
2022ರ ಆ. 15ರಂದು 8.25 ಲಕ್ಷ ಪ್ರಯಾಣಿಕರು ಸಂಚರಿಸಿದ್ದರು. ಅದಾದ ನಂತರ “ಸ್ವಾತಂತ್ರ್ಯ ದಿನಾಚರಣೆ ಮತ್ತು ಲಾಲ್ ಬಾಗ್ ಫಲಪುಷ್ಪ ಪ್ರದರ್ಶನ ಇರುವುದರಿಂದ ಆಗಸ್ಷ್ 14ರಂದು ಮೆಟ್ರೊದ ಚಲ್ಲಘಟ್ಟದಿಂದ ಪೂರ್ವದ ಕಾಡುಗೋಡಿ (ವೈಟ್ ಫೀಲ್ಡ್)ವರೆಗೆ (ನೇರಳೆ ಮಾರ್ಗ) 4.43 ಲಕ್ಷಹಾಗೂ ನಾಗಸಂದ್ರದಿಂದ ದಕ್ಷಿಣದ ಸಿಲ್ಕ್ ಇನ್ಸ್ಟಿಟ್ಯೂಟ್ಗೆ (ಹಸಿರು ಮಾರ್ಗ) 3.01 ಲಕ್ಷ ಪ್ರಯಾಣಿಕರು. ಹಾಗೂ ನಾಡಪ್ರಭು ಕೆಂಪೇಗೌಡ ನಿಲ್ದಾಣ (ಮೆಜೆಸ್ಟಿಕ್ ಇಂಟರ್ಚೇಂಜ್) ಮೂಲಕ 1.72 ಲಕ್ಷ ಜನರು ಪ್ರಯಾಣ ಮಾಡಿದ್ದಾರೆ.

ಸ್ವಾತಂತ್ರ್ಯ ದಿನಾಚರಣೆಯ ಲಾಲ್ಬಾಗ್ ಫಲಪುಷ್ವ ಪ್ರದರ್ಶನ ಸಲುವಾಗಿ ಅಂದು ಪ್ರಯಾಣಿಕರ ಸಂಖ್ಯೆಯಲ್ಲಿ ಭಾರಿ ಏರಿಕೆಯಾಗಿದೆ. ಅಂದರೆ 9 ಲಕ್ಷಕ್ಕೂ ಹೆಚ್ಚು ಪ್ರಯಾಣಿಕರ ಪಯಣ ನಮ್ಮ ಮೆಟ್ರೊ ನೇರಳೆ ಮಾರ್ಗ ವಿಸ್ತರಣೆಯಾದ ಬಳಿಕ ಪ್ರಯಾಣಿಕರ ಸಂಖ್ಯೆ ಹೆಚ್ಚಾಗಿದೆ. ಒಂದೇ ದಿನ 9.17 ಲಕ್ಷ ಜನರು ಮೆಟ್ರೊದಲ್ಲಿ ಪ್ರಯಾಣ ಮಾಡಿ ದಾಖಲೆ ಬರೆದಿದ್ದಾರೆ. ಹಸಿರು ಹಾಗೂ ನೇರಳೆ ಮಾರ್ಗಕ್ಕೆ ಹೋಲಿಸಿದರೆ ನೇರಳೆ ಮಾರ್ಗದಲ್ಲಿ ಪ್ರಯಾಣಿಕರ ಸಂಖ್ಯೆ ಸಾಕಷ್ಟು ಹೆಚ್ಚಿದೆ. ಬೇರೆ ದಿನಗಳಲ್ಲಿ ಐಟಿ ಕಂಪನಿಗಳ ಟೆಕ್ಕಿ ಗಳು ಹೆಚ್ಚು ಮೆಟ್ರೊ ಅವಲಂಬಿಸುತ್ತಿದ್ದಾರೆ .
