ಚಿಕ್ಕಮಗಳೂರು : ಕುಟುಂಬಸ್ಥರ ಮನೆಗೆ ಹೋಗಿ ಬರುತ್ತಿದ್ದ ವೇಳೆ ಚಿಕ್ಕಮಗಳೂರು ಜಿಲ್ಲೆಯ ಹಿರೇಗದ್ದೆ ಸಮೀಪ ಕಾರು ಹಾಗೂ ಬೈಕ್ ನಡುವೆ ಡಿಕ್ಕಿಯಾಗಿದ್ದು, ಯುವಕ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.
ಚಿಕ್ಕಮಗಳೂರು ಜಿಲ್ಲೆಯ ಹಿರೇಗದ್ದೆ ಸಮೀಪದಲ್ಲಿ ಈ ಘಟನೆ ನಡೆದಿದ್ದು, ಬಾಳೆಹೊನ್ನೂರು ಪಟ್ಟಣದ ರೇಣುಕನಗರದಲ್ಲಿ ವಾಸಿಸುವ ಯೋಗೇಶ್ ಆಚಾರ್ಯ ರವರ ಮಗ ಎಂದು ಹೇಳಲಾಗಿದೆ. ಯುವಕ ಸಂಜಯ್ ಆಚಾರ್ಯ (23) ಬೈಕ್ ನಲ್ಲಿ ಹಿರೇಗದ್ದೆ ಸಮೀಪ ಕುಟುಂಬಸ್ಥರ ಮನೆಗೆ ಹೋಗಿ ಬರುವ ವೇಳೆ ರಸ್ತೆಯ ತಿರುವಿನಲ್ಲಿ ಕಾರು ಹಾಗೂ ಬೈಕ್ ನಾ ನಡುವೆ ಡಿಕ್ಕಿ ಸಂಭವಿಸಿ ಬೈಕ್ ನಲ್ಲಿ ಸವಾರಿಸುತ್ತಿದ್ದ ಯುವಕ ಸಂಜಯ್ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಮಗನನ್ನು ಕಳೆದುಕೊಂಡ ಪೋಷಕರು ಹಾಗೂ ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿದ್ದು, ಬಾಳೆಹೊನ್ನೂರು ಪೊಲೀಸ್ ಠಾಣೆಯಲ್ಲಿಈ ದೂರು ದಾಖಲಾಗಿದೆ.