
Ashwaveega News 24×7 ಜು. 31: ಹಸಿರು ತರಕಾರಿಗಳನ್ನು ತಿನ್ನುವುದರಿಂದ ನಮ್ಮ ದೇಹದ ಆರೋಗ್ಯಕ್ಕೆ ಅಷ್ಟೆ ಅಲ್ಲದೇ , ಮನಸ್ಸಿನ ಮೇಲೂ ಗಾಢ ಪರಿಣಾಮ ಬೀರುತ್ತೆ . ಯಾಕೆಂದರೆ ತರಕಾರಿಗಳ ಸೇವನೆಯಿಂದಾಗಿ ಮನಸ್ಸು ಶಾಂತವಾಗಿರುತ್ತೆ . ಮಾಂಸಾಹಾರಿಗಳು ಕೂಡ ಪ್ರತಿನಿತ್ಯವೂ ಸ್ವಲ್ಪ ಪ್ರಮಾಣದಲ್ಲಿ ತರಕಾರಿ ತಿನ್ನಲೇಬೇಕು ಕಣ್ರೀ ಏಕಂದರೆ ಪ್ರತಿಯೊಂದು ತರಕಾರಿಯಲ್ಲೂ ಹಲವಾರು ರೀತಿಯ ಪೋಷಕಾಂಶಗಳು ಇರುತ್ತೆ .
ನಾವು ತಿನ್ನುವ ಹಲವಾರು ಬಗೆಯ ತರಕಾರಿಗಳಲ್ಲಿ ಬೆಂಡೆಕಾಯಿ ಕೂಡ ಒಂದು. ಬೇರೆ ತರಕಾರಿಗಳಿಗೆ ಹೋಲಿಸಿದರೆ ಇದು ತನ್ನಲ್ಲಿ ಲೋಳೆಯ ಪ್ರಮಾಣ ವನ್ನು ಹೊಂದಿರುತ್ತದೆ. ಆರೋಗ್ಯದ ವಿಚಾರಕ್ಕೆ ಸಂಬಂಧಪಟ್ಟಂತೆ ಬೆಂಡೆಕಾಯಿ ನಮಗೆ ಅನುಕೂಲಕರವಾದ ಗುಣಲಕ್ಷಣ ಗಳನ್ನು ಒಳಗೊಂಡಿದೆ. ಬೆಂಡೆಕಾಯಿಯಲ್ಲಿ ನಮ್ಮ ದೇಹಕ್ಕೆ ಬೇಕಾದ ಪೌಷ್ಟಿಕಾಂಶಗಳು ಮತ್ತು ಇನ್ನಿತರ ಆರೋಗ್ಯಕರ ಪ್ರಯೋಜನಗಳಿಂದ ಕೊಡಿರುತ್ತೆ . ಅದಕ್ಕೆ ಬೆಂಡೆಕಾಯಿಯನ್ನು ತಿಂದಾಗ ನಮಗೆ ಗೊತ್ತಿಲ್ಲದೆ ನಾವು ಈ ಪ್ರಯೋಜನಗಳನ್ನು ಪಡೆದುಕೊಳ್ಳುತ್ತೇವೆ .
ಬೆಂಡೆಕಾಯಿ ತಿನ್ನುವುದರ ನಮಗೆ ಏನೆಲ್ಲಾ ಪ್ರಯೋಜನಗಳು ಸಿಗುತ್ತೆ ಅಂತ ನೋಡುವುದಾದರೆ :
- ಬೆಂಡೆಕಾಯಿ ತಿನ್ನುವುದರಿಂದ ಹೃದಯದ ಆರೋಗ್ಯವನ್ನು ಕಾಪಾಡಿತ್ತೆ .
- ಈ ಹಸಿರು ತರಕಾರಿ ನಿಮ್ಮ ಕರುಳಿಗೆ ಅತ್ಯುತ್ತಮ ಅಂತೆ.
- ಬೆಂಡೆಕಾಯಿ ಭಾರತೀಯ ಅಡುಗೆಮನೆಗಳಲ್ಲಿ ಕೇವಲ ಒಂದು ಪ್ರಧಾನ ಆಹಾರಕ್ಕಿಂತ ಹೆಚ್ಚಿನದಾಗಿದೆ. ಇದು ಪೌಷ್ಟಿಕಾಂಶದ ಶಕ್ತಿ ಕೇಂದ್ರವಾಗಿದೆ.
- ರಾತ್ರಿಯಿಡೀ ನೆನೆಸಿದಾಗ, ಅದರ ಲೋಳೆಸರದ ನೀರು ಆಗುತ್ತೆ . ಈ ನೀರು ಪರಿಣಾಮಕಾರಿಯಾಗಿ ಕೆಲಸ ಮಾಡುತ್ತೆ .
- ಇದು ರಕ್ತದಲ್ಲಿನ ಸಕ್ಕರೆಯನ್ನು ನಿಯಂತ್ರಿಸುತ್ತದೆ
6. ಇದು ಟೈಪ್ 2 ಮಧುಮೇಹಕ್ಕೆ ಅತ್ಯುತ್ತಮವಾಗಿದೆ
- ಬೆಂಡೆ ಜೀರ್ಣಕ್ರಿಯೆ, ಜಲಸಂಚಯನ ಮತ್ತು ಚಯಾಪಚಯ ಕ್ರಿಯೆಯನ್ನು ಬೆಂಬಲಿಸುತ್ತೆ .
8. ಇದು ಹೆಚ್ಚಿನ ಫೈಬರ್ ಅಂಶದಿಂದಾಗಿ ತೂಕ ನಷ್ಟಕ್ಕೆ ಸಹಾಯ ಮಾಡುತ್ತದೆ - ಹೃದಯದ ಆರೋಗ್ಯವನ್ನು ಬೆಂಬಲಿಸುವಾಗ ರಕ್ತದೊತ್ತಡವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತೆ .
- ಹೊಟ್ಟೆಯ ಒಳಪದರವನ್ನು ರಕ್ಷಿಸುತ್ತದೆ, ಇದು ಪೆಪ್ಟಿಕ್ ಹುಣ್ಣುಗಳನ್ನು ಗುಣಪಡಿಸಲು ಉತ್ತಮವಾಗಿದೆ.
- ಮಧುಮೇಹ ನಿರ್ವಹಣೆಗೆ ಬೆಂಡೆಕಾಯಿ ಮನೆಮದ್ದು ಅಂತನೇ ಹೇಳಬುಹುದು .
ಇನ್ನೋ ತರಕಾರಿ ಖಾದ್ಯವಾಗಿ ಬೆಂಡೆಕಾಯಿ ಸೇವಿಸುವುದರ ಜೊತೆಗೆ, ಅದನ್ನು ನಿಮ್ಮ ಆಹಾರದಲ್ಲಿ ಸೇರಿಸಿಕೊಳ್ಳುವ ಇನ್ನೊಂದು ವಿಧಾನವೆಂದರೆ ಬೆಂಡೆಕಾಯಿ ನೀರನ್ನು ಸೇವಿಸುವುದು. ನೀವು ಬೆಂಡೆಕಾಯಿ ನೀರನ್ನು ಹೇಗೆ ಅಂತೀರಾ ..? ಬೆಂಡೆಕಾಯಿ ನೀರು ಹೇಗೆ ಮಾಡಬೇಕು ಮತ್ತು ಈ ನೀರು ಕುಡಿಯೋದರಿಂದ ಆರೋಗ್ಯಕ್ಕೆ ಹೇಗೆ ಲಾಭ ಆಗುತ್ತೆ ಅಂತ ಹೇಳ್ತೀವಿ ಕೇಳಿ .
2-3 ತಾಜಾ ಬೆಂಡೆಕಾಯಿ ತೆಗೆದುಕೊಂಡು, ಅವುಗಳನ್ನು ಚೆನ್ನಾಗಿ ತೊಳೆದು, ತುದಿಗಳನ್ನು ಕತ್ತರಿಸಿ, ಸಣ್ಣ ಸೀಳುಗಳನ್ನು ಮಾಡಿ.
ಅವುಗಳನ್ನು ರಾತ್ರಿಯಿಡೀ ಒಂದು ಲೋಟ ನೀರಿನಲ್ಲಿ ನೆನೆಸಿ, ನೀರನ್ನು ಸೋಸಿ, ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಕುಡಿಯಿರಿ.
“ನಾರಿನಂಶವಿರುವ ಈ ನೀರು ಜೀರ್ಣಕ್ರಿಯೆಯನ್ನು ನಿಧಾನಗೊಳಿಸುತ್ತದೆ, ಸಕ್ಕರೆ ಹೆಚ್ಚಳವನ್ನು ತಡೆಯುತ್ತದೆ ಇದರ ಜೊತೆಗೆ ಕರುಳಿನ ಆರೋಗ್ಯವನ್ನು ಬೆಂಬಲಿಸುತ್ತದೆ. ಬೆಂಡೆಕಾಯಿ ನೀರು ಚಯಾಪಚಯ ಕ್ರಿಯೆಯನ್ನು ಹೆಚ್ಚಿಸುತ್ತದೆ, ಆದರೆ ಚಯಾಪಚಯ ಕ್ರಿಯೆಯು ಕ್ಯಾಲೊರಿಗಳನ್ನು ಸುಡುವುದರ ಬಗ್ಗೆ ಮಾತ್ರವಲ್ಲ; ಇದು ನಿಮ್ಮ ದೇಹವು ಶಕ್ತಿಯನ್ನು ಹೇಗೆ ಪ್ರಕ್ರಿಯೆಗೊಳಿಸುತ್ತದೆ ಎಂಬುದರ ಮೇಲೂ ಪರಿಣಾಮ ಬೀರುತ್ತದೆ….