
ವಿಜಯ್ ಹಜಾರೆ ಟೂರ್ನಿಯ ಚಾಂಪಿಯನ್ಸ್ ಕರ್ನಾಟಕ ತಂಡ ರಣಜಿಯಲ್ಲೂ ಅದೇ ಪ್ರದರ್ಶನವನ್ನು ನೀಡುತ್ತಿದೆ. ಪಂಜಾಬ್ ವಿರುದ್ದ ನಡೆದ ಪಂದ್ಯದಲ್ಲಿ ಮಯಾಂಕ್ ಅಗರ್ವಾಲ್ ಪಡೆಗೆ 27 ರನ್ಗಳ ಭರ್ಜರಿ ಜಯ ಲಭಿಸಿದೆ.. ಮೊದಲ ಇನ್ನಿಂಗ್ಸ್ನಲ್ಲಿ ಎದುರಾಳಿ ತಂಡವನ್ನ ಕೇವಲ 55 ರನ್ಗಳಿಗೆ ಅಲೌಟ್ ಮಾಡಿದ್ದ ರಾಜ್ಯ ತಂಡ, ಬ್ಯಾಟಿಂಗ್ನಲ್ಲಿ ಎಸ್ ರವಿಚಂದ್ರನ್ ಅವರ ಡಬಲ್ ಸೆಂಚುರಿ ಬಲದಿಂದ ಮೊದಲ ಇನ್ನಿಂಗ್ಸ್ನಲ್ಲಿ 475 ರನ್ಗಳನ್ನು ಕಲೆ ಹಾಕಿ ದೊಡ್ಡ ಅಂತರ ಸಾಧಿಸಿತ್ತು. ನಂತರ ಎರಡನೇ ಇನ್ನಿಂಗ್ಸ್ ಆರಂಭಿಸಿದ ಪಂಜಾಬ್ ನಾಯಕ ಶುಭಮನ್ ಗಿಲ್ ಶತಕ ಬಾರಿಸಿದರೂ 213 ರನ್ಗಳಿಗೆ ಅಲೌಟ್ ಆಯಿತ್ತು. ಇದು ಕರ್ನಾಟಕ ತಂಡಕ್ಕೆ ಟೂರ್ನಿಯಲ್ಲಿ ಎದುರಾಗಿರುವ ಎರಡನೇ ಗೆಲ್ಲುವು ಆಗಿದೆ.
