Ashwaveega News 24×7 ಫೆಬ್ರವರಿ 05 -2026 – ಬಾಗಲಕೋಟೆ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಕಾಂಗ್ರೆಸ್ ಪಾಲಿಗೆ ದೊಡ್ಡ ಸವಾಲಾಗಿ ಪರಿಣಮಿಸುತ್ತಿದೆ . ಟಿಕೆಟ್ಗಾಗಿ ಹೆಚ್ಚಾದ ಆಕಾಂಕ್ಷಿಗಳು, ಬಣ ರಾಜಕೀಯ . ಒಂದಾಗಬೇಕಾದ ಕಾಂಗ್ರೆಸ್ ಈಗ ಒಡೆದ ಮನೆಯಂತಾಗಿದೆ.
ಹೆಚ್.ವೈ. ಮೇಟಿ ಅವರ ನಿಧನದಿಂದ ತೆರವಾಗಿರುವ ಕ್ಷೇತ್ರದಲ್ಲಿ, ಮೇಟಿ ಕುಟುಂಬದೊಳಗೇ ಟಿಕೆಟ್ಗೆ ತೀವ್ರ ಪೈಪೋಟಿ ಶುರುವಾಗಿದೆ. ಕಿರಿಯ ಪುತ್ರಿ ಮಹಾದೇವಿ ಮೇಟಿ ಟಿಕೆಟ್ ಮೇಲೆ ಪಟ್ಟು ಬಿಡದೇ ನಿಂತಿದ್ದಾರೆ. “ಈ ಕ್ಷೇತ್ರ ನನ್ನ ತಂದೆಯ ರಾಜಕೀಯ ನೆಲ… ಟಿಕೆಟ್ ನನಗೇ ಬೇಕು” ಅನ್ನೋದು ಅವರ ಸ್ಪಷ್ಟ ಸಂದೇಶ.
ಇನ್ನೊಂದೆಡೆ, ಹೆಚ್.ವೈ. ಮೇಟಿ ಹಾಗೂ ಸಿಎಂ ಆಪ್ತ ಹೊಳಬಸು ಶೆಟ್ಟರ್ ಗುಂಪು ಒಂದು ಕಡೆ,
ಮಹಾದೇವಿ ಮೇಟಿ ಪರ ಮತ್ತೊಂದು ಬಲವಾದ ಗುಂಪು ಬೆಂಬಲಕ್ಕೆ ನಿಂತಿದೆ.
ಇದಕ್ಕೆ ವಿರುದ್ಧವಾಗಿ, ಮಲ್ಲಿಕಾರ್ಜುನ ಮೇಟಿ ಹಾಗೂ ಉಮೇಶ್ ಮೇಟಿ ಪರವೂ ಇನ್ನೊಂದು ಬಣ ಸಕ್ರಿಯವಾಗಿದೆ. ಇದ್ರಿಂದ ಬಾಗಲಕೋಟೆ ಕಾಂಗ್ರೆಸ್ನಲ್ಲಿ ಬಣ ರಾಜಕೀಯ ಮತ್ತಷ್ಟು ಗಟ್ಟಿಯಾಗುತ್ತಿದೆ. ಮಹಾದೇವಿ ಮೇಟಿಗೆ ಸಂಧಾನದ ಪ್ರಯತ್ನಗಳು ತೆರೆಮೆರೆಯಲ್ಲಿ ನಡೆದರೂ, “ಸಂಧಾನ ಬೇಡ , ನನಗೆ ಟಿಕೆಟ್ ಬೇಕು” ಅನ್ನೋದೇ ಅವರ ಅಡ್ಡಮಾತು.
ಈ ಬಣ ರಾಜಕೀಯದಿಂದ ಜಿಲ್ಲಾ ಕಾಂಗ್ರೆಸ್ ನಾಯಕತ್ವ ಗೊಂದಲದಲ್ಲಿದ್ದು,
ಕಾರ್ಯಕರ್ತರು ಕಂಗಾಲಾಗಿದ್ದಾರೆ. “ವಿನಾಕಾರಣ ಪಕ್ಷದಲ್ಲಿ ಗೊಂದಲ ಮೂಡಿಸುವುದು ಬೇಡ” ಅನ್ನೋ ಮಾತುಗಳು ಒಳಗಿಂದಲೇ ಕೇಳಿಬರುತ್ತಿವೆ. ಆದ್ರೆ ಬಾಗಲಕೋಟೆ ಕಾಂಗ್ರೆಸ್ನ ಒಳಜಗಳ ಈಗ ಸಾರ್ವಜನಿಕ ವಲಯದಲ್ಲೇ ಚರ್ಚೆಯಾಗ್ತಿದೆ.
ಬೈಎಲೆಕ್ಷನ್ಗೆ ಇನ್ನೂ ಸಮಯ ಇರುವಾಗಲೇ, ಈ ಗೊಂದಲಕ್ಕೆ ತಕ್ಷಣ ಬ್ರೇಕ್ ಹಾಕುವಂತೆ
ಕೆಪಿಸಿಸಿ ನಾಯಕತ್ವಕ್ಕೆ ಪಕ್ಷದೊಳಗಿಂದಲೇ ಮನವಿ ಕೇಳಿಬರುತ್ತಿದೆ. ಇಲ್ಲದಿದ್ರೆ ಬಾಗಲಕೋಟೆ ಬೈಎಲೆಕ್ಷನ್ ಕಾಂಗ್ರೆಸ್ಗೆ ಪ್ರತಿಷ್ಠೆಯಲ್ಲ,ಸಂಕಷ್ಟವಾಗುವ ಸಾಧ್ಯತೆ ಹೆಚ್ಚಿದೆ.
