ಸಿಎಂ ವಿರುದ್ಧದ ಮುಡಾ ಪ್ರಕರಣಕ್ಕೆ ಸಂಬಂಧಪಟ್ಟಂತೆ ಸ್ಫೋಟಕ ಟ್ವಿಸ್ಟ್ ಸಿಕ್ಕಿದೆ. ಲೋಕಯುಕ್ತಕ್ಕೆ ಇಡಿ ಸಲ್ಲಿಸಿದ್ದ ವರದಿಯಲ್ಲಿ ನಗ್ನ ಸತ್ಯಗಳು ಬಯಲಾಗಿದ್ದು, ಮೈಸೂರು ಮುಡಾದಲ್ಲಿ ಭಾರಿ ಆಕ್ರಮ ನಡೆದಿರುವುದನ್ನ ಜಾರಿ ನಿರ್ದೇಶನಾಲಯ ಅಧಿಕಾರಿಗಳು ಪತ್ತೆ ಹಚ್ಚಿದ್ದಾರೆ. ಸುಮಾರು 700 ಕೋಟಿ ರೂ. ಮೌಲ್ಯದ 1,095 ಸೈಟ್ಗಳನ್ನ ಆಕ್ರಮವಾಗಿ ಹಂಚಿರೋದು ತಿಳಿದು ಬಂದಿದೆ.
ಇತ್ತ ಸಿಎಂ ಪತ್ನಿ ಪಾರ್ವತಿಗೆ 14 ಸೈಟ್ ಮಂಜೂರಾತಿಯಲ್ಲೂ ರೂಲ್ಸ್ ಬ್ರೇಕ್ ಮಾಡಿದ್ದಾರೆ ಎನ್ನಲಾಗುತ್ತಿದೆ. ಮುಡಾ ಮಾಜಿ ಆಯುಕ್ತ ಮತ್ತು ಸಿಎಂ ಆಪ್ತರಾಗಿದ್ದ ದಿನೇಶ್ ಕುಮಾರ್ ಸೈಟ್ ಹಂಚಿಕೆ ವೇಳೆ ನಕಲಿ ಸಹಿ ಮಾಡಿದ ಆರೋಪ ಕೇಳಿ ಬಂದಿದೆ. ಅಲ್ಲದೇ ದಾಖಲೆಗೆ ವೈಟ್ನರ್ ಹಚ್ಚಿರೋದೂ ಇ.ಡಿ ತನಿಖೆಯಲ್ಲಿ ಪತ್ತೆಯಾಗಿದೆ..