
Ashwaveega News 24×7 ಜು. 27: ಮದುವೆಯಾಗಿ ಗಂಡ ಚೆನ್ನಾಗಿ ನೋಡಿಕೊಳ್ಳುತ್ತಿದ್ದರು ಇಲ್ಲೊಬ್ಬ ಯುವತಿ ಮತ್ತೊಬ್ಬನ ಸಹವಾಸ ಮಾಡಿ ಸಾವಿನ ಮನೆ ಸೇರಿದ್ದಾಳೆ, ಇನ್ಸ್ಟಾಗ್ರಾಮ್ನಲ್ಲಿ ಶುರುವಾದ ಪ್ರೀತಿಯಿಂದ ಸಂಬಂಧ ಬೆಳೆಸಿದ ಯುವತಿ ನಂತರ ಆತ್ಮಹತ್ಯೆಗೆ ಶರಣಾಗಿದ್ದಾಳೆ. ಅಲ್ಲದೇ ಡೆತ್ನೋಟ್ ಬರೆದಿಟ್ಟಿದ್ದಾಳೆ. ಇದನ್ನು ಕಂಡು ಮನೆಯವರು ಶಾಕ್ ಆಗಿದ್ದು, ಅದರಲ್ಲಿ ತನ್ನ ಪ್ರಿಯಕರ ಪುರಾಣ ಮತ್ತು ಪ್ರೇಮಕಥೆಯನ್ನು ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದಾಳೆ.
ಪ್ರಿಯಕರನ ಮೊಸಕ್ಕೆ ನಾನು ಆತ್ಮಹತ್ಯೆ ಮಾಡಿಕೊಳ್ಳತ್ತಿದ್ದೇನೆಂದು ಡೆತ್ ನೋಟ್ ಬರೆದಿಟ್ಟು, ಯುವತಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ವಿಜಯನಗರದಲ್ಲಿ ನಡೆದಿದೆ.
ಪ್ರಿಯಕರನ ಮೋಸಕ್ಕೆ ದುಃಖದಿಂದ ಆತ್ಮಹತ್ಯೆ ಮಾಡಿಕೊಂಡ ಯುವತಿ, ಸಾವಿನ ಮೊದಲು ಡೆತ್ ನೋಟ್ ಬರೆದು ತನ್ನ ಸಾವಿಗೆ ಪ್ರಿಯತಮನೇ ಕಾರಣನೆಂದು ಉಲ್ಲೇಖಿಸಿದ್ದಾಳೆ. ಅಲ್ಲದೇ ತನ್ನ ಗಂಡ ಮತ್ತು ಮನೆಯವರ ಬಗ್ಗೆಯೂ ಬರೆದಿದ್ದಾಳೆ.
ಯುವತಿ ತುಂಗಾಭದ್ರಾ ಸೇತುವೆಯಿಂದ ಜಿಗಿಯುತ್ತಿರುವ ದೃಶ್ಯವನ್ನು ನೋಡಿದ ಬೈಕ್ ಸವಾರರು ತಕ್ಷಣವೇ ಮದಲಗಟ್ಟಿ ಗ್ರಾಮದ ಜನರಿಗೆ ಮಾಹಿತಿ ನೀಡಿದ್ದಾರೆ. ಸ್ಥಳೀಯ ಮೀನುಗಾರರು ಕೂಡ ಮಹಿಳೆಯನ್ನು ರಕ್ಷಿಸಲು ಹರಸಾಹಸ ಪಟ್ಟಿದ್ದಾರೆ.
ಆದರೆ ನದಿಯ ಪ್ರವಾಹದ ರಭಸಕ್ಕೆ ಮಹಿಳೆ ನೀರಿನಲ್ಲಿ ಕೊಚ್ಚಿ ಹೋಗಿದ್ದಾಳೆ. ಘಟನೆ ನಡೆದ ತಕ್ಷಣವೇ ಸ್ಥಳಕ್ಕೆ ಹೂವಿನಹಡಗಲಿ ಪೊಲೀಸ್ ಠಾಣೆಯ ಸಿಬ್ಬಂದಿ ಹಾಗೂ ಅಗ್ನಿಶಾಮಕ ಸಿಬ್ಬಂದಿಗಳು ಆಗಮಿಸಿ ಶೋಧ ಕಾರ್ಯ ಆರಂಭಿಸಿದ್ದಾರೆ. ಆದರೆ ಇನ್ನೂ ಕೂಡ ನದಿಯಲ್ಲಿ ಕೊಚ್ಚಿ ಹೋದ ಮಹಿಳೆ ಪತ್ತೆಯಾಗಿಲ್ಲ, ಶೋಧ ಕಾರ್ಯ ಮುಂದುವರೆದಿದೆ.
ಘಟನೆಯ ಕೆಲವು ಗಂಟೆಗಳ ಬಳಿಕ ಕೆ.ಅಯ್ಯನಹಳ್ಳಿ ಗ್ರಾಮದಲ್ಲಿ ಮಹಿಳೆಯೊಬ್ಬರು ಬರೆದಿದ್ದ ಡೆತ್ನೋಟ್ ಲಭ್ಯವಾಗಿದೆ. ಪತ್ರದಲ್ಲಿ ಆಕೆ ತಾನು ಪ್ರೀತಿಸುತ್ತಿದ್ದ ವ್ಯಕ್ತಿಯ ಮೋಸವೇ ತನ್ನ ಸಾವಿಗೆ ಕಾರಣವೆಂದು ಸ್ಪಷ್ಟವಾಗಿ ಬರೆದಿದ್ದು, ಈ ಡೆತ್ ನೋಟ್ ಅನ್ನು ಆಧಾರ ಮಾಡಿಕೊಂಡು ಪೊಲೀಸರು ತನಿಖೆ ಮುಂದುವರೆಸಿದ್ದಾರೆ.
ಡೆತ್ನೋಟ್ನಲ್ಲಿ ಆಕೆ ತನ್ನ ಗಂಡನ ಬಗ್ಗೆಯೂ ಬರೆದಿದ್ದಾಳೆ, ನನ್ನ ಗಂಡ ಚೆನ್ನಾಗಿ ನೋಡಿಕೊಳ್ಳುತ್ತಿದ್ದರು. ನನ್ನ ಕುಟುಂಬ ಸುಖವಾಗಿ ಇತ್ತು. ಆದರೆ ಇನ್ಸ್ಟಾಗ್ರಾಮ್ನಲ್ಲಿ ಒಂದು ಮೆಸೇಜ್ ಬಂದು ನಂತರ ಅದು ಸ್ನೇಹ, ಬಳಿಕ ಶುರುವಾದ ಪ್ರೀತಿಯಿಂದ ಹಿಡಿದು ಆತ್ಮಹತ್ಯೆ ನಿರ್ಧಾರದ ದುರಂತದವರೆಗೂ ಬರೆದಿಟ್ಟಿದ್ದು, ನನ್ನ ಪ್ರಿಯಕರನಿಗೆ ಮರಣದಂಡನೆ ವಿಧಿಸಬೇಕು ಎಂದು ಆಗ್ರಹಿಸಿದ್ದಾಳೆ.