ಭಾರತೀಯರು ಚಹಾ ಪ್ರಿಯರಾಗಿದ್ದು , ಬಹುತೇಕ ಮಂದಿ ಬೆಳಗ್ಗೆ ಎದ್ದ ತಕ್ಷಣ ಚಹಾ ಕುಡಿಯುವುದು ಅಭ್ಯಾಸವಾಗಿರುತ್ತೆ …. ಇದಾದ ನಂತರ ಮಾತ್ರ ಉಳಿದ ಕೆಲಸವನ್ನು ಮಾಡುತ್ತಾರೆ. ಏಕೆಂದರೆ ಚಹಾ ಕುಡಿದ ನಂತರ ನಮಗೆ ಹೊಸ ಎನರ್ಜಿ ಸಿಕ್ಕಂತೆ ಅನಿಸುತ್ತದೆ. ಜೊತೆಗೆ ಈ ಶಕ್ತಿಯಿಂದ ದಿನವಿಡೀ ನಾವು ಲವಲವಿಕೆಯಿಂದ ಕೂಡಿರುತ್ತೇವೆ ಎಂದು ಜನ ಭಾವಿಸುತ್ತಾರೆ. ದಕ್ಷಿಣ ಭಾರತದಲ್ಲಿ ಜನ ಹೆಚ್ಚಾಗಿ ಚಹಾ ಕುಡಿಯುತ್ತಾರೆ. ಮನೆಗೆ ಯಾರೇ ಅತಿಥಿ, ಸ್ನೇಹಿತರು ಬಂದಾಗ, ಚಹಾ ತಯಾರಿಸಿ ನೀಡುವುದು ವಾಡಿಕೆ. ಕೆಲವೊಮ್ಮೆ ಬೋರ್ ಆದಾಗ, ಆಲಸ್ಯ ಉಂಟಾದಾಗಲೂ ಚಹಾ ತಯಾರಿಸಿ ಜನ ಕುಡಿಯುತ್ತಾರೆ. ಅಲ್ಲದೇ ಚಹಾದಲ್ಲಿ ವೆರೈಟಿ ಇದ್ದು, ಸಾಕಷ್ಟು ಪರಿಮಳದಿಂದ ಕೂಡಿರುತ್ತದೆ. ಅವುಗಳಲ್ಲಿ ಏಲಕ್ಕಿ, ಶುಂಠಿ, ಹುಲ್ಲು, ಲವಂಗ, ದಾಲ್ಚಿನ್ನಿ ಚಹಾ ಎಲ್ಲರಿಗೂ ಅಚ್ಚುಮೆಚ್ಚುವಾಗುತ್ತೆ
.
ವಿಶೇಷವಾಗಿ ಶುಂಠಿ ಆರೋಗ್ಯಕ್ಕೆ ಬಹಳ ಒಳ್ಳೆಯದು. ಹೀಗಾಗಿ ಶೀತ, ನೆಗಡಿ ಮತ್ತು ಕೆಮ್ಮು ಸಮಸ್ಯೆಯಿಂದ ಬಳಲುತ್ತಿರುವಾಗ ಚಹಾಕ್ಕೆ ಶುಂಠಿಯನ್ನು ಕುಡಿಯುತ್ತಾರೆ. ಆದರೆ ಅನೇಕ ಮಂದಿಗೆ ಶುಂಠಿ ಚಹಾ ತಯಾರಿಸುವಾಗ ಶುಂಠಿಯನ್ನು ಯಾವಾಗ ಹಾಕಬೇಕು ಎಂದು ತಿಳಿಯದೇ, ಯಾವಾಗಲೋ ಹಾಕುತ್ತಾರೆ. ಇದರಿಂದ ಈ ಚಹಾದ ರುಚಿಯೇ ಹಾಳಾಗುತ್ತದೆ. ಹಾಗಾಗಿ ಚಹಾಕ್ಕೆ ಶುಂಠಿಯನ್ನು ಯಾವಾಗ ಸೇರಿಸಬೇಕು ಎಂಬುವುದು ಬಹಳ ಮುಖ್ಯವಾಗಿದೆ. ಯಾವಾಗಲೂ ಸರಿಯಾದ ಸಮಯಕ್ಕೆ ಚಹಾಕ್ಕೆ ಶುಂಠಿಯನ್ನು ಹಾಕಿದಾಗ ಮಾತ್ರ ಅದರ ಉತ್ತಮ ರುಚಿ ಉತ್ತಮವಾಗಿರುತ್ತದೆ. ಹಾಗಾದ್ರೆ ಫರ್ಫೆಕ್ಟ್ ಆಗಿ ಶುಂಠಿ ಟೀ ಮಾಡುವುದು ಹೇಗೆ ಅಂತ ನಾವಿಂದು ತಿಳಿಯೋಣ ಬನ್ನಿ
ಯಾವಾಗಲೂ ಚಹಾ ತಯಾರಿಸುವಾಗ ಕೆಲವರು ಟೀ ಪಾತ್ರೆಯಲ್ಲಿ ಹಾಲು, ಸಕ್ಕರೆ, ಟೀ ಎಲೆಗಳು, ಶುಂಠಿ ಮತ್ತು ನೀರು ಎಲ್ಲವನ್ನು ಒಟ್ಟಿಗೆ ಸೇರಿಸಿ ಬಿಸಿ ಮಾಡುತ್ತಾರೆ. ನೀವೂ ಇದೇ ತಪ್ಪನ್ನು ಮಾಡುತ್ತಿದ್ದರೆ ಮೊದಲು ಬಿಟ್ಟುಬಿಡಿ. ಇದರಿಂದ ನೀವು ಮಾಡುವ ಚಹಾದ ರುಚಿ ಕಹಿ ಆಗುತ್ತದೆ. ಎಲ್ಲವನ್ನೂ ಒಟ್ಟಿಗೆ ಬೆರೆಸುವುದರಿಂದ ಚಹಾದ ಟೇಸ್ಟ್ ಕೂಡ ಹಾಳಾಗುತ್ತೆ. ಹಾಗಾಗಿ ಯಾವಾಗಲೂ ಮೊದಲು ಒಂದು ಪಾತ್ರೆಯಲ್ಲಿ ನೀರು, ಹಾಲು ಮತ್ತು ಸಕ್ಕರೆಯನ್ನು ಹಾಕಿ ಕುದಿಸಿ. ಈ ಸಮಯದಲ್ಲಿಯೇ ಶುಂಠಿ ಸಿಪ್ಪೆಯನ್ನು ತೆಗೆದು ಚಿಕ್ಕದಾಗಿ ಕತ್ತರಿಸಿ ಅಥವಾ ಶುಂಠಿಯನ್ನು ತುಂಬಾ ಚಿಕ್ಕದಾಗಿ ತುರಿಯಿರಿ. ಇದರ ರಸವು ಪಾತ್ರೆಯಿಂದ ಹೊರಗುಳಿಯುತ್ತದೆ. ಆದ್ದರಿಂದ ಶುಂಠಿಯನ್ನು ಕತ್ತರಿಸಿ ಅಥವಾ ಲಘುವಾಗಿ ತುರಿಯಿರಿ. ಅದಾದ ನಂತರ, ಶುಂಠಿಯನ್ನು ಚಹಾಕ್ಕೆ ಸೇರಿಸಿ ಮತ್ತು 1 ನಿಮಿಷ ಕುದಿಸಿ.
ಈಗ ಟೀ ಎಲೆಗಳು ಅಥವಾ ಪುಡಿ ಸೇರಿಸಿ, 1-2 ನಿಮಿಷ ಕುದಿಸಿ. ನೀವು ಎಷ್ಟು ಕಪ್ ಚಹಾ ಮಾಡುತ್ತಿದ್ದೀರಿ ಎಂಬುವುದರ ಅಳತೆಗೆ ತಕ್ಕಂತೆ ಎಲ್ಲವನ್ನೂ ಬೆರೆಸಿ. ಶುಂಠಿ ನೈಸರ್ಗಿಕ ಉರಿಯೂತ ನಿವಾರಕ ಮತ್ತು ಆಂಟಿಮೈಕ್ರೊಬಿಯಲ್ ಗುಣಲಕ್ಷಣಗಳನ್ನು ಹೊಂದಿದ್ದು , ಇದು ಶೀತ ಮತ್ತು ಜ್ವರದ ಸಾಮಾನ್ಯ ರೋಗಗಳಿಗೆ ಅತ್ಯುತ್ತಮ ಪರಿಹಾರವಾಗಿದೆ. ಅಲ್ಲದೇ ಶುಂಠಿ ಚಹಾವನ್ನು ಕುಡಿಯುವುದರಿಂದ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ.
ಚಳಿಗಾಲದಲ್ಲಿ ಅನೇಕ ರೋಗಗಳನ್ನು ತಡೆಗಟ್ಟುವಲ್ಲಿ ಶುಂಠಿ ಪ್ರಮುಖ ಪಾತ್ರವಹಿಸುತ್ತದೆ. ಹಾಗಾಗಿ ಶೀತ, ಕೆಮ್ಮು ಮತ್ತು ಗಂಟಲು ನೋವಿಗೆ ಶುಂಠಿ ಚಹಾ ಉತ್ತಮ ಮದ್ದು ಎಂದೇ ಹೇಳಬಹುದು.