ಐಶ್ವರ್ಯಾ ರೈ ಬಚ್ಚನ್ ಮಗಳು ಆರಾಧ್ಯ ಬಚ್ಚನ್ ಅವರ ಬರ್ತ್ಡೇ ಪೋಸ್ಟ್ ಶೇರ್ ಮಾಡಿಕೊಂಡಿದ್ದಾರೆ. ಅವರ ಮಗಳು ಆರಾಧ್ಯ ಅವರ ಜನ್ಮದಿನದ ಪೋಸ್ಟ್ವನ್ನು ತಡವಾಗಿ ಹಾಕಿದ್ದಾರೆ ಐಶ್ವರ್ಯಾ. ಇದರ ಜತೆಗೆ ದಿವಂಗತ ತಂದೆ ಕೃಷ್ಣರಾಜ್ ರೈ ಅವರಿಗೆ ಶ್ರದ್ಧಾಂಜಲಿ ಅರ್ಪಿಸುವ ಫೋಟೋ ಕೂಡ ಶೇರ್ ಮಾಡಿಕೊಂಡಿದ್ದಾರೆ. ನವೆಂಬರ್ 16 ರಂದು 13 ನೇ ವರ್ಷಕ್ಕೆ ಕಾಲಿಟ್ಟ ಆರಾಧ್ಯ, ಹುಟ್ಟುಹಬ್ಬವನ್ನು ಅದ್ಧೂರಿಯಾಗಿ ಆಚರಿಸಿಕೊಂಡರು. ಐಶ್ವರ್ಯಾ ಅವರು ಅಷ್ಟೂ ಶೇರ್ ಮಾಡಿಕೊಂಡಿರುವ ಫೋಟೋದಲ್ಲಿ ಅಭಿಷೇಕ್ ಇಲ್ಲದೇ ಇರೋದನ್ನ ನೋಡಿ ಎಲ್ಲಿ ಎಂದು ಪ್ರಶ್ನೆ ಇಟ್ಟಿದ್ದಾರೆ ನೆಟ್ಟಿಗರು.
ಆರಾಧ್ಯ ತನ್ನ ದಿವಂಗತ ಅಜ್ಜ ಕೃಷ್ಣರಾಜ್ ರೈ ಅವರ ಭಾವಚಿತ್ರದ ಮುಂದೆ ಗೌರವಯುತವಾಗಿ ನಮಸ್ಕರಿಸುತ್ತಿರುವುದು ಒಂದು ಫೋಟೋ ಇದೆ. ಇನ್ನೊಂದು ಚಿತ್ರದಲ್ಲಿ ಐಶ್ವರ್ಯ ಮತ್ತು ಆರಾಧ್ಯ ಅವರು ಬೃಂದ್ಯಾ ರೈ ಜತೆಗೆ ಪೋಸ್ ಕೊಟ್ಟಿದ್ದಾರೆ.ಇನ್ನು ಆರಾಧ್ಯ ಅವರ ಬಾಲ್ಯದ ಫೋಟೊ ಜತೆಗೆ ಹುಟ್ಟುಹಬ್ಬದ ಆಚರಣೆ ಫೋಟೋವನ್ನು ಶೇರ್ ಮಾಡಿಕೊಂಡಿದ್ದಾರೆ.
ಫೋಟೋ ಶೇರ್ ಮಾಡಿ ಐಶ್ವರ್ಯ ಅವರು ತಮ್ಮ ಮಗಳಿಗೆ “ಜನ್ಮದಿನದ ಶುಭಾಶಯಗಳು 2 ನನ್ನ ಜೀವನದ ಶಾಶ್ವತ ಪ್ರೀತಿ ಪ್ರೀತಿಯ ಅಪ್ಪ-ಅಜ್ಜಾ ಮತ್ತು ನನ್ನ ಪ್ರೀತಿಯ ಆರಾಧ್ಯ. ನನ್ನ ಹೃದಯ ನೀನು ಎಂದು ಬರೆದುಕೊಂಡಿದ್ದಾರೆ.
ಇದೇ ವೇಳೆ ಐಶ್ವರ್ಯಾ 2017 ರಲ್ಲಿ ಕ್ಯಾನ್ಸರ್ ವಿರುದ್ಧ ಹೋರಾಡಿ ನಿಧನರಾದ ತನ್ನ ದಿವಂಗತ ತಂದೆಯನ್ನು ಗೌರವಿಸಿದ್ದಾರೆ. ಆದರೆ ಈ ಎರಡೂ ಆಚರಣೆಗಳಲ್ಲಿ ಅಭಿಷೇಕ್ ಬಚ್ಚನ್ ಅನುಪಸ್ಥಿತಿಯು ಅಭಿಮಾನಿಗಳ ಗಮನಕ್ಕೆ ಬಂದಿದೆ. ಒಬ್ಬರು ಬರೆದಿದ್ದಾರೆ, “ಅಭಿಷೇಕ್ ಸರ್ ಎಲ್ಲಿದ್ದಾರೆ? ಎಂದು ಕಮೆಂಟ್ ಮಾಡಿದ್ದಾರೆ, “ಚಿತ್ರಗಳಲ್ಲಿ ಅಮಿತಾಭ್ ಬಚ್ಚನ್ ಕುಟುಂಬ ಇಲ್ಲ ಎಂದು ಮತ್ತೊಬ್ಬರು ಕಮೆಂಟ್ ಮಾಡಿದ್ದಾರೆ. ಡಿವೋರ್ಸ್ ಬಗ್ಗೆ ವದಂತಿಗಳು ಹರಡುತ್ತಿದ್ದರೂ, ಐಶ್ವರ್ಯಾ ಅಥವಾ ಅಭಿಷೇಕ್ ಈ ವಿಷಯದ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.