Ashwaveega News 24×7 ಜನವರಿ 17 – ಬೀದರ – Bheemanna Khandre : ಕಲ್ಯಾಣ ಕರ್ನಾಟಕದ ಹಿರಿಯ ರಾಜಕೀಯ ಮುಖಂಡ, ಸಮಾಜ ಸೇವಕ ಹಾಗೂ ಶೈಕ್ಷಣಿಕ ಕ್ರಾಂತಿಯ ಹರಿಕಾರ ಭೀಮಣ್ಣ ಖಂಡ್ರೆ (103) ಅವರು ವಯೋಸಹಜ ಅನಾರೋಗ್ಯದಿಂದ ವಿಧಿವಶರಾಗಿದ್ದಾರೆ.
ಭಾಲ್ಕಿಯ ಪೂಜ್ಯ ಚನ್ನಬಸವಪಟ್ಟದ್ದೇವರು ಸ್ಥಾಪಿಸಿದ ಶಾಂತಿವರ್ಧಕ ಶಿಕ್ಷಣ ಸಂಸ್ಥೆಯನ್ನು ಬೆಳೆಸುವಲ್ಲಿ ಅವರು ಪ್ರಮುಖ ಪಾತ್ರ ವಹಿಸಿದ್ದರು, ಸಹಕಾರಿ ಕ್ಷೇತ್ರದಲ್ಲಿ ರೈತರ ಮತ್ತು ಕಾರ್ಮಿಕರ ಹಿತಾಸಕ್ತಿಗಾಗಿ ಅಪಾರ ಸುಧಾರಣೆಗಳನ್ನು ತಂದಿದ್ದರು. “ಲೋಕನಾಯಕ” ಅನ್ನುವ ಬಿರುದನ್ನು ಪಡೆದುಕೊಂಡಿದ್ದಾರೆ. ಅವರ ನಿಧನಕ್ಕೆ ರಾಜ್ಯದ ರಾಜಕೀಯ ನಾಯಕರು, ಮಠಾಧೀಶರು ಮತ್ತು ನಾಡಿನ ಗಣ್ಯರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.
ತಂದೆ ಭೀಮಣ್ಣ ಖಂಡ್ರೆ ನಿಧನಕ್ಕೆ ಅರಣ್ಯ ಸಚಿವ ಹಾಗೂ ಭೀಮಣ್ಣ ಖಂಡ್ರೆ ಪುತ್ರ ಈಶ್ವರ್ ಖಂಡ್ರೆ ಕಣ್ಣೀರು ಹಾಕಿದ್ದಾರೆ. ದುಃಖದ ನಡುವೆಯೂ ತಂದೆಯ ಜೀವನ, ಸಾಧನೆ ಬಣ್ಣಿಸಿದ ಸಚಿವ ಈಶ್ವರ್ ಖಂಡ್ರೆ, ತಂದೆ ಅವರು ರಾತ್ರಿ 10.50 ನಿಮಿಷಕ್ಕೆ ನಿಧನರಾಗಿದ್ದಾರೆ. ಅವ್ರ ಆರೋಗ್ಯ ಚೇತರಿಕೆಯಾಗುತ್ತಿದೆ. ನಮ್ಮ ಮಧ್ಯೆ ಇನ್ನಷ್ಟು ದಿನ ಇರ್ತಾರೆ ಅಂತಾ ವಿಶ್ವಾಸವಿತ್ತು. ಆದ್ರೆ ಅದು ಸುಳ್ಳಾಯ್ತು ಎಂದು ಕಣ್ಣೀರಿಟ್ಟಿದ್ದಾರೆ.
103 ವರ್ಷಗಳ ಸಾರ್ಥಕ ಬದುಕನ್ನ ಭೀಮಣ್ಣ ಖಂಡ್ರೆ ಅವರು ಬದುಕಿದ್ದಾರೆ. ಅವ್ರು ಅನಾರೋಗ್ಯದಿಂದ ಬಳಲುತ್ತಿದ್ದಾಗೆ ಸಾವಿರಾರು ಜನ ಪ್ರಾರ್ಥನೆ, ಪೂಜೆ ಸಲ್ಲಿಸಿದ್ದಾರೆ. ನಾಡಿನ ಅನೇಕ ಮಠಾಧೀಶರು ಮನೆಗೆ ಭೇಟಿ ನೀಡಿ ನಮ್ಮ ತಂದೆಯವರ ಆರೋಗ್ಯ ವಿಚಾರಿಸಿದ್ದರು. ಮಠಾಧೀಶರು, ಅಭಿಮಾನಿಗಳಿಗೆ ಖಂಡ್ರೆಯವರ ಪರಿವಾರ ಚಿರ ಋಣಿಯಾಗಿದೆ. ಇಂದು ಸಂಜೆ ನಮ್ಮ ತಾಯಿಯವರ ಸಮಾಧಿ ಪಕ್ಕದಲ್ಲೇ ನಮ್ಮ ತಂದೆಯವರ ಅಂತ್ಯಕ್ರಿಯೆ ಮಾಡುತ್ತೇವೆ ಎಂದು ಈಶ್ವರ ಖಂಡ್ರೆ ತಿಳಿಸಿದ್ದಾರೆ .
ಕಾಂಗ್ರೆಸ್ ಪಕ್ಷದ ನಿಷ್ಠಾವಂತ ಮುಖಂಡರಾಗಿ ಪಕ್ಷ ಸಂಘಟನೆಗಾಗಿ ದುಡಿದಿದ್ದಾರೆ ಶಾಸಕರು, ವಿಧಾನ ಪರಿಷತ್ ಸದಸ್ಯರಾಗಿ, ವೀರಪ್ಪ ಮೋಯ್ಲಿ ಅವರ ಕ್ಯಾಬಿನೆಟ್ನಲ್ಲಿ ಸಾರಿಗೆ ಸಚಿವರಾಗಿದ್ರು. ಮಹಾಪುರುಷರ ಸುಪತ್ರನಾಗಿದ್ದು ನನ್ನ ಭಾಗ್ಯ, ಅವರು ತೋರಿದ ದಾರಿಯಲ್ಲಿ ಪ್ರಾಮಾಣಿಕವಾಗಿ ನಡೆಯುತ್ತೇನೆ ಎಂದು ಈಶ್ವರ್ ಖಂಡ್ರೆ ಅವರು ತಂದೆಯನ್ನ ನೆನೆದು ಭಾವಕರಾದ್ರು.
