ರಾಜ್ಯದಲ್ಲಿ ಔಷಧ ಪೂರೈಕೆಗೆ ಕರ್ನಾಟಕ ಸ್ಟೇಟ್ ಮಿನರಲ್ಸ್ ಕಾರ್ಪೋರೇಶನ್ ಲಿಮಿಟೆಡ್ ಕೋಟ್ಯಾಂತರ ರೂಪಾಯಿ ಖರ್ಚು ಮಾಡುತ್ತದೆ. ವಿವಿಧ ಟೆಂಡರ್ ಪ್ರಕ್ರಿಯೆ ಮುಗಿದಿದ್ದರೂ ಆದೇಶಪತ್ರ ನೀಡುವುದಕ್ಕೆ ವಿಳಂಬವಾಗಿದೆ. ಈ ಹಿನ್ನೆಲೆ ಜೀವರಕ್ಷಕ ಔಷಧಗಳು ಪೂರೈಕೆಯಾಗುತ್ತಿಲ್ಲ ರಾಜ್ಯದ ಸರ್ಕಾರಿ ಆಸ್ಪತ್ರೆಗಳಲ್ಲಿ ಔಷಧಿಗಳ ಅಭಾವ ಹೆಚ್ಚಾಗಿದ್ದು.., ಸರಿಯಾದ ಸಮಯಕ್ಕೆ ಔಷಧಿಗಳು ಸಿಗದೇ ಜನರು ಪರದಾಡುವಂತಾಗಿದೆ.. ಹಾಗಾದರೆ ಯಾವೆಲ್ಲಾ ಔಷಧಿಗಳು ಔಟ್ ಆಫ್ ಸ್ಟಾಕ್ ಅಂತೀರಾ ಈ ಕುರಿತ ಕಂಪ್ಲೀಟ್ ಡೀಟೆಲ್ಸ್ ಇಲ್ಲಿದೆ ನೋಡಿ..
ಸಾಮಾನ್ಯವಾಗಿ ಬಡ ಮತ್ತು ಮಧ್ಯಮ ವರ್ಗದ ಜನರು ಹೆಚ್ಚಾಗಿ ಸರ್ಕಾರಿ ಆಸ್ಪತ್ರೆಗಳನ್ನೇ ಅವಲಂಬಿಸಿದ್ದಾರೆ. ಸಣ್ಣ ಆರೋಗ್ಯ ಸಮಸ್ಯೆಯೇ ಆಗಿರಲಿ.., ಅಥವಾ ದೊಡ್ಡ ಆರೋಗ್ಯ ಸಮಸ್ಯೆಯೇ ಆಗಲಿ ಮೊದಲು ಹೋಗೋದೇ ಸರ್ಕಾರಿ ಆಸ್ಪತ್ರೆಗಳಿಗೆ.. ಆದರೆ ಚಿಕಿತ್ಸೆ ಅಂತ ಬರೋ ರೋಗಿಗಳಿಗೆ ಸರಿಯಾಗಿ ಸಂಜೀವಿನಿಯಾಗಿರುವ ಔಷಧಿ ಸಿಗ್ತಿಲ್ಲ ಅನ್ನೋ ಆಘಾತಕಾರಿ ವಿಚಾರ ಬೆಳಕಿಗೆ ಬಂದಿದೆ. ಹೌದು.. ರಾಜ್ಯದ ಬಹುತೇಕ ಸರ್ಕಾರಿ ಆಸ್ಪತ್ರೆಗಳಲ್ಲಿ ಜನರಿಗೆ ಬೇಕಿರೋ ಔಷಧಿಗಳು ಸಿಗದೇ ಒರದಾಡುವಂತಾಗಿದ್ದು.., ಖಾಸಗಿ ಮೆಡಿಕಲ್ ಶಾಪ್ಗಳಲ್ಲಿ ಹೆಚ್ಚಿನ ಹಣ ಕೊಟ್ಟು ಔಷಧಗಳನ್ನ ಪಡೆಯುವಂತಾಗಿದೆ. ಕಳೆದ ಒಂದು ತಿಂಗಳಿಂದ ರೋಗಿಗಳಿಗೆ ಬೇಕಾದ ಬ್ಯಾಂಡೇಜ್ ಕ್ಲಾತ್, ಕಾಟನ್, ಸರ್ಜಿಕಲ್ ಗ್ಲೌಸ್, ಗ್ಲೂಕೋಸ್ ಬಾಟಲ್, ಆ್ಯಂಟಿಬಯೋಟಿಕ್ ಮಾತ್ರೆ, ಪ್ಯಾರಸೆಟೋಮೋಲ್, ಡಯಬಿಟಿಸ್, ಬಿಪಿ, ರಕ್ತಹೀನತೆ, ನ್ಯೂಮೋನಿಯಾ, ಅಸ್ತಮಾ ಸೇರಿದಂತೆ ಸುಮಾರು 250ಕ್ಕೂ ಹೆಚ್ಚು ಔಷಧಿಗಳು ಔಟ್ಆಫ್ ಸ್ಟಾಕ್ ಆಗಿದ್ದು.., ಮೆಡಿಕಲ್ಗೆ ಹೋದಾ ರೋಗಿಗಳು ಹಾಗೂ ಸಂಬಂಧಿಕರು ಬರೀ ಕೈಯಲ್ಲಿ ಬರುವ ಸ್ಥಿತಿ ನಿರ್ಮಾಣವಾಗಿದೆ..
ಇನ್ನೂ.. ರಾಜ್ಯದಲ್ಲಿ ಔಷಧಿ ಅಭಾವ ಕುರಿತು ಸಚಿವ ದಿನೇಶ್ ಗುಂಡೂರಾವ್ ಪ್ರತಿಕ್ರಿಯೆ ನೀಡಿದ್ದು.., ಕೆಲವು ಔಷಧಿಗಳನ್ನ ಖರೀದಿ ಮಾಡುವ ಪ್ರಕ್ರಿಯೆ ಅಂತಿಮವಾಗಿಲ್ಲ.. ಕೆಲ ತಾಂತ್ರಿಕ ಕಾರಣದಿಂದ ಟೆಂಡರ್ ವಿಳಂಬವಾಗಿದೆ.. ಹೀಗಾಗಿ ಸ್ಥಳೀಯ ಮಟ್ಟದಲ್ಲಿ ಔಷಧಿ ಖರೀದಿ ಮಾಡಲು ಸೂಚನೆ ಕೊಟ್ಟಿದ್ದೇವೆ.. ಔಷಧಿ ಖರೀದಿಸಲು ಹಣ ಕೂಡ ಒದಗಿಸಿದ್ದೇವೆ.. ನಮ್ಮ ಸರ್ಕಾರ ಬರುವ ಮುನ್ನ ಕೇಬಲ 40% ಮಾತ್ರ ಔಷಧಿ ಪೂರೈಕೆಯಾಗುತ್ತಿತ್ತು.. ಆದರೆ ಇದೀಗಾ 75% KSMSCL ನಿಂದಲೇ ಔಷಧಿ ಸರಬರಾಜು ಮಾಡುತ್ತಿದ್ದೇವೆ.. ಸದ್ಯ ನಮ್ಮ ಆರೋಗ್ಯ ಕೇಂದ್ರಗಳಲ್ಲಿ ಹಾಗೂ ಆಸ್ಪತ್ರೆಗಳಲ್ಲಿ ಔಷಧಿಗಳ ಕೊರತೆ ಇಲ್ಲ, ಯಾವ ಔಷಧಿಗಳು ಇಲ್ಲ ಅದನ್ನು ಸ್ಥಳೀಯವಾಗಿ ಖರೀದಿ ಮಾಡಲು ಹೇಳಿದ್ದೇವೆ ಎಂದು ಸಚಿವ ದಿನೇಶ್ ಗುಂಡೂರಾವ್ ತಿಳಿಸಿದರು..
ಒಟ್ನಲ್ಲಿ.. ಸರ್ಕಾರಿ ಆಸ್ಪತ್ರೆಗಳಲ್ಲಿ ಔಷಧಿ ಕೊರತೆ ಎದ್ದು ಕಾಣುತ್ತಿದ್ದು.., ಇದರಿಂದಾಗಿ ಬಡ ಹಾಗೂ ಮಧ್ಯಮ ವರ್ಗದ ಜನರು ತತ್ತರಿಸುವಂತೆ ಆಗಿದೆ.. ಹೀಗಾಗಿ ಆರೋಗ್ಯ ಇಲಾಖೆ ಆದಷ್ಟು ಬೇಗ ಸಮಸ್ಯೆ ಬಗೆಹರಿಸಬೇಕಿದೆ. ಇಲ್ಲದಿದ್ರೆ ಮುಂದೆ ಮತ್ತಷ್ಟು ದೊಡ್ಡ ಸಮಸ್ಯೆಗಳು ಉಲ್ಬಣವಾಗೋ ಸಾಧ್ಯತೆ ದಟ್ಟವಾಗಿರೋದಂತು ನಿಜ.. ಆದರೆ , ಬೇರೆ ರಾಜ್ಯಕ್ಕೆ ಹೋಲಿಸಿದರೆ ಟೆಂಡರ್ ಪ್ರಕ್ರಿಯೆಯಲ್ಲಿ ಕರ್ನಾಟಕ ಸ್ಟೇಟ್ ಮಿನರಲ್ಸ್ ಕಾರ್ಪೋರೇಶನ್ ಲಿಮಿಟೆಡ್ ಭಾರೀ ಹಿಂದೆದೆ. ಇದೀಗ ಇದರ ಪರಿಣಾಮ ಸಾಮಾನ್ಯ ವರ್ಗದ ರೋಗಿಗಳ ಮೇಲೆ ಬೀಳುತ್ತಿದೆ.