ಬೆಂಗಳೂರು: ರ್ಯಾಪಿಡೋ ಚಾಲಕರ ಮೇಲೆ ಆಟೋ ಚಾಲಕರಿಂದ ಹಲ್ಲೆ ಪ್ರಕರಣಗಳು ಹೆಚ್ಚಾಗುತ್ತಿವೆ. ಹೆಚ್ ಎಸ್ ಆರ್ ಲೇಔಟ್ ಠಾಣೆಯಲ್ಲಿ ಈ ಸಂಬಂಧ ಹಲವಾರು ದೂರುಗಳು ದಾಖಲಾಗಿವೆ. ಹಲ್ಲೆಗೆ ಯತ್ನ, ಮೊಬೈಲ್ ಮತ್ತು ಕೀ ಕಿತ್ತೊಯ್ಯುವುದು ಸೇರಿದಂತೆ ಹಲವು ಆರೋಪಗಳ ಹಿನ್ನೆಲೆ ಎನ್ ಸಿ ಆರ್ ದಾಖಲಿಸಲಾಗಿದೆ.
ಕಳೆದ ಕೆಲವು ತಿಂಗಳಲ್ಲಿ ಈ ರೀತಿಯ ಘಟನೆಗಳು ಹೆಚ್ಚಾಗುತ್ತಿದ್ದು, ರ್ಯಾಪಿಡೋ ಚಾಲಕರು ಸುರಕ್ಷತೆಗಾಗಿ ಪೆಪ್ಪರ್ ಸ್ಪ್ರೇ ಬಳಕೆ ಮಾಡುತ್ತಿದ್ದಾರೆ. ರಾತ್ರಿಯ ರೈಡಿಂಗ್ ವೇಳೆ ತಮ್ಮ ರಕ್ಷಣೆಗೆ ಪೆಪ್ಪರ್ ಸ್ಪ್ರೇ ಹೊತ್ತೊಯ್ಯುತ್ತಿರುವ ಡ್ರೈವರ್ಸ್ಗಳು, ನಗರ ಸಂಚಾರಿ ಪೊಲೀಸರಿಗೆ ಸಹ ದೂರುಗಳನ್ನು ದಾಖಲಿಸಿದ್ದಾರೆ.
ಅಲ್ಲದೆ, ಆಟೋ ಚಾಲಕರೊಬ್ಬರು ಮೊಬೈಲ್ ಕಿತ್ತುಕೊಂಡು ಹಲ್ಲೆ ಮಾಡ್ತಿರುವ ಆರೋಪದ ಮೇಲೆ ರ್ಯಾಪಿಡೋ ಚಾಲಕರಿಂದ ಸಾಲು ಸಾಲು ದೂರುಗಳು ದಾಖಲಾಗಿವೆ.