
ರಣಜಿ ಚಾಂಪಿಯನ್ ಪಟ್ಟಕ್ಕಾಗಿ ವಿದರ್ಭ ಹಾಗೂ ಕೇರಳ ತಂಡಗಳು ಸೆಣಸಾಟ ನಡೆಸುತ್ತಿವೆ. ಮೊದಲ ಇನ್ನಿಂಗ್ಸ್ನಲ್ಲಿ ವಿದರ್ಭ 379 ರನ್ ಗಳಿಸಿದರೆ, ಕೇರಳ ತಂಡ 342 ರನ್ ಗಳಿಸಿದೆ. ನಂತರ ಎರಡನೇ ಇನ್ನಿಂಗ್ಸ್ ಆರಂಭಿಸಿರುವ ವಿದರ್ಭಕ್ಕೆ ಕರುಣ್ ನಾಯರ್ ಆಧಾರ ಸ್ತಂಭವಾಗಿ ನಿಂತಿದ್ದಾರೆ. ತಾಳ್ಮೆಯ ಆಟಕ್ಕೆ ಮೊರೆ ಹೋಗಿರುವ ಕರುಣ್ ನಾಯರ್ 280 ಎಸೆತಗಳಲ್ಲಿ (132) ರನ್ ಗಳಿಸಿದ್ದಾರೆ. ಇವರ ಆಕರ್ಷಕ ಶತಕದಿಂದ ವಿದರ್ಭ ತಂಡ ಕೇರಳ ವಿರುದ್ದ ಸಂಪೂರ್ಣವಾಗಿ ಮೇಲುಗೈ ಸಾಧಿಸಿದೆ. ಫೈನಲ್ ಪಂದ್ಯದಲ್ಲಿ ಅಮೋಘ ಬ್ಯಾಟಿಂಗ್ ಮಾಡಿರುವ ಕರುಣ್ ನಾಯರ್ ಮೊದಲ ಇನ್ನಿಂಗ್ಸ್ನಲ್ಲಿಯೂ (86) ರನ್ ಗಳಿಸಿ ರನೌಟ್ ಆಗಿದ್ದರು. ಆ ಮೂಲಕ ಕರುಣ್ ಶತಕದಿಂದ ವಂಚಿತರಾಗಿದ್ದರು. ಆದರೆ ಎರಡನೇ ಇನ್ನಿಂಗ್ಸ್ನಲ್ಲಿ ಯಾವುದೇ ತಪ್ಪುಗಳಿಗೆ ಅವಕಾಶ ಕೊಡದೇ ಶತಕ ಪೂರೈಸಿ ತಂಡ ಮೇಲು ಗೈ ಸಾಧಿಸುವುದಕ್ಕೆ ಕಾರಣರಾಗಿದ್ದಾರೆ. ಪಂದ್ಯದಲ್ಲಿ ಬಹುತೇಕ ವಿದರ್ಭ ಮುನ್ನಡೆ ಸಾಧಿಸಿದೆ ಆದರೂ ಕೇರಳ ಕಮ್ಬ್ಯಾಕ್ ಮಾಡಲು ಪ್ರಯತ್ನ ನಡೆಸುತ್ತಿದೆ.

ಅಭಿಷೇಕ್. ಎಸ್