
WPL 2025: ನಿರ್ಣಯಕ ಪಂದ್ಯದಲ್ಲಿ ಎಡವಿದ ಯು.ಪಿ ವಾರಿಯರ್ಸ್
ವುಮೆನ್ಸ್ ಪ್ರೀಮಿಯರ್ ಲೀಗ್ನ ಸೀಸನ್ 3ರಲ್ಲಿ ಪ್ಲೇ ಆಫ್ ತಲುಪಲು ಗೆಲಲ್ಲೇಬೇಕಾದ ಪಂದ್ಯದಲ್ಲಿ ಯು.ಪಿ. ವಾರಿಯರ್ಸ್ ತಂಡ ಎಡವಿದೆ. ಮುಂಬೈ ಇಂಡಿಯನ್ಸ್ ತಂಡದ ವಿರುದ್ದ 6 ವಿಕೆಟ್ಗಳ ಸೋಲು ಅನುಭವಿಸಿದೆ. ಆ ಮೂಲಕ ತನ್ನ ಪ್ಲೇ ಆಫ್ ಹಾದಿಯನ್ನು ಮತ್ತಷ್ಟು ಕಠಿಣ ಮಾಡಿಕೊಂಡಿದೆ. ಟಾಸ್ ಗೆದ್ದ ಮುಂಬೈ ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತ್ತು. ದೊಡ್ಡ ಮೊತ್ತ ಕಲೆ ಹಾಕುವ ನಿಟ್ಟನಲ್ಲಿ ಬ್ಯಾಟಿಂಗ್ಗಿಳಿದ ಯು.ಪಿ ವಾರಿಯರ್ಸ್ ಜಾರ್ಜಿಯಾ ವಾಲ್(55),ಗ್ರೇಸ್ ಹ್ಯಾರಿಸ್(28), ನಾಯಕಿ ದೀಪ್ತಿ ಶರ್ಮಾ(27) ಅವರ ಬ್ಯಾಟಿಂಗ್ ನೆರವಿನಿಂದ ಯು.ಪಿ ವಾರಿಯರ್ಸ್ ತಂಡ 20 ಓವರ್ಗಳಲ್ಲಿ 150 ರನ್ ಕಲೆ ಹಾಕಿತ್ತು. ಬೌಲಿಂಗ್ನಲ್ಲಿ ಮುಂಬೈ ಪರ ಅಮೆಲಿಯಾ ಕೆರ್ 5 ವಿಕೆಟ್ ಪಡೆದು ಮಿಂಚಿದರು. 151 ರನ್ಗಳ ಟಾರ್ಗೆಟ್ ಪಡೆದ ಮುಂಬೈ ತಂಡ ಹೇಲಿ ಮ್ಯಾಥ್ಯೂಸ್(68), ನ್ಯಾಟ್ ಸಿವರ್ ಬ್ರಂಟ್ (37) ಅವರ ಬ್ಯಾಟಿಂಗ್ನಿಂದ ಮುಂಬೈ 18.3 ಓವರ್ಗಳಲ್ಲಿಯೇ ಗುರಿಯನ್ನು ಮುಟ್ಟಿತ್ತು. ಈ ಜಯದೊಂದಿಗೆ ಮುಂಬೈ ಇಂಡಿಯನ್ಸ್ ತಂಡ ಪಾಯಿಂಟ್ಸ್ ಟೇಬಲ್ನಲ್ಲಿ ಎರಡನೇ ಸ್ಥಾನ ಪಡೆದುಕೊಂಡರೆ ಯು.ಪಿ ವಾರಿಯರ್ಸ್ ಕೊನೆ ಸ್ಥಾನದಲ್ಲಿದೆ…

ಅಭಿಷೇಕ್.ಎಸ್