
ಕೊಳ್ಳೇಗಾಲ : ಮೈಸೂರು ದಸರಾ ಹಿನ್ನಲೆಯಲ್ಲಿ ಬೊಂಬೆಗಳ ಪ್ರದರ್ಶನ ನಡೆಸಿದ್ದು, ನವರಾತ್ರಿ ಉತ್ಸವದ ಪ್ರಯುಕ್ತ ಕೊಳ್ಳೇಗಾಲದ ಮಹಿಳಾ ಮಣಿಯರಿಂದ ಬೊಂಬೆಗಳ ಪ್ರದರ್ಶನ ನಡೆದಿದೆ.
ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ಪಟ್ಟಣದ ಹೊಸಬೀದಿಯ ಕಾವ್ಯಾಂಜಲಿ ಎಂಬುವವರ ಮನೆಯಲ್ಲಿ ವೈವಿಧ್ಯಮಯ ಬೊಂಬೆಗಳ ಪ್ರದರ್ಶನ ಕೈಗೊಂಡಿದ್ದು, ಬೊಂಬೆಗಳ ಪ್ರದರ್ಶನ ಸಾರ್ವಜನಿಕರ ಗಮನ ಸೆಳೆಯುತ್ತಿದೆ. ದಸರಾ ಹಬ್ಬದ ಹಿನ್ನಲೆಯಲ್ಲಿ ವೈವಿದ್ಯಮಯ ಬೊಂಬೆಗಳ ಪ್ರದರ್ಶನ ಮಾಡಲಾಗಿದೆ.
ದಸರಾ ಉತ್ಸವ, ಪಟ್ಟಾಭಿಷೇಕ, ನವದುರ್ಗೆಯರು, ಜಾನಪದ ಕಲಾವಿದರು ಅಷ್ಟಲಕ್ಷ್ಮಿಯರು, ದಶವಾತರ ಗಣಪತಿ, ದೇಸಿನೃತ್ಯ, ಶ್ರೀನಿವಾಸಕಲ್ಯಾಣ, ಮಹಾವಿಷ್ಣು, ಶ್ರೀರಂಗನಾಥ, ಶ್ರೀಕೃಷ್ಣ ರುಕ್ಕಿಣಿ, ಗೋಪಿಕೆಯರು, ಸಪ್ತ ಋಷಿಗಳ ಯಾಗ, ಶ್ರೀರಾಘ ವೇಂದ್ರರ ಬೃಂದಾವನ,ಗಜಗರಿ, ವಿನಾ ಯಕ, ಯತಿಗಳು, ಸಿಪಾಯಿಗಳ ಸೇರಿದಂತೆ ನೂತನವಾಗಿ ಆಯೋದ್ಯರಾಮ ಬೊಂಬೆಗಳು ಕಣ್ಮನ ಸೆಳೆಯುತ್ತಿವೆ.
ಇದನ್ನೂ ಓದಿ : https://ashwaveega.com/malleswaram-gangamma-devi-temple-dussehra-sadagara/