
ಭಾರತ ಹಾಗೂ ಇಂಗ್ಲೆಂಡ್ ನಡೆವೆ 4-ನೇ ಟಿ 20 ಪಂದ್ಯ ಇಂದು ಪುಣೆಯ ಮಹಾರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ ಸ್ಟೇಡಿಯಂನಲ್ಲಿ ನಡೆಯಲಿದೆ. ಈ ಪಂದ್ಯದಲ್ಲಿ ಭಾರತ ಜಯ ಗಳಿಸಿದರೆ ಸರಣಿ ಕೈ ವಶವಾಗಲಿದೆ . ಇಂಗ್ಲೆಂಡ್ ಗೆಲ್ಲುವು ಸಾಧಿಸಿದರೆ ಸರಣಿ ಇನ್ನೂ ಜೀವಂತವಾಗಿರಲಿದೆ. ಕಳೆದ 3 ಪಂದ್ಯದ ಪೈಕಿ ಭಾರತ 2. ಇಂಗ್ಲೆಂಡ್ 1 ಪಂದ್ಯದಲ್ಲಿ ಜಯಭೇರಿ ಬಾರಿಸಿದೆ. ಹೀಗಾಗಿ ಉಭಯ ತಂಡಗಳಿಗೆ ಇವತ್ತಿನ ಪಂದ್ಯ ಮಹತ್ವದಾಗಿದೆ. ಇಂಗ್ಲೆಂಡ್ ತಂಡ ಬಹುತೇಕವಾಗಿ ಕಳೆದ ಪಂದ್ಯದ ವಿನ್ನಿಂಗ್ ಟೀಂ ಅನ್ನೇ ಕಣಕ್ಕಿಳಿಸುವ ಸಾಧ್ಯತೆ ಇದೆ.

ಇನ್ನೂ ಟೀಂ ಇಂಡಿಯಾದಲ್ಲಿ ಕೆಲ ಬದಲಾವಣೆ ಮಾಡುವ ಸಾಧ್ಯತೆ ಇದೆ. ಹಾರ್ದಿಕ್ ಪಾಂಡ್ಯ, ಧ್ರುವ್ ಜುರೇಲ್ಗೆ ವಿಶ್ರಾಂತಿ ನೀಡಿ ಶಿವಂ ದುಬೆ ಮತ್ತು ಗಾಯದಿಂದ ಚೇತರಿಸಿಕೊಂಡ ರಿಂಕು ಸಿಂಗ್ ಅವರನ್ನು ಇಂದಿನ ಪಂದ್ಯದಲ್ಲಿ ಆಡಿಸುವ ಸಾಧ್ಯತೆ ಇದೆ . ಬೌಲಿಂಗ್ನಲ್ಲೂ ಕೆಲ ಬದಲಾವಣೆಯಾಗುವ ಅವಕಾಶವಿದ್ದು , ವೇಗಿ ಅರ್ಷದೀಪ್ ಸಿಂಗ್ ಅವರನ್ನು ಕಣಕ್ಕಿಳಿಸುವ ಲೆಕ್ಕಾಚಾರ ಹಾಕಲಾಗುತ್ತಿದೆ. ಯಾಕೆಂದರೆ ಕಳೆದ ಪಂದ್ಯದಲ್ಲಿ ಮೊಹಮ್ಮದ್ ಶಮಿ ಆಡುವ ಅವಕಾಶ ಗಿಟ್ಟಿಸಿಕೊಂಡರು ಇನ್ನೂ ತಮ್ಮ ನೈಜ ಫಾರ್ಮ್ಗೆ ಮರಳಿಲ್ಲ. ಆದರೂ ಅವರಿಗೆ ಇಂದಿನ ಪಂದ್ಯದಲ್ಲಿ ಅವಕಾಶ ಸಿಗಬಹುದು, ಅರ್ಷದೀಪ್ ಸಿಂಗ್ಗೆ ಸ್ಪಿನ್ನರ್ ರವಿ ಬಿಷ್ಣೋಯ್ ಸ್ಥಾನ ಬಿಟ್ಟುಕೊಡುವ ಸಾಧ್ಯತೆಯಿದೆ…

ಪಿಚ್ ರಿರ್ಪೋಟ್
ಪುಣೆಯ ಮಹಾರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ ಸ್ಟೇಡಿಯಂನ ಪಿಚ್ ಬ್ಯಾಟಿಂಗ್ಗೆ ಹೆಚ್ಚು ಅನುಕೂಲಕರವಾಗಿದ್ದರೂ , ಪಂದ್ಯ ಸಾಗಿದಂತೆ ಸ್ಪಿನ್ನರ್ಗಳು ಮೇಲು ಗೈ ಸಾಧಿಸಬಹದು. ಫಸ್ಟ್ ಬ್ಯಾಟಿಂಗ್ ಹಾಗೂ ಚೇಸ್ ಮಾಡಿ ಗೆದ್ದ ತಂಡಗಳ ಗೆಲುವಿನ ಸರಾಸರಿ ಸಮಾನವಾಗಿದೆ. ಇನ್ನೂ ಹವಾಮಾನ ಕೂಡ ಪಂದ್ಯಕ್ಕೆ ಯಾವುದೇ ಅಡ್ಡಿ ಆಗುವುದಿಲ್ಲ. ವರದಿಯ ಪ್ರಕಾರ ಪಂದ್ಯದ ದಿನ ತಾಪಮಾನವು 32 ಡಿಗ್ರಿ ಇರಲಿದ್ದು ಮಳೆ ಬರುವ ಸಾಧ್ಯತೆ ಇಲ್ಲ ಎನ್ನಲಾಗುತ್ತಿದೆ .
.
ಅಭಿಷೇಕ್ .ಎಸ್