
ಭಾರತ ತಂಡದ ಹಿರಿಯ ಆಟಗಾರ ವೃದ್ದಿಮಾನ್ ಸಾಹ ಎಲ್ಲಾ ಮಾದರಿಯ ಕ್ರಿಕೆಟ್ಗೆ ನಿವೃತ್ತಿ ಘೋಷಿಣೆ ಮಾಡಿದ್ದಾರೆ. ಆ ಮೂಲಕ ತಮ್ಮ 18 ವರ್ಷಗಳ ಸುದೀರ್ಘ ಕ್ರಿಕೆಟ್ ಬದುಕಿಗೆ ಸಾಹಾ ಫುಲ್ ಸ್ಟಾಪ್ ಇಟ್ಟಿದ್ದಾರೆ. ಭಾರತ ಪರ 2010ರಲ್ಲಿ ಪರ್ದಾಪಣೆ ಮಾಡಿದ್ದ ಸಾಹ 40 ಟೆಸ್ಟ್ ಪಂದ್ಯಗಳಿಂದ 3 ಶತಕ ,ಹಾಗೂ .6 ಅರ್ಧಶತಕದೊಂದಿಗೆ 1353 ರನ್ ಗಳಿಸಿದ್ದಾರೆ. ಸಾಹಗೆ ಟೆಸ್ಟ್ನಲ್ಲಿ ಸಿಕ್ಕ ಅವಕಾಶ ಏಕದಿನ ಮಾದರಿಯಲ್ಲಿ ಸಿಗಲಿಲ್ಲ. ಏಕದಿನದಲ್ಲಿ ಸಾಹ ಕೇವಲ 9 ಏಕದಿನ ಪಂದ್ಯಗಳನ್ನಾಡಿ 41 ರನ್ ಗಳಿಸಿದ್ದಾರೆ.

2014ರ ಬಳಿಕ ಅವರಿಗೆ ಭಾರತದಲ್ಲಿ ಆಡಲು ಅವಕಾಶ ಸಿಗಲಿಲ್ಲ. ಆದರೆ ಟೆಸ್ಟ್ನಲ್ಲಿ ಭಾರತ ಪರ ಉತ್ತಮ ಪ್ರದರ್ಶನ ನೀಡಿದ್ದರು. ಐಪಿಎಲ್ನಲ್ಲಿ ಒಟ್ಟು 2934 ರನ್ ಗಳಿಸಿರುವ ಸಾಹ ಪಂಜಾಬ್ ಕಿಂಗ್ಸ್, ಗುಜರಾತ್ ಟೈಟಾನ್ಸ್ ಪರ ಆಡಿದ್ದರು. ಇನ್ನೂ ದೇಶೀಯ ಕ್ರಿಕೆಟ್ ಟೂರ್ನಿಯಲ್ಲಿ ಸಾಹ 15 ವರ್ಷ ಬಂಗಾಳ ಪರವಾಗಿ 2 ವರ್ಷ ತ್ರಿಪುರಾ ಪರವಾಗಿ ಆಡಿದ್ದಾರೆ