Ashwaveega News 24×7 ಜನವರಿ 15 -Actress Karunya Ram Sister Controversy: ಕನ್ನಡದಲ್ಲಿ ಕೆಲ ಸಿನಿಮಾ, ಬಿಗ್ ಬಾಸ್ ಶೋನಲ್ಲಿ ಭಾಗವಹಿಸಿರುವ ಕಾರುಣ್ಯಾ ರಾಮ್ ಅವರು ಒಡಹುಟ್ಟಿದ ತಂಗಿ ಸಮೃದ್ಧಿ ರಾಮ್ ವಿರುದ್ಧವೇ ದೂರು ನೀಡಿದ್ದಾರೆ. ಅಷ್ಟಕ್ಕೂ ಅವರು ಪೊಲೀಸ್ ಠಾಣೆ ಮೆಟ್ಟಿಲೇರಿದ್ದು ಯಾಕೆ ?
ನಟಿ ಕಾರುಣ್ಯಾ ರಾಮ್ ಅವರು ತಂಗಿ ಸಮೃದ್ಧಿ ರಾಮ್ ಕೂಡ ಒಂದೇ ಮನೆಯಲ್ಲಿ ವಾಸ ಮಾಡುತ್ತಿದ್ದರು. ಈ ವೇಳೆ ಸಮೃದ್ಧಿ ಅವರು ಮೇಕಪ್ ಆರ್ಟಿಸ್ಟ್, ಬ್ಯೂಟಿಕ್ ಆಗಿ ಕೂಡ ಕೆಲಸ ಮಾಡುತ್ತಿದ್ದರು. ಕನ್ನಡ ನಟಿ ಕಾರುಣ್ಯಾ ರಾಮ್ ಅವರು ( Actress Karunya Ram Sister ) ತಂಗಿ ಸಮೃದ್ಧಿ ಅವರು ಬೆಟ್ಟಿಂಗ್ ಆಡಿ, ಸಾಲ ಮಾಡಿದ್ದಾರೆ ಎಂದು ಆರೋಪ ಮಾಡಿ, ಸ್ವಂತ ತಂಗಿಯ ವಿರುದ್ಧ ದೂರು ದಾಖಲಿಸಿದ್ದಾರೆ.
ಸ್ಯಾಂಡಲ್ ವುಡ್ ನ ಪ್ರಸಿದ್ಧ ನಟಿ ಕಾರುಣ್ಯ ರಾಮ್ ತಮ್ಮ ತಂಗಿ ಸಮೃದ್ಧಿ ರಾಮ್ ಸೇರಿದಂತೆ ಆರು ಮಂದಿಯ ವಿರುದ್ಧ ಸಿಸಿಬಿ ಪೊಲೀಸರಿಗೆ ದೂರು ನೀಡಿದ್ದಾರೆ. ಕುಟುಂಬದ ಒಳಗಿರುವ ಕಲಹ, ಹಣಕಾಸು ವಿವಾದ, ಅಶ್ಲೀಲ ಸಂದೇಶ ಹಾಗೂ ಸಾಮಾಜಿಕ ಜಾಲತಾಣದಲ್ಲಿ ನಡೆದ ನಿಂದನೆ ಎಲ್ಲವೂ ಸೇರಿ ಪ್ರಕರಣ ಗಂಭೀರ ತಿರುವು ಪಡೆದಿದೆ. ತಂಗಿ ಸಮೃದ್ಧಿ ರಾಮ್ ಜೊತೆಗೆ ಪ್ರತಿಭ, ಕಪಿಲ್, ಪ್ರಜ್ವಲ್, ರಕ್ಷಿತ್ ಮತ್ತು ಸಾಗರ್ ಎಂಬುವವರನ್ನು ವಿರುದ್ಧ ದೂರು ನೀಡಿದ್ದಾರೆ.

ಅತ್ತ ಕಾರುಣ್ಯಾ ರಾಮ್ ಅವರಿಗೆ ಮನೆ ಮುಂದೆ ಬಂದು ಸಾಲಗಾರರು ಕಾಟ ಕೊಟ್ಟಿದ್ದಾರೆ. ಅಷ್ಟೇ ಅಲ್ಲದೆ ಯಾವುದೇ ಪೋಸ್ಟ್ ಹಾಕಿದರೂ ಕೂಡ ಕೆಲವರು ಅಶ್ಲೀಲ ಕಾಮೆಂಟ್ಗಳನ್ನು ಹಾಕುತ್ತಿದ್ದರಂತೆ. ಹೀಗಾಗಿ ಕಾರುಣ್ಯಾ ರಾಮ್ ಅವರು ಆರ್ ಆರ್ ನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಪ್ರತಿಭಾ, ರಕ್ಷಿತ್, ಪ್ರಜ್ವಲ್, ಸಾಗರ್, ಸಮೃದ್ಧಿ ವಿರುದ್ಧ ದೂರು ದಾಖಲಾಗಿದೆ. ಪೊಲೀಸರು ಈ ಬಗ್ಗೆ ತನಿಖೆ ಮಾಡುತ್ತಿದ್ದಾರೆ.
