
ಚಾಂಪಿಯನ್ಸ್ ಟ್ರೋಫಿಯ ಮಹತ್ವದ ಪಂದ್ಯಕ್ಕೆ ವರುಣ ಅಡ್ಡಿಯಾಗಿದ್ದಾನೆ, ಆಸ್ಟ್ರೇಲಿಯಾ Vs ಆಫ್ಗಾನಿಸ್ತಾನ ಪಂದ್ಯಕ್ಕೆ ಮಳೆ ಅಡ್ಡಿ ಮತ್ತು ಆಫ್ಗಾನಿಸ್ತಾನ ನಡುವಿನ ಪಂದ್ಯ ಮಳೆರಾಯನ ಕೃಪೆಯಿಂದ ಪಂದ್ಯ ನಡೆಸಲಾಗಲಿಲ್ಲ. ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಆಫ್ಗಾನಿಸ್ತಾನ 50 ಓವರ್ಗಳಲ್ಲಿ 273 ಗಳಿಸಿ ಅಲೌಟ್ ಆಯಿತ್ತು. ನಂತರ ಟಾರ್ಗೆಟ್ ಚೇಸ್ ಮಾಡಲು ಬ್ಯಾಟಿಂಗ್ಗೀಳಿದ ಆಸೀಸ್ 12.5 ಓವರ್ಗಳಿಗೆ 109-1 ರನ್ ಗಳಿಸಿ ಆಡುತಿತ್ತು. ಆದರೆ ಮಳೆರಾಯ ತನ್ನ ಆರ್ಭಟ ಮುಂದುವರೆಸಿದ್ದರಿಂದ ಪಂದ್ಯವನ್ನು ನಿಲ್ಲಿಸಿ ಎರಡು ತಂಡಗಳಿಗೂ ತಲಾ 1 ಅಂಕ ನೀಡಲಾಯಿತ್ತು. 1 ಅಂಕ ಪಡೆದ ಆಸ್ಟ್ರೇಲಿಯಾ Vs ಆಫ್ಗಾನಿಸ್ತಾನ ಪಂದ್ಯಕ್ಕೆ ಮಳೆ ಅಡ್ಡಿ ಸೆಮಿಫೈನಲ್ಗೆ ಎಂಟ್ರಿ ನೀಡಿದರೆ. ಟೂರ್ನಿಯಲ್ಲಿ ಅಚ್ಚರಿ ರೀತಿಯಲ್ಲಿ ಬಲಿಷ್ಠ ತಂಡಗಳಿಗೆ ಸೋಲುಷಿಸಿದ್ದ ಆಫ್ಗಾನಿಸ್ತಾನ ಬಹುತೇಕ ಸೆಮಿಸ್ನಿಂದ ಹೊರಬಿದ್ದಿದೆ ಆದರೂ ದಕ್ಷಿಣ ಆಫ್ರಿಕಾ ಹಾಗೂ ಇಂಗ್ಲೆಂಡ್ ನಡುವಿನ ಪಂದ್ಯದಲ್ಲಿ ಆಫ್ರಿಕಾ ತಂಡ ದೊಡ್ಡ ಅಂತರದಿಂದ ಸೋಲಬೇಕು. ಆಗ ಮಾತ್ರ ಆಫ್ಗಾನಿಸ್ತಾನ ಸೆಮಿಫೈನಲ್ ಹಂತದ ಕನಸು ಕಾಣಬಹುದಾಗಿದೆ. ಆದರೆ ಗೆಲ್ಲುವಿನ ಜೋಶ್ನಲ್ಲಿರುವ ದಕ್ಷಿಣ ಆಫ್ರಿಕಾ, ಸೋತು ಸುಣ್ಣವಾಗಿರುವ ಇಂಗ್ಲೆಂಡ್ ವಿರುದ್ದ ಸೋಲುವ ಅವಕಾಶ ತೀರಾ ಕಡಿಮೆ ಎಂಧು ಹೇಳಲಾಗುತ್ತಿದೆ.

ಅಭಿಷೇಕ್.ಎಸ್