ಆಕ್ಷನ್ ಕಿಂಗ್ ಅರ್ಜುನ್ ಸರ್ಜಾ ಕನ್ನಡ ಸೇರಿದಂತೆ ಭಾರತದ ವಿವಿಧ ಭಾಷೆಯ ಸಿನಿಮಾಗಳಲ್ಲಿ ಅಭಿನಯಿಸಿದ ಖ್ಯಾತ ನಟ. ಚಿಕ್ಕವರಿದ್ದಾಗಿನಿಂದ ಅಭಿನಯವನ್ನು ಮೈಗೂಡಿಸಿಕೊಂಡ ಅರ್ಜುನ್ ಸರ್ಜಾ ಅವರು ನಟನೆಯಲ್ಲಿ ಉನ್ನತ ಮಟ್ಟ ತಲುಪಿದ್ದಾರೆ. 62ನೇ ವಯಸ್ಸಿನಲ್ಲೂ ಚಿರ ಯುವಕನಂತೆ ಕಾಣಿಸುತ್ತಾರೆ. ಸಿನಿಮಾ ಕ್ಷೇತ್ರದಲ್ಲಿ ಕೆಲಸ, ಸಾಧನೆ, ಪರಿಶ್ರಮ ಪರಿಗಣಿಸಿ ಅರ್ಜುನ್ ಸರ್ಜಾ ಅವರಿಗೆ ಗೌರವ ಡಾಕ್ಟರೇಟ್ ಪ್ರದಾನ ಮಾಡಲಾಗಿದೆ.
ಅರ್ಜುನ್ ಸರ್ಜಾ ಅವರಿಗೆ ಡಾ.ಎಂಜಿಆರ್ ಎಜುಕೇಶನಲ್ ಅಂಡ್ ರಿಸರ್ಚ್ ಇನ್ಸ್ಟಿಟ್ಯೂಟ್ ಸರ್ವೀಸ್ ಕಡೆಯಿಂದ ಡಾಕ್ಟರೇಟ್ ನೀಡಿ ಗೌರವಿಸಲಾಗಿದೆ. 50 ವರ್ಷಗಳ ಕಾಲ ಸಿನಿಮಾ ಕ್ಷೇತ್ರದಲ್ಲೇ ಅರ್ಜುನ್ ಸರ್ಜಾ ಅವರು ದುಡಿದಿದ್ದಾರೆ. ಬಾಲಕರಾಗಿದ್ದಾಲೇ ನಟನೆ ಕಡೆಗೆ ಬಂದ ಅವರು ಹಲವಾರು ನಟರ ಜೊತೆ ತೆರೆ ಹಂಚಿಕೊಂಡಿದ್ದಾರೆ. ಕನ್ನಡಗಿಂತ ತಮಿಳು ಸಿನಿ ರಂಗದಿಂದ ಇವರಿಗೆ ಹೆಚ್ಚು ಅವಕಾಶಗಳು ಹುಡುಕಿಕೊಂಡು ಬಂದಿದ್ದರಿಂದ ಹೆಚ್ಚು ಸಮಯ ತಮಿಳು ಸಿನಿಮಾಗಳಲ್ಲೇ ಕಳೆದಿದ್ದಾರೆ.
ಇವರು ಕೇವಲ ನಟರಾಗಿ ಅಲ್ಲದೇ ನಿರ್ದೇಶಕನಾಗಿ, ನಿರ್ಮಪಕಾರಾಗಿ, ಸ್ಕ್ರೀನ್ ರೈಟರ್, ಡಿಸ್ಟಿಬ್ಯೂಟರ್, ಪೋಷಕ ನಟರಾಗಿ, ವಿಲನ್ ರೋಲ್ ಪಾತ್ರದಿಂದ ಚಿತ್ರ ರಂಗದಲ್ಲಿ ಗುರುತಿಸಿಕೊಂಡಿದ್ದಾರೆ. ಇವರು ಕನ್ನಡ, ಮಲಯಾಳಂ, ತೆಲುಗು, ತಮಿಳು, ಹಿಂದಿ ಹೀಗೆ ಭಾರತದ ಹಲವಾರು ಭಾಷೆಗಳ ಸಿನಿಮಾಗಳಲ್ಲಿ ಅಭಿನಯ ಮಾಡಿದ್ದಾರೆ.