ನಗರದ ಜೈ ಕರ್ನಾಟಕ ಇಂಜನೀಯರಿಂಗ್ ವರ್ಕ್ಸ್ ಅಂಗಡಿಯ ಮುಂದೆ ಮಹಿಳೆ ಮೇಲೆ ಆಸಿಡ್ ಎರಚಿ ಕೊಲೆ ಮಾಡಲು ಪ್ರಯತ್ನಿಸಿ ತೀವ್ರ ಗಾಯಪಡಿಸಿದ ಅಪರಾಧಿ ಪ್ರಸಾದ ಉರ್ಪ್ ಪ್ರಶಾಂತ ತಂದೆ ಶಿವಾನಂದಪ್ಪ ಚಿಕ್ಕಳ್ಳಿ ಎಂಬವರಿಗೆ 10 ವರ್ಷಗಳ ಕಾರಾವಾಸ ಶಿಕ್ಷೆ ಹಾಗೂ ದಂಡ ವಿಧಿಸಿ ಹಾವೇರಿ ಜಿಲ್ಲಾ ಸತ್ರ ನ್ಯಾಯಾಲಯದ ನ್ಯಾಯಧೀಶರಾದ ನಿಂಗೌಡ ಪಾಟೀಲ್ ತೀರ್ಪು ನೀಡಿದ್ದಾರೆ.
ನೊಂದ ಮಹಿಳೆಯ ಮೇಲೆ ದಿನಾಂಕ ೨೮-೦೧-೨೦೨೦ ರಂದು ಸಾಯಂಕಾಲ ೬.೪೫ ರ ಸುಮಾರಿಗೆ ನಗರದ ಜೈ ಕರ್ನಾಟಕ ಇಂಜಿನಿಯರಿಂಗ್ ವರ್ಕ್ಸ್ ಅಂಗಡಿಯ ಮುಂದೆ ಆಸಿಡ್ ಎರಚಿ ಕೊಲೆ ಮಾಡಲು ಪ್ರಯತ್ನಿಸಿ ತೀವ್ರ ಗಾಯಪಡಿಸಿರುವಾದಾಗಿ ದೂರ ದಾಖಲಾಗಿತ್ತು. ಈ ಪ್ರಕರಣದ ಕುರಿತು ತನಿಖಾಧಿಕಾರಿಗಳಾದ ಹಾವೇರಿ ಮಹಿಳಾ ಪೊಲೀಸ್ ಠಾಣೆ ಸಿ.ಪಿ.ಐ ಶ್ರೀ ಮಂಜಣ್ಣ. ಟಿ ತನಿಖೆಕೈಗೊಂಡು ದೋಷರೋಪಣಾ ಪಟ್ಟಿಯನ್ನ ನ್ಯಾಯಾಲಯಕ್ಕೆ ಸಲ್ಲಿಸಿದರು.