ಹೈದರಾಬಾದ್ನಲ್ಲಿ ನಟ ನಾಗಾರ್ಜುನಗೆ ಸೇರಿದ ಕಟ್ಟಡವನ್ನು ಧ್ವಂಸ ಮಾಡಲಾಗಿದೆ. ಕೆರೆ ಭೂಮಿಯನ್ನು ಒತ್ತುವರಿ ಮಾಡಿಕೊಂಡು ಅಕ್ರಮವಾಗಿ ಕಟ್ಟಡ ನಿರ್ಮಾಣ ಮಾಡಿದ ಆರೋಪ ಇತ್ತು. ಹೀಗಾಗಿ ಇದನ್ನು ನೆಲಸಮ ಮಾಡಲಾಗಿದೆ. ಆದರೆ ಈ ಆರೋಪವನ್ನು ನಾಗಾರ್ಜುನ ಅವರು ಅಲ್ಲಗಳೆದಿದ್ದಾರೆ. ‘ನನ್ನಿಂದ ಯಾವುದೇ ತಪ್ಪು ನಡೆದಿಲ್ಲ, ನಾನು ಯಾವುದೇ ನಿಯಮ ಉಲ್ಲಂಘನೆ ಮಾಡಿಲ್ಲ’ ಎಂದು ಅವರು ಹೇಳಿದ್ದಾರೆ.
ಹೈದರಾಬಾದ್ ವಿಪತ್ತು ಪ್ರತಿಕ್ರಿಯೆ ಮತ್ತು ಆಸ್ತಿಗಳ ಮೇಲ್ವಿಚಾರಣೆ ಮತ್ತು ರಕ್ಷಣೆ ಏಜೆನ್ಸಿ (HYDRAA) ನಾಗಾರ್ಜುನ ಅವರಿಗೆ ಸೇರಿದ ಕನ್ವೆಂಷನ್ ಹಾಲ್ನ ಒಡೆದು ಹಾಕಿದೆ. ಸರ್ಕಾರಿ ಜಮೀನು ಹಾಗೂ ಕೆರೆಗಳನ್ನು ಒತ್ತುವರಿ ಮಾಡಿದ್ದರ ವಿರುದ್ಧ HYDRAA ಕ್ರಮ ಕೈಗೊಳ್ಳುತ್ತಿದೆ. ಇದರ ಭಾಗವಾಗಿ ಈ ಕಟ್ಟಡ ಒಡೆಯಲಾಗಿದೆ.
స్టే ఆర్డర్లు మరియు కోర్టు కేసులకు విరుద్ధంగా ఎన్ కన్వెన్షన్కు సంబంధించి కూల్చివేతలు చేపట్టడం బాధాకరం. మా ప్రతిష్టను కాపాడటం కోసం, కొన్ని వాస్తవాలను తెలియజేయడం కోసం మరియు చట్టాన్ని ఉల్లంఘించేలా మేము ఎటువంటి చర్యలు చేపట్టలేదని తెలుపుట కొరకు ఈ ప్రకటనను జారీ చేయడం సరైనదని నేను…
— Nagarjuna Akkineni (@iamnagarjuna) August 24, 2024
ನಾಗಾರ್ಜುನ ಅವರಿಗೆ ಸೇರಿದ ‘ಎನ್ ಕನ್ವೆಂಷನ್ ಹಾಲ್’ 10 ಎಕರೆ ಜಾಗದಲ್ಲಿ ಇತ್ತು. ಈ ಕಟ್ಟಡ ನಿರ್ಮಾಣದ ವೇಳೆ ಹಲವು ನಿಯಮಗಳ ಉಲ್ಲಂಘನೆ ಮಾಡಲಾಗಿದೆ ಎಂಬುದು ಸಾಬೀತಾಗಿದೆ. ಮಾದಾಪುರದ ತಮ್ಮಿಡಿಕುಂಟ ಕೆರೆಯ 1.12 ಎಕರೆ ಜಾಗವನ್ನು ಒತ್ತುವರಿ ಮಾಡಿಕೊಳ್ಳಲಾಗಿದೆ. ಉಳಿದ ಎರಡು ಎಕರೆ ಕೆರೆ ಬಫರ್ಜೋನ್ನಲ್ಲಿ ಬರುತ್ತದೆ ಎನ್ನಲಾಗಿದೆ.