬುಗಳನ್ನು ತಿನ್ನುವವರು ಆರೋಗ್ಯಕರವಾದ ಶ್ವಾಸಕೋಶವನ್ನು ಹೊಂದಿರುತ್ತಾರೆ.
ನೀವು ತೂಕವನ್ನು ವೇಗವಾಗಿ ಕಳೆದುಕೊಳ್ಳಲು ಬಯಸುತ್ತಿದ್ದರೆ, ಸಿಪ್ಪೆ ಸಮೇತ ಸೇಬುಗಳನ್ನು ತಿನ್ನಿ. ಸೇಬಿನ ಸಿಪ್ಪೆಯಲ್ಲಿ ಉರ್ಸೋಲಿಕ್ ಆಮ್ಲವಿದ್ದು ತೂಕ ಇಳಿಕೆಗೆ ಸಹಾಯ ಮಾಡುತ್ತದೆ. ಇದಕ್ಕೆ ಕಾರಣವೆಂದರೆ ಮಾರುಕಟ್ಟೆಯಲ್ಲಿ ದೊರೆಯುವ ಸೇಬಿನ ಸಿಪ್ಪೆಗೆ ಅಂಟಿಸಲಾದ ಸ್ಟಿಕ್ಕರ್ಗಳು. ಇದು ದೇಹಕ್ಕೆ ಹಾನಿಯುಂಟು ಮಾಡುತ್ತದೆ.
ಇದಲ್ಲದೇ ಸೇಬು ಬೇಗ ಹಣ್ಣಾಗಾಲಿ ಎಂದು ಇತ್ತೀಚಿನ ದಿನಗಳಲ್ಲಿ ವಿವಿಧ ರಾಸಾಯನಿಕಗಳು ಮತ್ತು ಕೀಟನಾಶಕಗಳನ್ನು ಬಳಸಲಾಗುತ್ತದೆ. ಈ ಹಾನಿಕಾರಕ ರಾಸಾಯನಿಕಗಳು ಹಣ್ಣಿನ ಗುಣಮಟ್ಟವನ್ನು ಕಡಿಮೆ ಮಾಡುತ್ತದೆ, ಹೆಚ್ಚಾಗಿ ಹಣ್ಣಿನ ಹೊರಭಾಗದ ಮೇಲೆ ಪರಿಣಾಮ ಬೀರುತ್ತದೆ. ಸೇಬಿನ ಮೇಲೆ ಕಪ್ಪು ಕಲೆಗಳು ಕಂಡು ಬಂದರೆ, ಅವುಗಳನ್ನು ತಿನ್ನಬಾರದು ಎಂಬುವುದನ್ನು ಮರೆಯಬೇಡಿ.
ಅಲರ್ಜಿಗಳು ಮತ್ತು ಕೀಟಗಳ ಆಕ್ರಮಣಗಳು ಹಣ್ಣಿನ ಸಿಪ್ಪೆಯ ಮೇಲೆ ಪರಿಣಾಮ ಬೀರುತ್ತವೆ. ಇದರಿಂದ ಅನೇಕ ಸೇಬುಗಳ ಸಿಪ್ಪೆಯ ಮೇಲೆ ಕಪ್ಪು ಕಲೆಗಳು ಅಥವಾ ಸಣ್ಣ ರಂಧ್ರಗಳಿರುವುದನ್ನು ನೀವು ಗಮನಿಸಬಹುದು. ಹಾಗಾಗಿ ಇಂತಹ ಸೇಬಿನ ಸಿಪ್ಪೆ ತೆಗೆದು ತಿನ್ನುವಂತೆ ಹೇಳುತ್ತಾರೆ . ಹೀಗಿದ್ದರೂ ಸೇಬನ್ನು ಸಿಪ್ಪೆ ಸಮೇತ ತಿನ್ನಲು ನೀವು ಬಯಸುವುದಾದರೆ, ಆಪಲ್ ತಿನ್ನುವ ಮುನ್ನ ಎರಡು ಮೂರು ಬಾರಿ ಉಗುರು ಬೆಚ್ಚಗಿನ ನೀರಿನಲ್ಲಿ ತೊಳೆದು ತಿನ್ನಿ.