ಕನ್ನಡ ರೋಮಾಂಚನವೀ ಕನ್ನಡ.. ನವರಸಗಳ ರಸದೂಟ ಸವಿಯುವ ಕನ್ನಡ ಹಬ್ಬ ಶುರುವಾಗಿದೆ. ನವೆಂಬರ್ 16 , 2024 ರಂದು ನಡೆದ ನಗರದ ಪ್ರತಿಷ್ಠಿತ ಪ್ರೆಸ್ಟೀಜ್ ಫಾಲ್ಕನ್ ಸಿಟಿ ಯಲ್ಲಿ 6ನೇ ವರ್ಷದ ಕರ್ನಾಟಕ ರಾಜ್ಯೋತ್ಸವ ಅದ್ದೂರಿಯಾಗಿ ನಡೆಯಿತು . ಇದಷ್ಟೇ ಅಲ್ಲ, ಕನ್ನಡ ಹಬ್ಬದಲ್ಲಿ ಪುಸ್ತಕ ಮೇಳ, ಕನ್ನಡ ಭಾಷೆ ಬೆಳವಣಿಗೆಯ ಗೋಷ್ಠಿಗಳು, , ಸಂಗೀತ ಕಛೇರಿಗಳು, ಮತ್ತು ಪ್ರದರ್ಶನಗಳು, ಖ್ಯಾತ ನಟ-ನಟಿಯರ ಪ್ರೋತ್ಸಾಹದಾಯಕ ಮಾತುಗಳು, ಸ್ವಾರಸ್ಯಕರ ಕಿವಿಮಾತು ಹೀಗೆ ಎಲ್ಲವೂ ಒಂದೇ ವೇದಿಕೆಯಲ್ಲಿ ವೈವಿಧ್ಯಮಯ ಕಾರ್ಯಕ್ರಮಗಳು ನಡೆದಿದೆ . ಮನರಂಜನೆಯ ರಸ ಔತಣವನ್ನು ಸವಿಯಲು ಮಿಸ್ ಮಾಡದೆ ಬನ್ನಿ.
ಪ್ರತಿಷ್ಠಿತ ಪ್ರೆಸ್ಟೀಜ್ ಫಾಲ್ಕನ್ ಸಿಟಿ ಯಲ್ಲಿ 6ನೇ ವರ್ಷದ ನಡೆಸಿದ ಕನ್ನಡ ಹಬ್ಬದಲ್ಲಿ ಸಂಸದರು ಆದಂತಹ ಹೃದಯ ತಜ್ಞ ಶ್ರೀಯುತ ಡಾ.. ಸಿ ಎನ್, ಮಂಜುನಾಥ್ ಆಗಮಿಸಿ ಹಬ್ಬಕ್ಕೆ ಮೆರಗು ತಂದಿದ್ದರು … ಸಿ. ಎನ್ ಮಂಜುನಾಥ್ ಅವರ ಮಾತುಗಳ ಎಲ್ಲರ ಗಮನ ಸೆಳೆಯಿತು. ನಮ್ಮ ಕನ್ನಡ ಭಾಷೆಯ ಕುರಿತು ಅದ್ಭುತವಾಗಿ ಮಾತನಾಡಿದರು.
ಕನ್ನಡ ಸಂಘದ ಅಧ್ಯಕ್ಷರು ಹಾಗೂ ಪಿಎಫ್ಸಿ ಸಂಘದ ಅಧ್ಯಕ್ಷರು ಉಪಾಧ್ಯಕ್ಷರ ಉಪಸ್ಥಿತಿಯಲ್ಲಿ ಕಾರ್ಯಕ್ರಮವು ಅದ್ದೂರಿಯಾಗಿ ಉದ್ಘಾಟನೆಯಾಯಿತು.ಕಾರ್ಯಕ್ರಮದ ಯಶಸ್ಸಿಗೆ ಕಾರಣರಾದ ಪ್ರಾಯೋಜಕ ರನ್ನು ಗೌರವಿಸಲಾಯಿತು . PFC ಯಲ್ಲಿ ಸಾಧನೆ ಮಾಡಿದ ಸಾಧಕರನ್ನು ಗುರುತಿಸಿ ಅವರನ್ನು ಕೂಡ ಸನ್ಮಾನಿಸಿ , ಗೌರವಿಸಲಾಯಿತು .
ಕನ್ನಡ ಹಬ್ಬದ ಕಾರ್ಯಕ್ರಮಕ್ಕೆ ಖ್ಯಾತ ಹಿರಿಯ ನಟ ಶ್ರೀನಾಥ್ , ಮತ್ತು ನಟ ಹಾಗೂ ಕಲಾ ನಿರ್ದೇಶಕರು ಆದಂತಹ ಶ್ರೀ ಅರುಣ್ ಸಾಗರ್ ಅವರು ಆಗಮಿಸಿದ್ದರು … ಶ್ರೀನಾಥ್ ಅವರ ಅಭಿನಯದ ಗೀತೆಗಳನ್ನು ಗಾನಲಹರಿ ಮೂಲಕ ಸಂಗೀತ ನಡೆಸಿ ಕೊಡಲಾಯಿತು.. ಶ್ರೀನಾಥ್ ನಮ್ಮ ಕನ್ನಡ ಭಾಷೆಯ ಕುರಿತು ಅದ್ಭುತವಾಗಿ ಮಾತನಾಡಿದರು.
ಕನ್ನಡಿಗರು ಮತ್ತು ಕನ್ನಡೇತರರನ್ನು ಒಟ್ಟಾಗಿ ಬೆಸೆಯುವ ಉದ್ದೇಶದಿಂದ ಈ ಹಬ್ಬ ಆಚರಿಸಲಾಗುತ್ತಿದೆ. ಮಕ್ಕಳಿಂದ, ವೃದ್ಧರವರೆಗೆ ಎಲ್ಲಾ ವರ್ಗದವರನ್ನೂ ಸೆಳೆಯುವ ಕರುನಾಡ ಸಂಭ್ರಮದ ಹಬ್ಬ ಇದಾಗಿದ್ದು , ದಣಿದವರಿಗಾಗಿ ತಿನ್ನಲು ಆಹಾರ ಮೇಳವೂ ಇರಲಿದೆ. ಬೇಕಾದ ಮನರಂಜನೆ ಕಾರ್ಯಕ್ರಮ ನೋಡುತ್ತಾ, ತಮಗೆ ಬೇಕಾದ ತಿಂಡಿಗಳನ್ನು ತಿನ್ನುತ್ತಾ ವಾರಾಂತ್ಯವನ್ನು ಖುಷಿಯಿಂದ ಕಳೆಯಬಹುದು. ಕನ್ನಡ ಹಬ್ಬದಲ್ಲಿ ಕಲೆ, ಸಾಹಿತ್ಯ, ಸಂಗೀತ, ಸಿನಿಮಾ, ಜನಪದ, ಹಾಸ್ಯ, ಆಹಾರ, ಆರೋಗ್ಯ, ವ್ಯಾಪಾರ ಹೀಗೆ ಎಲ್ಲವೂ ಇತ್ತು.