ಬೆಂಗಳೂರು : ಹಾಸನ ಕೃತಜ್ಞತ ಸಮಾವೇಶ ವಿಚಾರವಾಗಿ ಬೆಂಗಳೂರಿನಲ್ಲಿ ಡಿಕೆ ಶಿವಕುಮಾರ್ ಪ್ರತಿಕ್ರಿಯೆ ನೀಡಿದ್ದಾರೆ. ಸಿಎಂ ಸಿದ್ದರಾಮಯ್ಯಗೆ ಅಭಿನಂದನೆ ಸಲ್ಲಿಸಲು ಈ ಕೃತಜ್ಞತ ಕಾರ್ಯ ಮಾಡುತ್ತಿದ್ದೇವೆ. ಜನರು ಕಾಂಗ್ರೆಸ್ನ ಎಲ್ಲಾ ಕಾರ್ಯಗಳನ್ನ ಅಭಿನಂದಿಸಿದ್ದಾರೆ. ನಮಗೆ ಕಲ್ಯಾಣ ಕರ್ನಾಟಕ ಹಾಗೂ ಕಿತ್ತೂರು ಕರ್ನಾಟಕದ ಜನರು ಮತ ನೀಡಿದ್ದಾರೆ, ಜನರ ಉತ್ಸಾಹಕ್ಕೆ ನಾವು ಸ್ಪೂರ್ತಿ ನೀಡಬೇಕೆಂದು ಡಿಸಿಎಂ ಡಿಕೆ ಶಿವಕುಮಾರ್ ಹೇಳಿದ್ರು.