ಬೆಂಗಳೂರು : ಏರ್ಪೋರ್ಟ್ ರಸ್ತೆಯ ಮೇಲ್ಸೆತುವೆ ಮೇಲೆ ಸರಣಿ ಅಪಘಾತ ಸಂಭವಿಸಿದ್ದು, ಈ ಅವಘಡದಲ್ಲಿ ಸ್ಥಳದಲ್ಲೇ ಇಬ್ಬರು ದುರ್ಮರಣಕ್ಕೀಡಾಗಿದ್ದಾರೆ.
ಇನ್ನೂ ಯಲಹಂಕ ಮೇಲ್ಸೇತುವೆ ಮೇಲೆ ಇನ್ನೋವಾ ಕಾರಿಗೆ ಮೊದಲು ಸಿಮೆಂಟ್ ಲಾರಿ ಡಿಕ್ಕಿ ಹೊಡೆದಿದ್ದು, ಪರಿಣಾಮ ಇಬ್ಬರು ಫ್ಲೈಓವರ್ ಬಲಭಾಗದಲ್ಲಿ ನಿಲ್ಲಿಸಿಕೊಂಡು ಗಲಾಟೆ ಮಾಡುತ್ತಿದ್ದಾಗ, ಅತಿ ವೇಗವಾಗಿ ಬಿಎಂಟಿಸಿ ವೋಲ್ವೊ ಬಸ್ ಬಂದಿದ್ದು ಲಾರಿಗೆ ರಭಸವಾಗಿಗುದ್ದಿದೆ. ಬಸ್ ನ ಮುಂದಿನ ಭಾಗ ಸಂಪೂರ್ಣ ನಜ್ಜುಗುಜ್ಜಾಗಿದ್ದು, ಬಿಎಂಟಿಸಿ ವೋಲ್ವೋ ಬಸ್ ಚಾಲಕನಿಗೆ ಗಂಭೀರವಾಗಿ ಗಾಯವಾಗಿದೆ. ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಇನ್ನೋವಾ ಕಾರು, ಸಿಮೆಂಟ್ ಲಾರಿ, ವೋಲ್ವೋ ಬಸ್ʼನ್ನು ಕ್ರೇನ್ ಮೂಲಕ ತೆರವು ಮಾಡಿ ವಶಕ್ಕೆ ಪಡೆದಿದ್ದು, ಸದ್ಯ ಯಲಹಂಕ ಸಂಚಾರಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.