ರಾಜ್ಯದಲ್ಲಿ ಈಗಾಗ್ಲೇ 14 ಲಕ್ಷ ಕಾರ್ಡ್ ರದ್ದು ಹಾಗೂ ಪರಿಷ್ಕರಣೆ ಮಾಡಲು ಮುಂದಾಗಿರುವ ರಾಜ್ಯ ಸರ್ಕಾರ ಈ ಪರಿಷ್ಕರಣೆ ಬೆನ್ನಲ್ಲೇ ಕಟ್ಟಡ ಕಾರ್ಮಿಕರಿಗೆ ಸಿಹಿ ಸುದ್ದಿ ಕೊಟ್ಟಿದೆ ರಾಜ್ಯ ಸರ್ಕಾರ. ಯಾಕಂದ್ರೆ ಈಗಾಗ್ಲೇ ಕಟ್ಟಡ ಕಾರ್ಮಿಕರೀಗೆ ಹಲವು ಯೋಜನೆಗಳನ್ನು ಜಾರಿ ಮಾಡಿರುವ ರಾಜ್ಯ ಸರ್ಕಾರ ಈ ಹಲವು ಯೋಜನೆಗಳ ನಡುವೆ ಇನ್ನುಮುಂದೆ ಇದೀಗ ಕಟ್ಟಡ ಕಾರ್ಮಿಕರಿಗೆ ಈ ಶ್ರಮ ಕಾರ್ಡ್ ಹೊಂದಿರುವವರಿಗೆ ಯಾವುದೇ ಮಾನದಂಡ ಇಲ್ಲದೆ ನೇರವಾಗಿ ಬಿಪಿಎಲ್ ಕಾರ್ಡ್ ನೀಡಲು ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆ ಮುಂದಾಗಿದೆ.
ಇನ್ನು ಬೆಂಗಳೂರು ನಗರ ಒಂದರಲ್ಲೇ ಒಟ್ಟು 9 ಸಾವಿರಕ್ಕೂ ಹೆಚ್ಚು ಜನರು ಈಗಾಗ್ಲೇ ಈ ಶ್ರಮ ಕಾರ್ಡ್ ದಾರರು ಬಿಪಿಎಲ್ ಕಾರ್ಡ್ ನೇರವಾಗಿ ಪಡೆಯಲು ಅರ್ಹರು ಆಗಿದ್ದಾರೆ. ಇನ್ನು ಈ ಕಾರ್ಡ್ ನೀಡಲು ಆಹಾರ ಇಲಾಖೆ ಹಾಗೂ ಕಾರ್ಮಿಕ ಇಲಾಖೆಯ ಅಧಿಕಾರಿಗಳು ನಗರದ ಹಲವು ಭಾಗದಲ್ಲಿ ಕ್ಯಾಂಪ್ ಮಾಡುತ್ತಿದ್ದಾರೆ. ಕಾರ್ಮಿಕರು ಈ ಕ್ಯಾಂಪ್ ನಲ್ಲಿ ಹೋಗಿ ಕಾರ್ಡ್ ಗೆ ಆರ್ಜಿ ಸಲ್ಲಿಸಬಹುದು. ಹಾಗೂ ಕಾರ್ಮಿಕರು ನೇರವಾಗಿ ಆಹಾರ ಇಲಾಖೆ ಹಾಗೂ ಕಾರ್ಮಿಕ ಇಲಾಖೆ ಗೆ ಹೋಗಿಯು ಸಹ ಕಾರ್ಡ್ ಗೆ ಆರ್ಜಿ ಸಲ್ಲಿಸಬಹುದು. ಹಾಗೂ ಈ ಕಾರ್ಡ್ ಪಡೆಯಲು ಯಾವುದೇ ಇನ್ಕಮ್ ಹಾಗೂ ಜಾತಿ ಪ್ರಮಾಣ ಪತ್ರ ಇಲ್ಲದೆ ಹೋದರು ಸಹ ಕಾರ್ಡ್ ಪಡೆಯಲು ಅರ್ಹರು ಆಗಿರುತ್ತಾರೆ.