
ಚಾಂಪಿಯನ್ಸ್ ಟ್ರೋಫಿಯ ಅಂತಿಮ ಮಹಾಕದನಕ್ಕೆ ಕ್ಷಣಗಣನೆ ಪ್ರಾರಂಭವಾಗಿದೆ. ದುಬೈ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ಭಾರತ ಹಾಗೂ ನ್ಯೂಜಿಲೆಂಡ್ ತಂಡಗಳು ಸೆಣಸಾಡಲಿವೆ. 5ನೇ ಬಾರಿಗೆ ಪೈನಲ್ಗೆ ಎಂಟ್ರಿ ನೀಡಿರುವ ಭಾರತ ತಂಡ 3ನೇ ಬಾರಿಗೆ ಫೈನಲ್ನಲ್ಲಿ ಆಡುತ್ತಿರುವ ನ್ಯೂಜಿಲೆಂಡ್ ತಂಡಗಳ ನಡುವೆ ಯಾರು ವಿಜಯದ ಕೇಕೆ ಹಾಕಿಲಿದ್ದಾರೆ ಎಂಬ ಕುತೂಹಲ ಅಭಿಮಾನಿಗಳಲ್ಲಿ ಮೂಡಿಸಿದೆ. ಕಿವೀಸ್ ತಂಡಕ್ಕೆ ಹೋಲಿಸಿಕೊಂಡರೆ ಭಾರತಕ್ಕೆ ಒಂದು ವಿಚಾರದಲ್ಲಿ ಪ್ಲಸ್ ಪಾಯಿಂಟ್ಯಿದೆ ಎನ್ನಬಹುದು. ರೋಹಿತ್ ಪಡೆ ಐಸಿಸಿ ಚಾಂಪಿಯನ್ಸ್ ಟ್ರೋಫಿಯಲ್ಲಿ ಟೂರ್ನಿಯುದ್ದಕ್ಕೂ ದುಬೈ ಕ್ರೀಡಾಂಗಣದಲ್ಲಿಯೇ ಎಲ್ಲ ಪಂದ್ಯಗಳನ್ನು ಅಡಿದೆ. ಹೀಗಾಗಿ ನ್ಯೂಜಿಲೆಂಡ್ ತಂಡಕ್ಕೆ ಹೋಲಿಸಿಕೊಂಡರೆ ಭಾರತಕ್ಕೆ ಪಿಚ್ನ ಅರಿವು ಹೆಚ್ಚಾಗಿ ಗೊತ್ತಿದೆ.
ಭಾರತದ ಬಲ
- ಶುಭ್ಮನ್ ಗಿಲ್,ವಿರಾಟ್ ಕೊಹ್ಲಿ ಉತ್ತಮ ಲಯದಲ್ಲಿರುವುದು
- ಮಧ್ಯಮ ಕ್ರಮಾಂಕದಲ್ಲಿ ಕೆಎಲ್ ರಾಹುಲ್, ಶ್ರೇಯಸ್ ಅಯ್ಯರ್ ಸಮಯೋಚಿತ ಆಟ
- ಅಕ್ಷರ್ ಪಟೇಲ್, ರವೀಂದ್ರ ಜಡೇಜಾ,ಪಾಂಡ್ಯ ಅಲ್ರೌಂಡರ್ಗಳ ಬಲ
- ಸ್ಪಿನ್ನರ್ಗಳಾದ ಕುಲ್ದೀಪ್, ವರುಣ್ ಚಕ್ರವರ್ತಿಯ ಉತ್ತಮ ಬೌಲಿಂಗ್
- ವೇಗಿ ಮೊಹಮ್ಮದ್ ಶಮಿ ತಮ್ಮ ಹಳೆಯ ಫಾರ್ಮ್ಗೆ ಮರಳಿರುವುದು
ಪಿಚ್ ರಿಪೋರ್ಟ್
ದುಬೈ ಸ್ಟೇಡಿಯಂನ ಪಿಚ್ ಪಂದ್ಯ ಸಾಗಿದಂತೆ ನಿಧಾನವಾಗಿ ವರ್ತಿಸಲಿದೆ. ರನ್ ಗಳಿಸಿಲು ಬ್ಯಾಟರ್ಗಳು ತಾಳ್ಮೆಯ ಆಟವಾಡಬೇಕಿದೆ. ಈ ಬಾರಿಯ ಟೂರ್ನಿಯಲ್ಲಿ ನಡೆದ 4 ಪಂದ್ಯಗಳಿಂದ 8 ಇನ್ನಿಂಗ್ಸ್ಗಳಲ್ಲಿ ಗರಿಷ್ಠ ಮೊತ್ತ 267 ರನ್ ಆಗಿದೆ. ಹೀಗಾಗಿ ಟಾಸ್ ಗೆಲ್ಲುವ ತಂಡ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಳ್ಳುವ ಸಾಧ್ಯತೆ ಹೆಚ್ಚಿದೆ.
ಭಾರತಕ್ಕೆ ಸೇಡು ತೀರಿಸಿಕೊಳ್ಳುವ ಅವಕಾಶ
ಭಾರತ ಹಾಗೂ ನ್ಯೂಜಿಲೆಂಡ್ ತಂಡಗಳು ಐಸಿಸಿ ಟೂರ್ನಿಗಳಲ್ಲಿ ಒಟ್ಟು 2 ಬಾರಿ ಮುಖಾಮುಖಿಯಾಗಲಿವೆ. 2000ರಲ್ಲಿ ನಡೆದ ಚಾಂಪಿಯನ್ಸ್ ಟ್ರೋಫಿಯಲ್ಲಿ ಭಾರತ ಕಿವೀಸ್ಗೆ ಭಾರತ ಶರಣಾಗಿತ್ತು. 2019-21ರ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ನಲ್ಲಿಯೂ ಭಾರತ ನ್ಯೂಜಿಲೆಂಡ್ ತಂಡದ ವಿರುದ್ದ ಸೋತು ನಿರಾಸೆ ಅನುಭವಿಸಿತ್ತು. ಇದೀಗ ಮತ್ತೆ ಫೈನಲ್ನಲ್ಲಿ ಭಾರತಕ್ಕೆ ಕಿವೀಸ್ ಸವಾಲು ಎದುರಾಗಿದ್ದು ರೋಹಿತ್ ಪಡೆಗೆ ಹಿಂದಿನ ಸೋಲಿಗೆ ಸೇಡು ತೀರಿಸಿಕೊಳ್ಳುವ ಅವಕಾಶ ಸಿಕ್ಕಿದೆ.
ಭಾರತ ತಂಡ
ರೋಹಿತ್ ಶರ್ಮಾ, ಶುಭ್ಮನ್ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಅಕ್ಷರ್ ಪಟೇಲ್, ಕೆಎಲ್ ರಾಹುಲ್, ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ಕುಲ್ದೀಪ್ ಯಾದವ್, ಮೊಹಮ್ಮದ್ ಶಮಿ, ವರುಣ್ ಚಕ್ರವರ್ತಿ
ನ್ಯೂಜಿಲೆಂಡ್ ತಂಡ
ವಿಲ್ ಯಂಗ್, ರಚಿನ್ ರವೀಂದ್ರ, ಕೇನ್ ವಿಲಿಯಮ್ಸನ್, ಜೋಕಬ್ ಬೆಥೆಲ್, ಮಿಚೆಲ್ ಬ್ರೇಸ್ವೆಲ್, ಟಾಮ್ ಲೇಥಮ್, ಡ್ಯಾರಿ ಮಿಚೆಲ್, ಗ್ಲೇನ್ ಫಿಲಿಪ್ಸ್, ಮ್ಯಾಟ್ ಹೆನ್ರಿ, ಕೈಲ್ ಜೇಮಿಸನ್, ನೇಥನ್ ಸ್ಮಿತ್, ವಿಲಿಯಂ ಒರೌರ್ಕೆ,