
ಐಪಿಎಲ್ 2025ರ ಆವೃತ್ತಿಗೆ ಆರ್ಸಿಬಿ ತಂಡದ ನೂತನ ನಾಯಕನ್ನಾಗಿ ರಜತ್ ಪಾಟಿದರ್ ಆಯ್ಕೆಯಾಗಿದ್ದಾರೆ. ಈ ಹಿಂದೆ ವಿರಾಟ್ ಕೊಹ್ಲಿಯೇ ನಾಯಕ ಎಂಬ ಮಾತು ಹುಸಿಯಾಗಿದೆ. ರಜತ್ ಪಾಟಿದರ್ 2021ರಲ್ಲಿ ಆರ್ಸಿಬಿ ತಂಡಕ್ಕೆ ಬದಲಿ ಆಟಗಾರನ್ನಾಗಿ ಸೇರಿಕೊಂಡಿದ್ದರು. ದೇಶಿ ಕ್ರಿಕೆಟ್ ಟೂರ್ನಿಯಲ್ಲಿ ಮಧ್ಯಪ್ರದೇಶ ತಂಡಕ್ಕೆ ನಾಯಕನ್ನಾಗಿ ಮುನ್ನಡೆಸಿದ ಅನುಭವವಿದೆ. ಇತ್ತೀಚೆಗೆ ನಡೆದ ಸೈಯದ್ ಮುಷ್ತಾಕ್ ಅಲಿ ಟೂರ್ನಿಯಲ್ಲೂ ಮಧ್ಯಪ್ರದೇಶ ತಂಡವನ್ನು ಫೈನಲ್ವರೆಗೂ ಕರೆದುಕೊಂಡು ಹೋಗಿದ್ದರು.

ಆ ಟೂರ್ನಿಯಲ್ಲಿ ರಜತ್ ನಾಯಕನ್ನಾಗಿಯೂ,ಬ್ಯಾಟಿಂಗ್ನಲ್ಲಿ ಉತ್ತಮ ಪ್ರದರ್ಶನ ನೀಡಿದ್ದರು. ಇದು ಆರ್ಸಿಬಿ ತಂಡಕ್ಕೆ ರಜತ್ ನಾಯಕನ್ನಾಗಿ ಆಯ್ಕೆಯಾಗಲು ಪ್ರಮುಖ ಕಾರಣ. ಐಪಿಎಲ್ನಲ್ಲಿ 27 ಪಂದ್ಯಗಳನ್ನಾಡಿರುವ ರಜತ್ ಪಾಟಿದರ್ ಒಂದು ಶತಕ. 7 ಅರ್ಧ ಶತಕದೊಂದಿಗೆ ಒಟ್ಟು 799 ರನ್ ಗಳಿಸಿದ್ದಾರೆ. ಐಪಿಎಲ್ನಲ್ಲಿ ನೀಡಿದ ಉತ್ತಮ ಪ್ರದರ್ಶನದಿಂದ ರಜತ್ ಪಾಟಿದರ್ ಭಾರತ ತಂಡಕ್ಕೂ ಪರ್ದಾಪಣೆ ಮಾಡಿದ್ದರು.ಟೆಸ್ಟ್ ಹಾಗೂ ಏಕದಿನ ಪಂದ್ಯದಲ್ಲಿ ರಜತ್ ಭಾರತ ಪರ ಆಡಿದ್ದಾರೆ. ಆದಾದ ನಂತರ ಇದೀಗ ಆರ್ಸಿಬಿ ತಂಡದ ನಾಯಕತ್ವದ ಸ್ಥಾನ ರಜತ್ಗೆ ಒಲಿದಿದೆ..
ಅಭಿಷೇಕ್ ಎಸ್