
ಚಾಂಪಿಯನ್ಸ್ ಟ್ರೋಫಿಯಲ್ಲಿ ಪಾಕಿಸ್ತಾನ ಸೋಲಿನ ಮೂಲಕ ತನ್ನ ಅಭಿಯಾನವನ್ನು ಆರಂಭಿಸಿದೆ. ಕರಾಚಿಯಲ್ಲಿ ನ್ಯೂಜಿಲೆಂಡ್ ವಿರುದ್ದ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಪಾಕಿಸ್ತಾನ ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತ್ತು. ಕಿವೀಸ್ ಪರ ಬ್ಯಾಟಿಂಗ್ಗೆ ಇಳಿದ ಟಾಮ್ ಲ್ಯಾಥಮ್ (118), ವಿಲ್ ಯಂಗ್ (107), ಗ್ಲೆನ್ ಫಿಲಿಪ್ಸ್ (61) ಅವರ ಬ್ಯಾಟಿಂಗ್ ನೆರವಿನಿಂದ ನ್ಯೂಜಿಲೆಂಡ್ ತಂಡ 50 ಓವರ್ಗಳಲ್ಲಿ 5 ವಿಕೆಟ್ ನಷ್ಟಕ್ಕೆ 320 ರನ್ ಗಳಿಸಿತ್ತು, ಬೌಲಿಂಗ್ನಲ್ಲಿ ಪಾಕಿಸ್ತಾನ ಪರ ನಸೀಮ್ ಶಾ 2, ಹಾರಿಸ್ ರೌಫ್ 2, ಅಬ್ರಾರ್ ಅಹಮದ್ 1, ವಿಕೆಟ್ ಪಡೆದರು. 321 ರನ್ಗಳ ಗುರಿ ಮುಟ್ಟುವ ಯೋಚನೆಯೊಂದಿಗೆ ಬ್ಯಾಟಿಂಗ್ಗೆ ಇಳಿದ ಪಾಕಿಸ್ತಾನ ಆರಂಭದಲ್ಲೇ ಸೌದ್ ಶಕೀಲ್ (6), ಬಾಬರ್ ಅಜಂ(64), ಸಲ್ಮಾನ್ ಅಘಾ (42), ಫಖರ್ ಜಮಾನ್ (24) ರನ್ ಗಳಿಸಲಷ್ಟೇ ಶಕ್ತರಾದರು. ಇತರೆ ಬ್ಯಾಟ್ಸಮನ್ಗಳಿಂದ ರನ್ ಬರದೇ ಇರುವ ಕಾರಣ ಅಂತಿಮವಾಗಿ ಪಾಕಿಸ್ತಾನ 47.2 ಓವರ್ಗಳಲ್ಲಿ 260 ರನ್ಗಳಿಗೆ ಅಲೌಟ್ ಆಯಿತ್ತು. ಆ ಮೂಲಕ ಮೊದಲ 60 ರನ್ಗಳ ಸೋಲು ಕಂಡು ಮುಂದಿನ ಪಂದ್ಯಗಳನ್ನು ಗೆಲ್ಲಲೇಬೇಕಾದ ಒತ್ತಡದಲ್ಲಿ ಸಿಲುಕಿಕೊಂಡಿತ್ತು. ಪಾಕಿಸ್ತಾನದ ಮುಂದಿನ ಪಂದ್ಯ ಭಾರತ ವಿರುದ್ದ ಫೆಬ್ರವರಿ 23ರಂದು ಆಡಲಿದೆ.

ಪಂದ್ಯ ಶ್ರೇಷ್ಠ: ಟಾಮ್ ಲ್ಯಾಥಮ್
ಅಭಿಷೇಕ್ ಎಸ್