ಬಿಎಂಟಿಸಿಯಲ್ಲಿ ಟಿಕೆಟ್ ರಹಿತವಾಗಿ ಪ್ರಯಾಣಿಸಿರುವ ಪ್ರಯಾಣಿಕರಿಗೆ ಸುಮಾರು 17 ಲಕ್ಷ ರೂಪಾಯಿ ದಂಡ ವಿಧಿಸಲಾಗಿದೆ. ಜೊತೆಗೆ ಮಹಿಳೆಯರ ಮೀಸಲು ಸೀಟುಗಳಲ್ಲಿ ಕೂತು ಪ್ರಯಾಣಿಸಿದವರಿಗೆ ಸುಮಾರು 1,17,800 ರೂಪಾಯಿ ದಂಡ ಹಾಕಲಾಗಿದೆ. ಆಗಸ್ಟ್, ಸೆಪ್ಟೆಂಬರ್, ಅಕ್ಟೋಬರ್ನಲ್ಲಿ ಟಿಕೆಟ್ ಇಲ್ಲದೇ ಪ್ರಯಾಣಿಸಿರುವ ಸಂಬಂಧ 8,891 ಕೇಸ್ ದಾಖಲಾಗಿವೆ.
ಟಿಕೆಟ್ ರಹಿತವಾಗಿ ಪ್ರಯಾಣಿಸಿದ 8,891 ಜನರಿಗೆ ದಂಡ ಹಾಕಲಾಗಿದೆ. 57,219 ಟ್ರಿಪ್ ಗಳಲ್ಲಿ ತಪಾಸಣೆ ಮಾಡಿ 8,891 ಜನರಿಗೆ ದಂಡ ವಿಧಿಸಲಾಗಿದೆ. ದಂಡ ವಸೂಲಿ ಮಾಡಿದ್ದಲ್ಲದೆ ನಿರ್ವಾಹಕರ ವಿರುದ್ಧ ಕೇಸ್ ಹಾಕಲಾಗಿದೆ. ಅಲ್ಲದೇ 5268 ಪ್ರಕರಣಗಳಲ್ಲಿ ನಿರ್ವಾಹಕರ ವಿರುದ್ಧ ಪ್ರಕರಣ ದಾಖಲಾಗಿವೆ. ಟಿಕೆಟ್ ರಹಿತ ಪ್ರಯಾಣ ಸಂಬಂಧ 17,96,030 ರೂಪಾಯಿದಂಡ ವಸೂಲಿ ಮಾಡಲಾಗಿದೆ.