ಪ್ರಯಾಣಿಕ ರೈಲಿನಿಂದ ಇಳಿಯುತ್ತಿದ್ದಾಗ ಕಾಲು ಜಾರಿ ಬಿದ್ದ ಘಟನೆಯೊಂದು ಬೆಂಗಳೂರಿನ ಮೆಜೆಸ್ಟಿಕ್ ರೈಲ್ವೆ ನಿಲ್ದಾಣದಲ್ಲಿ ನಡೆದಿದೆ. ಈ ಪ್ರಯಾಣಿಕ ಸ್ವಲ್ಪ ಯಾಮಾರಿದ್ರೂ ರೈಲಿನ ಚಕ್ರದಡಿ ಸಿಲುಕಿಕೊಳ್ಳುತ್ತಿದ್ದ.
ಸಮಯಕ್ಕೆ ಸರಿಯಾಗಿ ನಾಗರಾಜ್ ಜಾಪನೂರ್ ಎಂಬ ವ್ಯಕ್ತಿ ದೇವರಂತೆ ಬಂದು ಪ್ರಯಾಣಿಕನ್ನ ಕಾಪಾಡಿದ್ದಾನೆ. ನಾಗರಾಜ್ ಜಾಪನೂರ್ ಕಾರ್ಯಕ್ಕೆ ರೈಲ್ವೆ ಅಧಿಕಾರಿಗಳಿಂದ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ.