Ashwaveega News 24×7 ಮಾರ್ಚ್ 11 – 2026 : ಚುನಾವಣೆ ಹಿನ್ನಲೆಯಲ್ಲಿ ಮಹಿಳೆಯರ ಮನ ಗೆಲ್ಲಲು ಅಸ್ಸಾಂ ಸರ್ಕಾರ ದೊಡ್ಡ ಹೆಜ್ಜೆ ಇಟ್ಟಿದೆ. ಮಹಿಳಾ ಫಲಾನುಭವಿಗಳ ಬ್ಯಾಂಕ್ ಖಾತೆಗೆ ಒಟ್ಟಾಗಿ ₹9,000 ಹಣವನ್ನು ಜಮೆ ಮಾಡಲಾಗಿದೆ.
ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮಾ ನೇತೃತ್ವದ ಸರ್ಕಾರ, “ಒರುನೋಡೈ” ಎನ್ನುವ ಯೋಜನೆಯಡಿ ಈ ಹಣವನ್ನು ಮಹಿಳೆಯರ ಖಾತೆಗೆ ವರ್ಗಾವಣೆ ಮಾಡಿದೆ. ಸರ್ಕಾರದ ಗ್ಯಾರಂಟಿ ರೀತಿಯ ಈ ಯೋಜನೆ ಮೂಲಕ ಮಹಿಳೆಯರಿಗೆ ಆರ್ಥಿಕ ಸಹಾಯ ನೀಡಲಾಗುತ್ತಿದೆ .
ಈ ಯೋಜನೆಯಡಿ ಮಹಿಳಾ ಫಲಾನುಭವಿಗಳಿಗೆ ಪ್ರತಿ ತಿಂಗಳು ₹1,250 ಹಣ ನೀಡಲಾಗುತ್ತದೆ. ಇದರ ಜೊತೆಗೆ ಅಸ್ಸಾಂನ ಪ್ರಮುಖ ಹಬ್ಬವಾದ ಬೊಹಾಂಗ್ ಬಿಹು ಹಬ್ಬದ ಪ್ರಯುಕ್ತ ಹೆಚ್ಚುವರಿಯಾಗಿ ₹4,000 ಹಣವನ್ನು ಸಹ ಜಮೆ ಮಾಡಲಾಗಿದೆ.
ಚುನಾವಣೆ ಹಿನ್ನಲೆಯಲ್ಲಿ ಮಹಿಳಾ ಮತದಾರರನ್ನು ಸೆಳೆಯುವ ಉದ್ದೇಶದಿಂದ ಸರ್ಕಾರ ಒಟ್ಟಾಗಿ ಈ ಹಣವನ್ನು ಖಾತೆಗಳಿಗೆ ಜಮೆ ಮಾಡಿದೆ ಎಂಬ ಮಾತುಗಳು ಕೇಳಿಬರುತ್ತಿವೆ.
ಇದಕ್ಕೂ ಮೊದಲು ಬಿಹಾರದಲ್ಲಿಯೂ ಇದೇ ರೀತಿಯ ತಂತ್ರವನ್ನು ಅನುಸರಿಸಲಾಗಿತ್ತು. ಅಲ್ಲಿ ಚುನಾವಣೆಯಲ್ಲಿ ಬಿಜೆಪಿ ಮೈತ್ರಿಕೂಟ ಗೆಲುವು ಸಾಧಿಸಿತ್ತು. ಇದೀಗ ಅದೇ ಸ್ಟಾಟರ್ಜಿ ಅನ್ನು ಅಸ್ಸಾಂನಲ್ಲಿಯೂ ಪ್ರಯೋಗಿಸಲಾಗುತ್ತಿದೆ
