ಬೆಂಗಳೂರಿನ ಕೆಸಿ ಜನರಲ್ ಆಸ್ಪತ್ರೆ ಮೇಲೆ ಲೋಕಾಯುಕ್ತರು ದಾಳಿ ನಡೆಸಿದ್ದಾರೆ. ಮಂಜುಳ ಎಂಬಾಕೆಯಿಂದ ಲೋಕಾಯುಕ್ತಕ್ಕೆ ದೂರು ಬಂದ ಹಿನ್ನೆಲೆ ಲೋಕಾಯುಕ್ತರು ಆಸ್ಪತ್ರೆ ಮೇಲೆ ದಾಳಿ ನಡೆಸಿ ಪರಿಶೀಲನೆ ನಡೆಸಿದ್ರು.
ಇದೇ ವೇಳೆ ದೂರುದಾರೆ ಮಂಜಳ ಮಾತನಾಡಿ, ಕಳೆದ ತಿಂಗಳು ನನ್ನ ಮಗಳ ಹೆರಿಗೆಗೆ ಅಂತ ಆಸ್ಪತ್ರೆಗೆ ಕರೆದಿಕೊಂಡು ಬಂದಿದ್ವಿ ಆಗ ನಮಗೆ ಆಸ್ಪತ್ರೆ ಸಿಬ್ಬಂದಿ ಹಣಕ್ಕಾಗಿ ಬೇಡಿಕೆ ಇಟ್ಟರು. ಹಣ ಕೊಡದಿದ್ದಕ್ಕೆ ತಾಯಿ ಕಾರ್ಡ್ನ್ನೇ ಕತ್ತುಕೊಂಡರು. ರೋಗಿಗಳು ಬಂದಾಗ ಇಷೇ ಹಣ ಬೇಕೆಂದು ಸಿಬ್ಬಂದಿ ಡಿಮ್ಯಾಂಡ್ ಮಾಡ್ತಾರೆ ಎಂದು ದೂರು ದಾರೆ ಮಂಜಳ ಹೇಳಿದ್ರು.